ಭಾರತದ ಸೂಪರ್ ಹಿಟ್ ‘ಧುರಂಧರ್’ ಸಿನಿಮಾಗೆ ಪ್ರತಿಯಾಗಿ ಪಾಕಿಸ್ತಾನಿ ಚಿತ್ರರಂಗ ನಿರ್ಮಿಸಿದ್ದ ‘ಮೇರಾ ಲಿಯಾರಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಂಪೂರ್ಣ ಕುಸಿದಿದೆ. ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ಈ ಸಿನಿಮಾ ಪ್ರೇಕ್ಷಕರ ಕೊರತೆಯಿಂದ ಕೆಲವೇ ದಿನಗಳಲ್ಲಿ ಥಿಯೇಟರ್ಗಳಿಂದ ಹೊರಬಿದ್ದಿದೆ.
ಕರಾಚಿಯ ಲಿಯಾರಿ ಪ್ರದೇಶದ ಕಥಾಹಂದರ ಹೊಂದಿದ್ದ ಈ ಚಿತ್ರವನ್ನು ಅಬು ಅಲಿಹಾ ನಿರ್ದೇಶಿಸಿದ್ದರು. ಆಯೇಷಾ ಒಮರ್ ಹಾಗೂ ದನನೀರ್ ಮೊಬೀನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರೂ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ವಿಫಲವಾಗಿದೆ. ವರದಿಗಳ ಪ್ರಕಾರ, ಅನೇಕ ಥಿಯೇಟರ್ಗಳಲ್ಲಿ ಸಿನಿಮಾ ನೋಡಲು ಜನವೇ ಬರದ ಸ್ಥಿತಿ ನಿರ್ಮಾಣವಾಗಿದ್ದು, ಒಟ್ಟು ಕೇವಲ 22 ಟಿಕೆಟ್ಗಳು ಮಾತ್ರ ಮಾರಾಟವಾಗಿವೆ.
ಪ್ರೇಕ್ಷಕರ ಕೊರತೆಯಿಂದಾಗಿ ಚಿತ್ರಮಂದಿರ ಮಾಲೀಕರು ಸಿನಿಮಾವನ್ನು ತೆಗೆದು ಬೇರೆ ಚಿತ್ರಗಳನ್ನು ಪ್ರದರ್ಶಿಸಲು ಆರಂಭಿಸಿದ್ದಾರೆ. ಸಿಂಧ್ ಸರ್ಕಾರ ಈ ಸಿನಿಮಾಗೆ ಪ್ರಚಾರಾತ್ಮಕ ಬೆಂಬಲ ನೀಡಿದ್ದರೂ ಅದು ಬಾಕ್ಸ್ ಆಫೀಸ್ನಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ.
ಭಾರತದ ‘ಧುರಂಧರ್’ ಸಿನಿಮಾ ಜಾಗತಿಕ ಮಟ್ಟದಲ್ಲಿ ಯಶಸ್ಸು ಕಂಡ ಬಳಿಕ ಲಿಯಾರಿ ಪ್ರದೇಶದ ನಕಾರಾತ್ಮಕ ಚಿತ್ರಣಕ್ಕೆ ಪ್ರತಿಕ್ರಿಯೆಯಾಗಿ ‘ಮೇರಾ ಲಿಯಾರಿ’ ಸಿನಿಮಾ ನಿರ್ಮಾಣವಾಗಿತ್ತು. ‘ಧುರಂಧರ್’ ಚಿತ್ರದಲ್ಲಿ ಲಿಯಾರಿ ಭಾಗದ ಗ್ಯಾಂಗ್ ವಾರ್, ಕ್ರೈಂ ನೆಟ್ವರ್ಕ್ ಮತ್ತು ಭಯೋತ್ಪಾದನೆಯ ಅಂಶಗಳನ್ನು ತೋರಿಸಲಾಗಿತ್ತು.
ಆದರೆ ಪಾಕಿಸ್ತಾನಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗಿದ್ದು, ಕಳಪೆ ನಿರೂಪಣೆ ಮತ್ತು ಮನರಂಜನಾ ಅಂಶದ ಕೊರತೆಯಿಂದಾಗಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ಗೆ ಗುರಿಯಾಗಿದೆ. ಭಾರತದ ಸಿನಿಮಾಗೆ ಟಕ್ಕರ್ ಕೊಡಲು ಹೊರಟ ಪಾಕಿಸ್ತಾನದ ಪ್ರಯತ್ನ ತನ್ನದೇ ನೆಲದಲ್ಲಿ ಕುಸಿದಿದೆ ಎನ್ನುವ ಚರ್ಚೆ ಜೋರಾಗಿದೆ.



