ಬಿಗ್ ಬಾಸ್ ಕನ್ನಡ ಸೀಸನ್ 12 ವಿನ್ನರ್ ಗಿಲ್ಲಿ ನಟ ಮತ್ತೆ ಸದ್ದು ಮಾಡುತ್ತಿದ್ದಾರೆ! 2.2 ಮಿಲಿಯನ್ ಫಾಲೋವರ್ಸ್ ಹೊಂದಿರುವ ಈ ಸ್ಟಾರ್, ಈಗ ಸಂಪೂರ್ಣ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಒಮ್ಮೆಯೂ ಫಿಟ್ನೆಸ್ ಬಗ್ಗೆ ತಲೆಕೆಡಿಸಿಕೊಳ್ಳದ ಗಿಲ್ಲಿ, ಬಿಗ್ ಬಾಸ್ ಮನೆಯಲ್ಲಿ ಶಾರ್ಟ್ಸ್-ಬನಿಯನ್ ಲುಕ್‌ನಲ್ಲಿ ಸಿಂಪಲ್ ಆಗಿ ಇದ್ದದ್ದು ಎಲ್ಲರಿಗೂ ಗೊತ್ತು. ಸ್ಟೈಲ್, ಜಿಮ್—ಇವುಗಳ ಬಗ್ಗೆ ಅವರಿಗೆ ಅಷ್ಟೇನೂ ಆಸಕ್ತಿ ಇರಲಿಲ್ಲ. ರಘು ಎಷ್ಟು ಸಲ ಹೇಳಿದರೂ, ಗಿಲ್ಲಿ ಅದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಲಿಲ್ಲ.
ಆದರೆ ಈಗ ಗಿಲ್ಲಿ ಸಂಪೂರ್ಣ ಬದಲಾಗಿದೆ! ಫಿಟ್ನೆಸ್ ಟ್ರೇನರ್ ಕೌಶಿಕ್ ಗೌಡ ಶೇರ್ ಮಾಡಿದ ವಿಡಿಯೋದಲ್ಲಿ ಅವರು ಹೆವಿ ವರ್ಕೌಟ್ ಮಾಡುತ್ತಿರುವುದು ವೈರಲ್ ಆಗಿದೆ. ಈ ದೃಶ್ಯ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ.
“ಇದೀಗ ನಿಜವಾದ ಗಿಲ್ಲಿ ಶುರು!” “ಇನ್ಮೇಲೆ ಹೊಸ ಲೆಕ್ಕ!” ಎಂಬ ಕಾಮೆಂಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿವೆ.
ಈ ಸಡನ್ ಈ ಟ್ರಾನ್ಸ್‌ಫರ್ಮೇಶನ್ ಹೀರೋ ಎಂಟ್ರಿಗೆ ರೆಡಿಯಾಗಿರುವ ಸೂಚನೆಯಾ? ಅಥವಾ ಇನ್ನೇನಾದರೂ ದೊಡ್ಡ ಪ್ಲಾನ್ ಇದೆಯಾ? ಎನ್ನುವ ಪ್ರಶ್ನೆ ಈಗ ಹಾಟ್ ಟಾಪಿಕ್. ಆದರೆ, ಗಿಲ್ಲಿಗೆ ನಿರ್ದೇಶನದ ಮೇಲೆ ಹೆಚ್ಚು ಆಸಕ್ತಿ ಇದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಹೀರೋ ಆಗಲಿ, ನಿರ್ದೇಶಕ ಆಗಲಿ—ಗಿಲ್ಲಿಯ ಮುಂದಿನ ಸ್ಟೆಪ್ ಏನು ಅನ್ನೋದು ಈಗ ಎಲ್ಲರ ಕುತೂಹಲ!



