ದಾವಣಗೆರೆ: ಜಗಳೂರು ತಾಲೂಕಿನ ಗೋಗುದ್ದು ಗ್ರಾಮದಲ್ಲಿ ಹೃದಯಾಘಾತದಿಂದ 15 ವರ್ಷದ ಮುಜಾಮಿಲ್ ಎಂಬ 9ನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ.
ಚಮನ್ ಸಾಬ್ ಮತ್ತು ಫಾತೀಮಾ ದಂಪತಿಯ ಪುತ್ರನಾಗಿದ್ದ ಮುಜಾಮಿಲ್, ಹನುಮಂತಪುರದ ರಾಜೀವ್ ಗಾಂಧಿ ವಸತಿ ಶಾಲೆಯಲ್ಲಿ ಓದುತ್ತಿದ್ದ. ರಜೆ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದ ಬಾಲಕ ಬೆಳಗಿನ ಜಾವ ಹೊರಗೆ ಹೋಗಿದ್ದಾಗ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಜೀವ ಕಳೆದುಕೊಂಡಿದ್ದಾರೆ.
ಪೋಷಕರಿಗೆ ಮಗನ ಮೃತ್ಯು ತುಂಬಾ ದುಃಖ ತಂದಿದ್ದು, ಸ್ಥಳೀಯ ಜಗಳೂರು ಪೊಲೀಸ್ ಠಾಣೆ ಪ್ರಕರಣದ ತನಿಖೆ ನಡೆಸುತ್ತಿದೆ.



