ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮುಂದುವರಿದಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ನಗರದ ಜನನಿಬಿಡ ಬನಶಂಕರಿ ಮೆಟ್ರೋ ನಿಲ್ದಾಣದ ಒಳಭಾಗಕ್ಕೂ ಮಳೆ ನೀರು ನುಗ್ಗಿದ್ದು ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸಿದ್ದಾರೆ. ಟಿಕೆಟ್ ಕೌಂಟರ್ ಸೇರಿದಂತೆ ಪ್ರಯಾಣಿಕರು ಸಂಚರಿಸುವ ಪ್ರದೇಶಗಳಲ್ಲಿ ನೀರು ನಿಂತಿದ್ದು, ಛಾವಣಿಯಿಂದ ನಿರಂತರವಾಗಿ ನೀರು ತೊಟ್ಟಿಕ್ಕುತ್ತಿರುವ ದೃಶ್ಯ ಕಂಡುಬಂದಿದೆ.
ಇದರ ಪರಿಣಾಮವಾಗಿ ಮೆಟ್ರೋ ಏರಲು ಬಂದ ಪ್ರಯಾಣಿಕರು ನಿಲ್ದಾಣದಲ್ಲೇ ಪರದಾಡುವಂತಾಗಿದೆ. ಮಳೆಯ ಅಬ್ಬರದಿಂದ ನಿಲ್ದಾಣದ ಸ್ವಚ್ಛತೆಗೂ ಧಕ್ಕೆಯಾಗಿದ್ದು, ಸಾರ್ವಜನಿಕರು ಮೆಟ್ರೋ ಸೇವೆ ಪಡೆಯಲು ಹರಸಾಹಸ ಪಡುತ್ತಿದ್ದಾರೆ.



