ಚಾಮರಾಜನಗರ: ಕೊಳ್ಳೇಗಾಲ ಹೊರವಲಯದಲ್ಲಿ ನಡೆದ ಡ್ರಗ್ಸ್ ಪಾರ್ಟಿ ಪ್ರಕರಣ ರಾಜ್ಯದ ಗಮನ ಸೆಳೆದಿದೆ. ರೌಡಿಶೀಟರ್ ಜಹೀರ್ ಜನ್ಮದಿನದ ಹೆಸರಿನಲ್ಲಿ ನಡೆದ ಈ ಪಾರ್ಟಿ, ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಸುಮಾರು 50ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಈ ಪಾರ್ಟಿಯಲ್ಲಿ ಗಾಂಜಾ, ಚರಸ್ ಸೇವನೆ ನಡೆದಿದ್ದು, ಎಲ್ಲರೂ ಮೋಜುಮಸ್ತಿಯಲ್ಲಿ ತೊಡಗಿದ್ದರೆಂದು ವರದಿಯಾಗಿದೆ. ಪೊಲೀಸರ ದಾಳಿ ನಡೆಸಿ ಸಂಭ್ರಮಕ್ಕೆ ಬ್ರೇಕ್ ಹಾಕಿದ್ದಾರೆ.
ಪಾರ್ಟಿಯಲ್ಲಿ ಒಟ್ಟು ಐವತ್ತು ಮಂದಿ ಭಾಗಿಯಾಗಿದ್ದು, ವೈದ್ಯಕೀಯ ಪರೀಕ್ಷೆಯ ಬಳಿಕ 15 ಮಂದಿಗೆ ಡ್ರಗ್ಸ್ ಸೇವನೆ ಮಾಡಿರುವುದು ದೃಢಪಟ್ಟಿದ್ದು ಇದು ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ನೀಡಿದೆ. ಈ ಪಾರ್ಟಿ ನಡೆದಿರುವುದು ಎ1 ಕಾಂಟ್ರಾಕ್ಟರ್ ಫಯಾಜ್ ಖಾನ್ ರೆಸಾರ್ಟ್ನಲ್ಲಿ ಎಂಬುದು ಮತ್ತಷ್ಟು ಸಂಚಲನ ಮೂಡಿಸಿದೆ.
ಪ್ರಭಾವಿ ಸಂಪರ್ಕಗಳಿದ್ದ ವ್ಯಕ್ತಿಯ ರೆಸಾರ್ಟ್ನಲ್ಲಿ ಈ ರೀತಿ ಪಾರ್ಟಿ ನಡೆದಿರುವುದು ಹಲವಾರು ಪ್ರಶ್ನೆಗಳನ್ನು ಎಬ್ಬಿಸಿದೆ. ಪಾರ್ಟಿಯಲ್ಲಿ ಜಹೀರ್ ಕುಟುಂಬ ಸದಸ್ಯರೂ ಇದ್ದಾರೆ ಎಂಬ ಮಾಹಿತಿ ಇನ್ನಷ್ಟು ಶಾಕ್ ನೀಡಿದೆ.
ಮಹಿಳೆಯರನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಲಾಗುತ್ತಿದ್ದು, ಪೊಲೀಸರ ತನಿಖೆ ಇನ್ನಷ್ಟು ಗಂಭೀರವಾಗಿದೆ. ಈಗ ಈ ಪ್ರಕರಣದಲ್ಲಿ ಇನ್ನೂ ಯಾರ ಹೆಸರು ಹೊರಬರುತ್ತದೆ? ಇನ್ನಷ್ಟು ದೊಡ್ಡ ಸಂಪರ್ಕಗಳು ಬಯಲಾಗುತ್ತವೆಯಾ? ಎಂಬ ಕುತೂಹಲ ಎಲ್ಲರಲ್ಲೂ ಹೆಚ್ಚಾಗಿದೆ.



