ನಟಿ ಸಮಂತಾ ರುತ್ ಪ್ರಭು ತಮ್ಮ ವೈಯಕ್ತಿಕ ಜೀವನದ ಕುರಿತು ಮತ್ತೆ ಬಾಯ್ಬಿಟ್ಟಿದ್ದಾರೆ. ನಿರ್ದೇಶಕ ರಾಜ್ ನಿಧಿಮೋರು ಜೊತೆಗಿನ ಎರಡನೇ ಮದುವೆಯ ಬಳಿಕ ಹಬ್ಬಿದ ವದಂತಿಗಳಿಗೆ ಅವರು ಸ್ಪಷ್ಟನೆ ನೀಡಿದ್ದಾರೆ.
2021ರ ಅಕ್ಟೋಬರ್‌ನಲ್ಲಿ ನಾಗ ಚೈತನ್ಯ ಜೊತೆ ವಿಚ್ಛೇದನ ಪಡೆದ ಸಮಂತಾ, 2019ರಲ್ಲಿ ರಾಜ್ ಪರಿಚಯವಾಗಿದ್ದ ಕಾರಣದಿಂದಲೇ ಕೆಲವರು ತಪ್ಪು ಅರ್ಥೈಸಿಕೊಂಡಿದ್ದರು. ರಾಜ್ ಜೊತೆಗಿನ ಪ್ರೀತಿಯೇ ಡಿವೋರ್ಸ್‌ಗೆ ಕಾರಣ ಎನ್ನುವ ಊಹೆಗಳಿಗೆ ಸಮಂತಾ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
“ವಿಚ್ಛೇದನ ಸಮಯದಲ್ಲಿ ನಾನು ಸಂಪೂರ್ಣವಾಗಿ ಒಳಗೆ ಕುಸಿದು ಹೋಗಿದ್ದೆ. ಹೊರ ಜಗತ್ತಿನಿಂದ ದೂರ ಉಳಿದಿದ್ದೆ. ಆದರೆ ರಾಜ್ ನೀಡಿದ ಪ್ರೀತಿ ಮತ್ತು ಆಪ್ಯಾಯತೆ ನನ್ನನ್ನು ಮತ್ತೆ ಬದುಕಿನತ್ತ ಕರೆದುಕೊಂಡು ಬಂತು,” ಎಂದು ಹೇಳಿದ್ದಾರೆ.
“ಮತ್ತೆ ಪ್ರೀತಿಯಲ್ಲಿ ಬೀಳಬಹುದು ಎಂದು ನಾನು ಭಾವಿಸಿರಲಿಲ್ಲ. ಆದರೆ ಜೀವನದಲ್ಲಿ ಕೆಲವು ಸಂಬಂಧಗಳು ನಮ್ಮ ದೃಷ್ಟಿಕೋನವನ್ನು ಬದಲಿಸುತ್ತವೆ,” ಎಂದು ಸಮಂತಾ ತಿಳಿಸಿದ್ದಾರೆ.
ಈ ಹೇಳಿಕೆಯಿಂದ ನಾಗ ಚೈತನ್ಯ ಜೊತೆ ಸಂಬಂಧದಲ್ಲಿದ್ದ ಅವಧಿಯಲ್ಲಿ ರಾಜ್ ಜೊತೆ ಕೇವಲ ವೃತ್ತಿಪರ ಸಂಬಂಧವಷ್ಟೇ ಇತ್ತು ಎಂಬುದು ಸ್ಪಷ್ಟವಾಗಿದೆ. ಸಮಂತಾ ಸ್ಪಷ್ಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಆರೋಪಗಳು ಗಪ್ ಚುಪ್ ಆಗಿವೆ.



