ದೆಹಲಿ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕರ್ನಾಟಕದಲ್ಲಿ ನೀರಾವರಿ ಯೋಜನೆಗಳು ವಿಳಂಬವಾಗಿರುವ ಬಗ್ಗೆ ಕಿಡಿಕಾರಿದ್ದಾರೆ.
ರಾಜ್ಯಸಭೆ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ಮತ್ತು ಮೇಕೆದಾಟು ಯೋಜನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸದ ಕಾರಣ ರಾಜ್ಯ ಸರ್ಕಾರವೇ ಉತ್ತರದಾಯಿಯಾಗಿದೆ; ಕೇಂದ್ರವನ್ನು ಅನಗತ್ಯವಾಗಿ ದೂರುತ್ತಿದೆ ಎಂದು ಹೇಳಿದರು.
ಎತ್ತಿನಹೊಳೆ ಯೋಜನೆಯ ವೆಚ್ಚ ಮೊದಲು 8,000 ಕೋಟಿ ರೂ. ಇದ್ದರೆ, ಈಗ 33,000 ಕೋಟಿ ರೂ. ಮೀರಿದೆ, ಆದರೂ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಿಗೆ ನೀರು ತಲುಪಿಲ್ಲ. ಹಾಸನ ಜಿಲ್ಲೆಯ ಸಕಲೇಶಪುರ ಹತ್ತಿರ ಅರಸೀಕೆರೆಗೂ ನೀರು ಬಂದಿಲ್ಲ. ಮೇಕೆದಾಟು ಯೋಜನೆ ಕಾರ್ಯಗತಗೊಳ್ಳುವುದಕ್ಕೆ ಕೇಂದ್ರದ ಅರಣ್ಯ, ಪರಿಸರ ನಿಯಮಗಳು, ಆನೆ ಕಾರಿಡಾರ್ ಹಾಗೂ ವನ್ಯಜೀವಿ ಸಂಕಷ್ಟಗಳು ಅಡ್ಡಿಯಾಗಿವೆ.
ರಾಜ್ಯ ಸರ್ಕಾರ ನಿರ್ಲಕ್ಷ್ಯದಿಂದ ಜನರಿಗೆ ಕೊಳಚೆ ನೀರು ನೀಡಲಾಗುತ್ತಿದೆ, ಬೆಳೆಗಳು ವಿಷಕಾರಿಯಾಗುತ್ತಿವೆ, ಮತ್ತು ಜನರಿಗೆ ಕಷ್ಟಗಳು ಹೆಚ್ಚಾಗುತ್ತಿವೆ ಎಂದು ಹೆಚ್.ಡಿ. ದೇವೇಗೌಡರು ಟೀಕಿಸಿದರು.



