HomeCrime Newsಲೀಸ್ ಮನೆ ಕೊಡಿಸುವ ನೆಪದಲ್ಲಿ ₹200 ಕೋಟಿ ವಂಚನೆ: 300ಕ್ಕೂ ಹೆಚ್ಚು ಮಂದಿಗೆ ಟೋಪಿ ಹಾಕಿ...

ಲೀಸ್ ಮನೆ ಕೊಡಿಸುವ ನೆಪದಲ್ಲಿ ₹200 ಕೋಟಿ ವಂಚನೆ: 300ಕ್ಕೂ ಹೆಚ್ಚು ಮಂದಿಗೆ ಟೋಪಿ ಹಾಕಿ ಕಂಪನಿ ಮಾಲೀಕ ಪರಾರಿ

For Dai;y Updates Join Our whatsapp Group

Spread the love

ಬೆಂಗಳೂರು: ನಗರದಲ್ಲಿ ಲೀಸ್ ಮತ್ತು ಬಾಡಿಗೆ ಮನೆಗಳ ಬೇಡಿಕೆಯನ್ನೇ ಬಂಡವಾಳ ಮಾಡಿಕೊಂಡು ನೂರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

ಮನೆ ಸಿಗದವರಿಗೆ ಸಹಾಯ ಮಾಡುವ ನೆಪದಲ್ಲಿ ಕಾರ್ಯನಿರ್ವಹಿಸಿದ್ದ ಕಂಪನಿ, ಒಟ್ಟು 300ಕ್ಕೂ ಹೆಚ್ಚು ಜನರಿಗೆ 200 ಕೋಟಿಗೂ ಅಧಿಕ ವಂಚನೆ ಮಾಡಿರುವ ಆರೋಪ ಎದುರಿಸುತ್ತಿದೆ.

ನಗರದಲ್ಲಿ ಲೀಸ್ ಗೆ ಮನೆ ನೀಡುವವರ ಸಂಖ್ಯೆ ಕಡಿಮೆಯಾಗಿದ್ದು, ಬಾಡಿಗೆಗೆ ಮನೆ ನೀಡಲು ಆಸಕ್ತಿ ಹೊಂದಿರುವ ಮನೆ ಮಾಲೀಕರೇ ಹೆಚ್ಚಿದ್ದಾರೆ. ಇದೇ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡ ಕಂಪನಿ, ಬಾಡಿಗೆ ಕಟ್ಟಲು ಕಷ್ಟಪಡುವ ಜನರನ್ನೇ ಟಾರ್ಗೆಟ್ ಮಾಡಿತ್ತು.

‘ಜಾನ್ಸ್ ಅಸೆಟ್’ ಎಂಬ ಕಂಪನಿ, ಲೀಸ್‌ಗೆ ಮನೆ ಹುಡುಕುತ್ತಿರುವವರನ್ನು ಸಂಪರ್ಕಿಸಿ, “ನಿಮ್ಮ ಲೀಸ್ ಹಣ ನಮಗೆ ನೀಡಿ, ನಿಮ್ಮ ಮನೆ ಬಾಡಿಗೆಯನ್ನು ನಾವು ಪಾವತಿಸುತ್ತೇವೆ” ಎಂದು ನಂಬಿಸುತ್ತಿತ್ತು.

ಇದರಿಂದ ಲೀಸ್ ಹಣವೂ ಸುರಕ್ಷಿತವಾಗಿರುತ್ತದೆ, ಬಾಡಿಗೆ ಕಟ್ಟುವ ಹೊಣೆಗಾರಿಕೆಯೂ ತಪ್ಪುತ್ತದೆ ಎಂದು ನಂಬಿದ ಗ್ರಾಹಕರು, ತಲಾ 10 ಲಕ್ಷದಿಂದ 75 ಲಕ್ಷ ರೂಪಾಯಿ ವರೆಗೆ ಹಣ ಹೂಡಿಕೆ ಮಾಡಿದ್ದರು.

