HomeSports Newsಲಕ್ನೋ ತಂಡದ ನಾಯಕ ಸ್ಥಾನದಿಂದ ಇಳಿದ ರಿಷಭ್ ಪಂತ್! ದಿಢೀರ್ ನಿರ್ಧಾರಕ್ಕೆ ಕಳಪೆ ಪ್ರದರ್ಶನ ಕಾರಣವಾ?

ಲಕ್ನೋ ತಂಡದ ನಾಯಕ ಸ್ಥಾನದಿಂದ ಇಳಿದ ರಿಷಭ್ ಪಂತ್! ದಿಢೀರ್ ನಿರ್ಧಾರಕ್ಕೆ ಕಳಪೆ ಪ್ರದರ್ಶನ ಕಾರಣವಾ?

For Dai;y Updates Join Our whatsapp Group

Spread the love

ಐಪಿಎಲ್ 2026ರ ಆವೃತ್ತಿ ಮುಕ್ತಾಯದ ಹಂತಕ್ಕೆ ತಲುಪುತ್ತಿರುವ ಬೆನ್ನಲ್ಲೇ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.

ತಂಡದ ನಾಯಕ ರಿಷಭ್ ಪಂತ್ ಅವರು ನಾಯಕತ್ವ ಸ್ಥಾನದಿಂದ ಕೆಳಗಿಳಿಯಲು ಸ್ವಯಂ ನಿರ್ಧಾರ ಕೈಗೊಂಡಿದ್ದಾರೆ.

ಈ ಸೀಸನ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ನಿರೀಕ್ಷಿತ ಪ್ರದರ್ಶನ ನೀಡದೆ 14 ಪಂದ್ಯಗಳಲ್ಲಿ ಕೇವಲ 4 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. ನಾಯಕತ್ವದ ಒತ್ತಡದ ನಡುವೆಯೂ ಪಂತ್ ಅವರ ವೈಯಕ್ತಿಕ ಬ್ಯಾಟಿಂಗ್ ಪ್ರದರ್ಶನವೂ ಕುಂಠಿತವಾಗಿತ್ತು.

ಪಂತ್ ಅವರು ತಾವಾಗಿಯೇ ಫ್ರಾಂಚೈಸಿಗೆ ನಾಯಕತ್ವದಿಂದ ಮುಕ್ತಿ ನೀಡುವಂತೆ ಮನವಿ ಮಾಡಿದ್ದು, ಅದನ್ನು ಲಕ್ನೋ ತಂಡ ಗೌರವಪೂರ್ವಕವಾಗಿ ಅಂಗೀಕರಿಸಿದೆ ಎಂದು ಕ್ರಿಕೆಟ್ ನಿರ್ದೇಶಕ ಟಾಮ್ ಮೂಡಿ ತಿಳಿಸಿದ್ದಾರೆ. “ತಂಡದ ಪುನರ್ರಚನೆ ಮತ್ತು ಮುಂದಿನ ಸೀಸನ್‌ಗೆ ಬಲಿಷ್ಠವಾಗಿ ಸಿದ್ಧಗೊಳ್ಳಲು ಇದು ಸಹಾಯಕವಾಗಲಿದೆ” ಎಂದು ಅವರು ಹೇಳಿದ್ದಾರೆ.

2025ರ ಮೆಗಾ ಹರಾಜಿನಲ್ಲಿ 27 ಕೋಟಿ ರೂ.ಗೆ ಪಂತ್ ಅವರನ್ನು ಖರೀದಿಸಿ ನಾಯಕನನ್ನಾಗಿ ಮಾಡಲಾಗಿತ್ತು. ಆದರೆ ನಿರೀಕ್ಷಿತ ಫಲಿತಾಂಶಗಳು ಲಭಿಸದೇ ಹೋದ ಹಿನ್ನೆಲೆಯಲ್ಲಿ ಈ ನಿರ್ಧಾರ ಮಹತ್ವ ಪಡೆದಿದೆ.

ಇತ್ತೀಚೆಗೆ ಭಾರತ ಟೆಸ್ಟ್ ತಂಡದ ಉಪನಾಯಕತ್ವದಿಂದಲೂ ಅವರನ್ನು ಕೈಬಿಡಲಾಗಿದ್ದು, ಇದೀಗ ನಾಯಕತ್ವದಿಂದ ದೂರ ಸರಿದಿರುವುದು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಮುಂದಿನ ಸೀಸನ್‌ಗೆ ಲಕ್ನೋ ತಂಡ ಹೊಸ ನಾಯಕನನ್ನು ಘೋಷಿಸುವ ಸಾಧ್ಯತೆ ಇದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!