HomeKarnataka Newsಸರ್ಕಾರಿ ಬಸ್ ಡಿಕ್ಕಿ; ಬೈಕ್‌ನಲ್ಲಿದ್ದ ಯುವಕ, ಚಿಕ್ಕಮ್ಮ ಸ್ಥಳದಲ್ಲೇ ದುರ್ಮರಣ!

ಸರ್ಕಾರಿ ಬಸ್ ಡಿಕ್ಕಿ; ಬೈಕ್‌ನಲ್ಲಿದ್ದ ಯುವಕ, ಚಿಕ್ಕಮ್ಮ ಸ್ಥಳದಲ್ಲೇ ದುರ್ಮರಣ!

For Dai;y Updates Join Our whatsapp Group

ಬೀದರ್: ಸರ್ಕಾರಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವಕ ಹಾಗೂ ಆತನ ಚಿಕ್ಕಮ್ಮ ಸ್ಥಳದಲ್ಲೇ ಮೃತಪಟ್ಟ ಘಟನೆ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಕಬಿರಾಬಾದ್ ವಾಡಿ ಕ್ರಾಸ್ ಬಳಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಈ ಅಪಘಾತ ಸಂಭವಿಸಿದ್ದು, ಮೃತರನ್ನು ದುಬಲಗುಂಡಿ ಗ್ರಾಮದ ಪವನ್ (22) ಹಾಗೂ ಅವರ ಚಿಕ್ಕಮ್ಮ ನರಸಮ್ಮ ಎಂದು ಗುರುತಿಸಲಾಗಿದೆ.

ಪವನ್ ತನ್ನ ಚಿಕ್ಕಮ್ಮ ನರಸಮ್ಮ ಅವರೊಂದಿಗೆ ಮನ್ನಾಏಖೇಳ್ಳಿ ಗ್ರಾಮಕ್ಕೆ ತೆರಳಿದ್ದರು. ಕಾಮಾಲೆ ರೋಗಕ್ಕೆ ನಾಟಿ ಔಷಧಿ ಪಡೆದು ಬೈಕ್‌ನಲ್ಲಿ ವಾಪಸ್ ಬರುತ್ತಿದ್ದ ವೇಳೆ ಬೀದರ್-ಕಲಬುರಗಿ ಮಾರ್ಗದ ಸರ್ಕಾರಿ ಸಾರಿಗೆ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಪವನ್ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ನರಸಮ್ಮ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹಳ್ಳಿಖೇಡ್ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆ ಸಂಬಂಧ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img