HomeBelgaumಸ್ನೇಹಿತನ ಪತ್ನಿ ಜೊತೆ ಪರಾರಿಯಾದ ಯುವಕ: ಮನೆ ಮೇಲೆ 200 ಮಂದಿಯ ಅಟ್ಟಹಾಸ, ಕುರಿ-ಚಿನ್ನ ದೋಚಿ...

ಸ್ನೇಹಿತನ ಪತ್ನಿ ಜೊತೆ ಪರಾರಿಯಾದ ಯುವಕ: ಮನೆ ಮೇಲೆ 200 ಮಂದಿಯ ಅಟ್ಟಹಾಸ, ಕುರಿ-ಚಿನ್ನ ದೋಚಿ ಪರಾರಿ

For Dai;y Updates Join Our whatsapp Group

ಬೆಳಗಾವಿ: ಜಿಲ್ಲೆಯ ಯಮಕನಮರಡಿ ಕ್ಷೇತ್ರದ ಭರಮ್ಯಾನಟ್ಟಿ ಗ್ರಾಮದಲ್ಲಿ ವೈಯಕ್ತಿಕ ವಿಚಾರವೊಂದು ಸಾಮೂಹಿಕ ಹಿಂಸಾಚಾರಕ್ಕೆ ತಿರುಗಿದೆ. ವಿವಾಹಿತೆ ನಾಗವ್ವ ಯುವಕ ಯಲ್ಲಪ್ಪನೊಂದಿಗೆ ಪರಾರಿಯಾಗಿದ್ದ ಘಟನೆಗೆ ಆಕ್ರೋಶಗೊಂಡ ಮಹಿಳೆಯ ಪೋಷಕರು ಹಾಗೂ ಪತಿಯ ಸಂಬಂಧಿಕರು ಸೇರಿ ಸುಮಾರು 200ಕ್ಕೂ ಅಧಿಕ ಮಂದಿ ಯಲ್ಲಪ್ಪನ ಮನೆ ಮೇಲೆ ದಾಳಿ ನಡೆಸಿ ಭೀಕರ ದಾಂಧಲೆ ನಡೆಸಿದ್ದಾರೆ.

ನಾಗವ್ವ ಕಳೆದ ವರ್ಷ ಬಸಪ್ಪ ನಾಯಕ ಅವರನ್ನು ವಿವಾಹವಾಗಿದ್ದರು. ಬಸಪ್ಪ ಹಾಗೂ ಯಲ್ಲಪ್ಪ ಆತ್ಮೀಯ ಸ್ನೇಹಿತರಾಗಿದ್ದು, ಇಬ್ಬರೂ ನಾಗವ್ವ ಜೊತೆಗೆ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇದೇ ವೇಳೆ ಯಲ್ಲಪ್ಪ ಮತ್ತು ನಾಗವ್ವ ನಡುವೆ ಸಲುಗೆ ಬೆಳೆದು, ಇಬ್ಬರೂ ಮನೆ ಬಿಟ್ಟು ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆಯ ಬೆನ್ನಲ್ಲೇ ಶಸ್ತ್ರಾಸ್ತ್ರಗಳನ್ನು ಹಿಡಿದು ಬಂದ ದುಷ್ಕರ್ಮಿಗಳ ಗುಂಪು ಯಲ್ಲಪ್ಪನ ಮನೆಗೆ ನುಗ್ಗಿ ಮನೆಯ ಹಂಚು, ಗೋಡೆ, ಪೀಠೋಪಕರಣಗಳು, ಟಿವಿ, ಅಲ್ಮಾರಿ ಸೇರಿದಂತೆ ಎಲ್ಲ ವಸ್ತುಗಳನ್ನು ಧ್ವಂಸಗೊಳಿಸಿದೆ. ಯಲ್ಲಪ್ಪನ ಪೋಷಕರು ಸೇರಿದಂತೆ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಲು ಯತ್ನಿಸಿದ್ದರೂ, ಅವರು ಪರಾರಿಯಾಗಿದ್ದರಿಂದ ಪ್ರಾಣಾಪಾಯ ತಪ್ಪಿದೆ.

ದಾಳಿಕೋರರು ಮನೆಯಿಂದ ಚಿನ್ನಾಭರಣ, ನಗದು ಹಣ ದೋಚಿಕೊಂಡು, ಕೊಟ್ಟಿಗೆಯಲ್ಲಿದ್ದ 25 ಕುರಿಗಳನ್ನೂ ಕೊಂಡೊಯ್ದಿರುವ ಆರೋಪ ಕೇಳಿಬಂದಿದೆ.

ಪ್ರಕರಣದ ಬಳಿಕ ಸಂತ್ರಸ್ತ ಕುಟುಂಬ ಬೆಳಗಾವಿ ಪೊಲೀಸ್ ಕಮಿಷನರ್ ಅವರನ್ನು ಸಂಪರ್ಕಿಸಿ, ದಾಳಿಯಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಮನವಿ ಮಾಡಿದೆ. ಪ್ರಕರಣದ ಕುರಿತು ಪೊಲೀಸ್ ತನಿಖೆ ಮುಂದುವರಿದಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img