ಕಂಪನಿ ಗ್ರಾಹಕರೊಂದಿಗೆ ಲೀಸ್ ಅಗ್ರಿಮೆಂಟ್ ಮಾಡಿಕೊಂಡು, ಮನೆ ಮಾಲೀಕರ ಜೊತೆ ರೆಂಟಲ್ ಅಗ್ರಿಮೆಂಟ್ ಮಾಡುತ್ತಿತ್ತು. ಆರಂಭದಲ್ಲಿ ಕೆಲ ತಿಂಗಳು ಬಾಡಿಗೆ ಪಾವತಿಸಿ ವಿಶ್ವಾಸ ಗಳಿಸಿದ ಬಳಿಕ, ಹಣ ಪಾವತಿಯನ್ನು ಸ್ಥಗಿತಗೊಳಿಸಿ ವಂಚನೆ ನಡೆಸಿದೆ ಎನ್ನಲಾಗಿದೆ.

ಇದೇ ವೇಳೆ ಮನೆ ಖಾಲಿ ಮಾಡುವಂತೆ ಒತ್ತಾಯಕ್ಕೆ ಒಳಗಾದ ಮಹಿಳೆಯೊಬ್ಬರು ತಮ್ಮ ಹಣ ವಾಪಸ್ ಕೇಳಲು ಕಂಪನಿಯನ್ನು ಸಂಪರ್ಕಿಸಿದ್ದರು.

ಆದರೆ ಹಣ ಹಿಂದಿರುಗಿಸಲು ಸಾಧ್ಯವಿಲ್ಲ, ಅದನ್ನೇ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಲಾಭ ನೀಡುವುದಾಗಿ ಕಂಪನಿ ನಂಬಿಸಿತ್ತು. ಇದನ್ನು ನಂಬಿದ ಮಹಿಳೆ ತಮ್ಮ ಲೀಸ್ ಹಣವನ್ನು ಹೂಡಿಕೆಯಾಗಿಸಿ ಪರಿವರ್ತಿಸಿಕೊಂಡಿದ್ದರು.

ಮೊದಲ ಎರಡು ತಿಂಗಳು ಹಣ ಪಾವತಿಸಿದ ಕಂಪನಿ, ಬಳಿಕ ಪಾವತಿ ನಿಲ್ಲಿಸಿತ್ತು. ಇದೇ ರೀತಿಯಲ್ಲಿ ಹಲವು ಜನರಿಂದ ಲೀಸ್ ಹಣ ಪಡೆದು ವಂಚನೆ ನಡೆಸಿರುವ ಆರೋಪ ಕೇಳಿಬಂದಿದೆ.

ವಂಚನೆ ಬೆಳಕಿಗೆ ಬರುತ್ತಿದ್ದಂತೆ ಕಂಪನಿ ಮುಚ್ಚಿ, ಮಾಲೀಕ ಸ್ಟೀಫನ್ ಅರ್ಥರ್ ತಲೆಮರೆಸಿಕೊಂಡಿದ್ದಾನೆ. ಈ ಹಿಂದೆ ಕೂಡ ಸ್ಟೀಫನ್ ಅರ್ಥರ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು, ಸಿಸಿಬಿ ಪೊಲೀಸರು ಬಂಧಿಸಿದ್ದರೆಂಬ ಮಾಹಿತಿ ಇದೆ.

ಹಳೆ ಗ್ರಾಹಕರಿಗೆ ಹೊಸ ಗ್ರಾಹಕರ ಹಣದಿಂದ ಪಾವತಿ ಮಾಡಿ ವಂಚನೆ ಮುಂದುವರಿಸಿದ್ದ ಕಂಪನಿ, ಇದೀಗ ಸಂಪೂರ್ಣವಾಗಿ ನಾಪತ್ತೆಯಾಗಿದೆ. ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!