ಇಸ್ಲಾಮಾಬಾದ್: ಕಳೆದ ಫೆಬ್ರವರಿಯಲ್ಲಿ ಸ್ನಾನಗೃಹದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಜಾವೇದ್ ಬಾಜ್ವಾ ಇದೀಗ ನಿಧನರಾಗಿದ್ದಾರೆ.
ಗಾಯಗೊಂಡಿದ್ದ ಅವರು ರಾವಲ್ಪಿಂಡಿ ಮಿಲಿಟರಿ ಆಸ್ಪತ್ರೆಯ ತೀವ್ರಾ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಶಕ್ತಿಶಾಲಿ ಸೇನಾ ನಾಯಕರಲ್ಲೊಬ್ಬರಾಗಿ ಗುರುತಿಸಿಕೊಂಡಿದ್ದ ಬಾಜ್ವಾ, 2016 ನವೆಂಬರ್ ರಿಂದ 2022 ನವೆಂಬರ್ ರವರೆಗೆ ಸೇನಾ ಮುಖ್ಯಸ್ಥರಾಗಿದ್ದರು. ಈ ಅವಧಿಯಲ್ಲೇ ಭಾರತ ಬಾಲಕೋಟ್ ಮೇಲೆ ಏರ್‌ಸ್ಟ್ರೈಕ್ ನಡೆಯಿತು. ಆಗ ಬಜ್ವಾ ತಮ್ಮ ಸಾರ್ವಜನಿಕ ಭಾಷಣದಲ್ಲಿ ಭಾರತ ನಮ್ಮ ಪ್ರಮುಖ ಶತ್ರು ಎಂದು ಹೇಳಿದ್ದರು.
ನಿವೃತ್ತಿ ನಂತರ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ಸಂಪನ್ಮೂಲ ಮತ್ತು ಇಂಧನ ಕೊರತೆಯಿಂದ ಪಾಕಿಸ್ತಾನ ಭಾರತ ವಿರುದ್ಧ ಯುದ್ಧ ಮಾಡುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದರು.



