HomeBengaluru NewsKarnataka Dam Water Level: ಆಲಮಟ್ಟಿಯಲ್ಲಿ 101 ಟಿಎಂಸಿ ನೀರು ಸಂಗ್ರಹ, ವಾರಾಂತ್ಯಕ್ಕೆ ಭರ್ತಿಯಾಗುವ ಸಾಧ್ಯತೆ!

Karnataka Dam Water Level: ಆಲಮಟ್ಟಿಯಲ್ಲಿ 101 ಟಿಎಂಸಿ ನೀರು ಸಂಗ್ರಹ, ವಾರಾಂತ್ಯಕ್ಕೆ ಭರ್ತಿಯಾಗುವ ಸಾಧ್ಯತೆ!

For Dai;y Updates Join Our whatsapp Group

ಬೆಂಗಳೂರು: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಹಾಗೂ ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ.

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ ಜಲಾಶಯದಲ್ಲಿ ನೀರಿನ ಸಂಗ್ರಹ 100 ಟಿಎಂಸಿ ಗಡಿ ದಾಟಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.

ಆಲಮಟ್ಟಿ ಜಲಾಶಯದಲ್ಲಿ ಬುಧವಾರದ ವೇಳೆಗೆ ನೀರಿನ ಸಂಗ್ರಹ 101.37 ಟಿಎಂಸಿಗೆ ಏರಿಕೆಯಾಗಿದೆ. ಸದ್ಯ ಜಲಾಶಯಕ್ಕೆ 65,752 ಕ್ಯೂಸೆಕ್ ಒಳಹರಿವು ಇದ್ದು, 38,067 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದೇ ಪ್ರಮಾಣದಲ್ಲಿ ನೀರಿನ ಹರಿವು ಮುಂದುವರಿದರೆ ವಾರಾಂತ್ಯದೊಳಗೆ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ.

ಹೆಚ್ಚಿದ ಒಳಹರಿವಿನ ಹಿನ್ನೆಲೆಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮವು ನಾರಾಯಣಪುರದ ಬಸವಸಾಗರ ಜಲಾಶಯ ಭರ್ತಿ ಮಾಡುವ ಉದ್ದೇಶದಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುತ್ತಿದೆ.

ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ:

ಆಲಮಟ್ಟಿ ಜಲಾಶಯ (ವಿಜಯಪುರ)

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ನೀರಿನ ಮಟ್ಟ: 518.41 ಮೀಟರ್
  • ನೀರಿನ ಸಂಗ್ರಹ: 101.37 ಟಿಎಂಸಿ
  • ಒಳಹರಿವು: 65,752 ಕ್ಯೂಸೆಕ್
  • ಹೊರಹರಿವು: 38,067 ಕ್ಯೂಸೆಕ್

ಕೆಆರ್‌ಎಸ್ ಜಲಾಶಯ (ಮಂಡ್ಯ)

  • ಗರಿಷ್ಠ ಮಟ್ಟ: 124.80 ಅಡಿ
  • ಇಂದಿನ ನೀರಿನ ಮಟ್ಟ: 92.08 ಅಡಿ
  • ಒಟ್ಟು ಸಾಮರ್ಥ್ಯ: 49.452 ಟಿಎಂಸಿ
  • ಇಂದಿನ ಸಂಗ್ರಹ: 17.214 ಟಿಎಂಸಿ
  • ಒಳಹರಿವು: 703 ಕ್ಯೂಸೆಕ್
  • ಹೊರಹರಿವು: 1,800 ಕ್ಯೂಸೆಕ್

ಕಬಿನಿ ಜಲಾಶಯ (ಮೈಸೂರು)

  • ಇಂದಿನ ನೀರಿನ ಮಟ್ಟ: 72.85 ಅಡಿ
  • ನೀರಿನ ಸಂಗ್ರಹ: 13.12 ಟಿಎಂಸಿ
  • ಒಳಹರಿವು: 1,805 ಕ್ಯೂಸೆಕ್
  • ಹೊರಹರಿವು: 500 ಕ್ಯೂಸೆಕ್
  • ಕಳೆದ 24 ಗಂಟೆಗಳ ಮಳೆ: 10 ಮಿ.ಮೀ.

ಹೇಮಾವತಿ ಜಲಾಶಯ (ಹಾಸನ)

  • ಗರಿಷ್ಠ ಮಟ್ಟ: 2922 ಅಡಿ (37 ಟಿಎಂಸಿ)
  • ಇಂದಿನ ಮಟ್ಟ: 2904.57 ಅಡಿ
  • ನೀರಿನ ಸಂಗ್ರಹ: 22.767 ಟಿಎಂಸಿ
  • ಒಳಹರಿವು: 1,117 ಕ್ಯೂಸೆಕ್
  • ಹೊರಹರಿವು: 500 ಕ್ಯೂಸೆಕ್

ತುಂಗಭದ್ರಾ ಜಲಾಶಯ

  • ಗರಿಷ್ಠ ಮಟ್ಟ: 1633 ಅಡಿ
  • ಇಂದಿನ ನೀರಿನ ಮಟ್ಟ: 1604.55 ಅಡಿ
  • ಒಟ್ಟು ಸಾಮರ್ಥ್ಯ: 105.788 ಟಿಎಂಸಿ
  • ಇಂದಿನ ಸಂಗ್ರಹ: 28.002 ಟಿಎಂಸಿ
  • ಸರಾಸರಿ ಒಳಹರಿವು: 21,089 ಕ್ಯೂಸೆಕ್
  • ಪ್ರಸ್ತುತ ಒಳಹರಿವು: 24,821 ಕ್ಯೂಸೆಕ್

ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ಇನ್ನಷ್ಟು ನೀರು ಹರಿದು ಬರುವ ನಿರೀಕ್ಷೆಯಿದ್ದು, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ಆಶಾಭಾವನೆ ರೈತರಲ್ಲಿ ಮೂಡಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img