ಕೆಆರ್ ಪುರ: ರಾಷ್ಟ್ರೀಯ ಹೆದ್ದಾರಿ-75ರ ಮೇಡಹಳ್ಳಿ ಬ್ರಿಡ್ಜ್ ಬಳಿ ವೀಲಿಂಗ್ ಪುಂಡರ ಅಟ್ಟಹಾಸ ಮತ್ತೆ ಮುಂದುವರಿದಿದೆ.
ರಾತ್ರಿ ಸಮಯದಲ್ಲಿ ಬೈಕ್‌ಗಳಲ್ಲಿ ಅಪಾಯಕರ ವೀಲಿಂಗ್ ಹಾಗೂ ಕಾರುಗಳಿಂದ ವಿಡಿಯೋ ಮತ್ತು ಫೋಟೋಶೂಟ್ ನಡೆಸುತ್ತಿರುವ ದೃಶ್ಯಗಳು ಸ್ಥಳೀಯರ ಗಮನ ಸೆಳೆದಿವೆ.
ಜೂನ್ 11ರ ರಾತ್ರಿ ಸುಮಾರು 10 ಗಂಟೆ ವೇಳೆಗೆ ನಡೆದ ಈ ಘಟನೆ ವೇಳೆ ವೀಲಿಂಗ್ ಗ್ಯಾಂಗ್ ರಸ್ತೆ ಮೇಲೆ ಅಪಾಯಕರವಾಗಿ ಸಂಚರಿಸಿರುವುದು ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಬಿದ್ದಿದೆ.
ಮೇಡಹಳ್ಳಿ ಬ್ರಿಡ್ಜ್ ಮೂಲಕ ಕೆಆರ್ ಪುರ ಭಾಗಕ್ಕೆ ಪ್ರವೇಶಿಸುವ ವೇಳೆ ಈ ಗ್ಯಾಂಗ್ ನಿರಂತರವಾಗಿ ನಿಯಮ ಉಲ್ಲಂಘನೆ ಮಾಡುತ್ತಿದ್ದು, ರಾತ್ರಿ ವೇಳೆಯಲ್ಲಿ ಇಂತಹ ಚಟುವಟಿಕೆಗಳು ಹೆಚ್ಚಾಗುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ವೀಲಿಂಗ್ ಪುಂಡರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಹೆದ್ದಾರಿಯಲ್ಲಿ ಸುರಕ್ಷತೆ ಹೆಚ್ಚಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.



