ಬೆಂಗಳೂರು: ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಕಂಪನಿಯು ಆರ್‌ಸಿಬಿ ತಂಡದ ತನ್ನ ಒಡೆತನವನ್ನು ಸಂಪೂರ್ಣವಾಗಿ ಮಾರಾಟ ಮಾಡಿದ್ದು, ಆದಿತ್ಯ ಬಿರ್ಲಾ ಸಮೂಹ 16,706 ಕೋಟಿ ರೂಪಾಯಿಗೆ ಫ್ರಾಂಚೈಸಿಯನ್ನು ಖರೀದಿಸಿದೆ.
ಈ ಮೂಲಕ ಆದಿತ್ಯ ಬಿರ್ಲಾ ಹೊಸ ಕ್ಷೇತ್ರದಲ್ಲಿ ಕಾಲಿಟ್ಟಿದ್ದಾರೆ. ಖರೀದಿಯಲ್ಲಿ ಅಮೆರಿಕದ ಹೂಡಿಕೆದಾರ ಡೇವಿಡ್ ಬ್ಲಿಟ್ಝರ್, ಬೋಲ್ಟ್ ವೆಂಚರ್ಸ್, ಬ್ಲ್ಯಾಕ್‌ಸ್ಟೋನ್ ಇಕ್ವಿಟಿ ಫರ್ಮ್, ಟೈಮ್ಸ್ ಆಫ್ ಇಂಡಿಯಾ ಮಾಧ್ಯಮ ಸಮೂಹ ಸೇರಿದಂತೆ ಹಲವಾರು ಪಾಲುದಾರರು ಭಾಗಿಯಾಗಿದ್ದಾರೆ.
ಈ ಹಿನ್ನಲೆಯಲ್ಲಿ ಮಾಜಿ ಮಾಲೀಕ ವಿಜಯ್ ಮಲ್ಯ ಟ್ವೀಟ್ ಮೂಲಕ ಸಂತೋಷ ಹಂಚಿಕೊಂಡಿದ್ದಾರೆ. “2008ರಲ್ಲಿ ನಾನು RCB ಫ್ರಾಂಚೈಸಿಯನ್ನು 450 ಕೋಟಿ ರೂಪಾಯಿಗೆ ಖರೀದಿಸಿದ್ದೆ. ಬಹುತೇಕರು ನನ್ನ ಹೂಡಿಕೆಯನ್ನು ವ್ಯರ್ಥ ಎಂದು ಟೀಕಿಸಿದರು. ಆದರೆ ಈಗ ಅದೇ ಹೂಡಿಕೆ 16,500 ಕೋಟಿ ರೂಪಾಯಿಗಳಿಗೆ ಬೆಳೆದಿದೆ. RCB ಯಾವಾಗಲೂ ನನ್ನ DNA ಭಾಗವಾಗಿ ಉಳಿಯಲಿದೆ. ಹೊಸ ಮಾಲೀಕರಿಗೆ ಹೃತ್ಪೂರ್ವಕ ಅಭಿನಂದನೆಗಳು. ಎಲ್ಲಾ RCB ಅಭಿಮಾನಿಗಳು, ದಯವಿಟ್ಟು ನಮ್ಮ ಬೆಂಗಳೂರಿನ ಸಿಂಹವನ್ನು ಬೆಂಬಲಿಸಿ. ನಮಸ್ಕಾರ’ ಎಂದು ಅವರು ಕೋರಿದ್ದಾರೆ.
ಬಿಸಿಸಿಐ ಐಪಿಎಲ್ ಆರಂಭಿಸೋ ಸಂಧರ್ಭದಲ್ಲಿ ಫ್ರಾಂಚೈಸಿಗಳನ್ನು ಮಾಡಿ, ಮಾರಲು ಮುಂದಾಯಿತು. ಆಗ ಮಲ್ಯ ಎರಡು ಫ್ರಾಂಚೈಸಿ ನೀಡುವಂತೆ ಬೇಡಿಕೆ ಇಟ್ಟರು. ಆದರೆ, ಒಬ್ಬರಿಗೆ ಒಂದು ತಂಡ ಮಾತ್ರ ಖರೀದಿಸುವ ಅವಕಾಶ ನೀಡಲಾಯಿತು. ಅದರಂತೆ ಮಲ್ಯ 450 ಕೋಟಿ ರೂಪಾಯಿ ನೀಡಿ ಒಂದು ತಂಡ ಖರೀದಿ ಮಾಡಿದರು. ರಾಯಲ್ ಚಾಲೆಂಜ್ ವಿಸ್ಕಿ ಬ್ರ್ಯಾಂಡ್ ಪ್ರಚಾರ ಮಾಡೋದು ಇವರ ಉದ್ದೇಶ ಆಗಿತ್ತು.
ಈ ಕಾರಣದಿಂದ ರಾಯಲ್ ಚಾಲೆಂಜರ್ಸ್ ಅಂತ ಇಟ್ಟರು. ಮಲ್ಯಗೆ ಬೆಂಗಳೂರು ಹಿನ್ನೆಲೆ ಇರುವುದರಿಂದ ಬೆಂಗಳೂರು ಎಂಬುದನ್ನು ಸೇರಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ತಂಡಕ್ಕೆ ಹೆಸರು ಇಟ್ಟರು. ವಿರಾಟ್ ಕೊಹ್ಲಿ ಖರೀದಿಯಲ್ಲೂ ಅವರು ಪ್ರಮುಖ ಪಾತ್ರವಹಿಸಿದ್ದರು.



