ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಇರಾನ್–ಅಮೆರಿಕ ನಡುವಿನ ಸಂಧಾನ ಮಾತುಕತೆ ಮತ್ತೊಮ್ಮೆ ವಿಫಲವಾಗಿದೆ. ಈ ಬೆಳವಣಿಗೆ ಹೂಡಿಕೆದಾರರನ್ನು ಸುರಕ್ಷಿತ ಹೂಡಿಕೆಗಳಾದ ಚಿನ್ನ ಮತ್ತು ಬೆಳ್ಳಿಯತ್ತ ಮುಖಮಾಡುವಂತೆ ಮಾಡಿದ್ದು, ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.
2026ರ ಏಪ್ರಿಲ್ 27, ಸೋಮವಾರದಂದು 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆಯಲ್ಲಿ ₹380 ಏರಿಕೆಯಾಗಿ ₹1,54,420ಕ್ಕೆ ತಲುಪಿದೆ. ಪ್ರತಿ ಗ್ರಾಂ ಬೆಲೆ ₹38 ಹೆಚ್ಚಾಗಿ ₹15,442 ದಾಖಲಾಗಿದೆ.
ಇನ್ನೊಂದೆಡೆ, 22 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ ಬೆಲೆ ₹35 ಏರಿಕೆಯಾಗಿ ₹14,155 ಆಗಿದ್ದು, 10 ಗ್ರಾಂ ಬೆಲೆ ₹350 ಏರಿಕೆಯಿಂದ ₹1,41,550ಕ್ಕೆ ಏರಿದೆ.
ಬೆಳ್ಳಿ ಬೆಲೆ ಮಾತ್ರ ಇಂದು ಸ್ಥಿರವಾಗಿದೆ. ಪ್ರತಿ ಗ್ರಾಂ ಬೆಲೆ ₹260 ಇದ್ದು, ಒಂದು ಕಿಲೋಗ್ರಾಂ ಬೆಲೆ ₹2,60,000 ಆಗಿದೆ.
ಇರಾನ್–ಅಮೆರಿಕ ನಡುವಿನ ಸಂಘರ್ಷ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯದ ಏರಿಳಿತಗಳು ಚಿನ್ನ ಮತ್ತು ಬೆಳ್ಳಿ ಬೆಲೆಗಳ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಮುಂದಿನ ದಿನಗಳಲ್ಲಿಯೂ ಬೆಲೆಯಲ್ಲಿ ಅಸ್ಥಿರತೆ ಮುಂದುವರಿಯುವ ಸಾಧ್ಯತೆ ಇದೆ.



