HomeBengaluru Newsಮಳೆ ನೀರಿಗೆ ಸರ್ಕಾರಿ ಫೈಲ್‌ಗಳು ನಾಶ: ಬಿಸಿಲಿನಲ್ಲಿ ಫೈಲ್‌ಗಳನ್ನು ಒಣಗಿಸುತ್ತಿರುವ ಸಿಬ್ಬಂದಿ!

ಮಳೆ ನೀರಿಗೆ ಸರ್ಕಾರಿ ಫೈಲ್‌ಗಳು ನಾಶ: ಬಿಸಿಲಿನಲ್ಲಿ ಫೈಲ್‌ಗಳನ್ನು ಒಣಗಿಸುತ್ತಿರುವ ಸಿಬ್ಬಂದಿ!

For Dai;y Updates Join Our whatsapp Group

Spread the love

ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಕಡತಗಳ ಸುರಕ್ಷತೆ ಅಧಿಕಾರಿಗಳ ಮೂಲಭೂತ ಜವಾಬ್ದಾರಿಯಾಗಿದ್ದರೂ, ನಗರದ ಕೆ.ಆರ್. ಸರ್ಕಲ್‌ನಲ್ಲಿರುವ ಲೋಕೋಪಯೋಗಿ ಇಲಾಖೆ (PWD) ಕಚೇರಿಯಲ್ಲಿ ಗಂಭೀರ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ.

ಮಳೆಯ ನೀರು ನುಗ್ಗಿದ ಪರಿಣಾಮ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ವ್ಯವಹಾರಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ಹಾನಿಗೊಂಡಿರುವ ಘಟನೆ ನಡೆದಿದೆ.

ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಕಚೇರಿಯ ನೆಲಮಹಡಿಗೆ ನೀರು ನುಗ್ಗಿದ್ದು, ಭೂಸ್ವಾಧೀನ ಹಾಗೂ ಪರಿಹಾರ ಕಾರ್ಯಗಳಿಗೆ ಸಂಬಂಧಿಸಿದ ಪ್ರಮುಖ ಕಡತಗಳು ಸಂಪೂರ್ಣವಾಗಿ ಒದ್ದೆಯಾಗಿವೆ. ದಾಖಲೆಗಳ ಮಹತ್ವ ಅರಿತಿದ್ದರೂ ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸದ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಸ್ಥಿತಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.

ಹಾನಿಗೊಂಡ ಕಡತಗಳನ್ನು ಪ್ರಸ್ತುತ ಕಚೇರಿಯ ಮುಂಭಾಗದಲ್ಲಿ ಬಿಸಿಲಿಗೆ ಒಣಗಿಸಲು ಇಡಲಾಗಿದ್ದು, ಕೆಲವು ದಾಖಲೆಗಳಲ್ಲಿನ ಬರಹಗಳು ಮತ್ತು ಅಧಿಕೃತ ಟಿಪ್ಪಣಿಗಳು ಅಳಿದುಹೋಗಿರುವ ಆತಂಕ ವ್ಯಕ್ತವಾಗಿದೆ. ಇದರಿಂದ ಆಡಳಿತಾತ್ಮಕ ವ್ಯವಹಾರಗಳ ಪಾರದರ್ಶಕತೆ ಮೇಲೆ ಪ್ರಶ್ನೆಗಳು ಉದ್ಭವಿಸಿವೆ.

ಕೋಟ್ಯಂತರ ರೂಪಾಯಿ ಮೌಲ್ಯದ ವ್ಯವಹಾರಗಳಿಗೆ ಸಂಬಂಧಿಸಿದ ಈ ದಾಖಲೆಗಳ ನಾಶದ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!