HomeIndia News3 ನಿಮಿಷದ Zoom ಕಾಲ್‌ನಲ್ಲಿ 900 ಮಂದಿಗೆ ಗೇಟ್‌ಪಾಸ್: 5 ವರ್ಷ ಬಳಿಕ CEOಗೇ ಮಂಡಳಿಯಿಂದ...

3 ನಿಮಿಷದ Zoom ಕಾಲ್‌ನಲ್ಲಿ 900 ಮಂದಿಗೆ ಗೇಟ್‌ಪಾಸ್: 5 ವರ್ಷ ಬಳಿಕ CEOಗೇ ಮಂಡಳಿಯಿಂದ ಗೇಟ್‌ಪಾಸ್

For Dai;y Updates Join Our whatsapp Group

ನ್ಯೂಯಾರ್ಕ್: ಕೋವಿಡ್ ಕಾಲದಲ್ಲಿ ಕೇವಲ ಮೂರು ನಿಮಿಷದ Zoom ಕಾಲ್ ಮೂಲಕ 900ಕ್ಕೂ ಹೆಚ್ಚು ಉದ್ಯೋಗಿಗಳನ್ನು ಏಕಾಏಕಿ ವಜಾಗೊಳಿಸಿ ಜಾಗತಿಕ ಸುದ್ದಿಯಾಗಿದ್ದ ಭಾರತ ಮೂಲದ ಉದ್ಯಮಿ ವಿಶಾಲ್ ಗರ್ಗ್ ಇದೀಗ ತಾವೇ ತಮ್ಮ ಹುದ್ದೆ ಕಳೆದುಕೊಂಡಿದ್ದಾರೆ. ‘ಬೆಟರ್ ಹೋಮ್ & ಫೈನಾನ್ಸ್’ ಕಂಪನಿಯ CEO ಆಗಿದ್ದ ವಿಶಾಲ್ ಗರ್ಗ್ ಅವರನ್ನು ಕಂಪನಿಯ ಆಡಳಿತ ಮಂಡಳಿಯೇ ಸರ್ವಾನುಮತದಿಂದ ವಜಾಗೊಳಿಸಿದೆ.

ವಿಶಾಲ್ ಗರ್ಗ್ ಅವರ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ, ಸ್ವಭಾವ ಹಾಗೂ ನಂಬಿಕಾರ್ಹತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ ಮಂಡಳಿ, ಅವರನ್ನು CEO ಹುದ್ದೆಯಿಂದ ತೆಗೆದುಹಾಕಲು ನಿರ್ಧರಿಸಿದೆ. ಕಂಪನಿಯ ಆರ್ಥಿಕ ಕಾರ್ಯಕ್ಷಮತೆಯೂ ಈ ಬೆಳವಣಿಗೆಗೆ ಪ್ರಮುಖ ಹಿನ್ನೆಲೆಯಾಗಿದೆ.

ವಿಶಾಲ್ ಗರ್ಗ್ ಅವರ ನಾಯಕತ್ವದಲ್ಲಿ 2022ರಿಂದ ಕಂಪನಿಯು ಸುಮಾರು 1.5 ಬಿಲಿಯನ್ ಡಾಲರ್ ನಿವ್ವಳ ನಷ್ಟ ಅನುಭವಿಸಿದೆ ಎಂದು ವರದಿಯಾಗಿದೆ. ಇದೇ ಅವಧಿಯಲ್ಲಿ ಕಂಪನಿಯ ಷೇರು ಮೌಲ್ಯ ಶೇ.90ಕ್ಕೂ ಹೆಚ್ಚು ಕುಸಿದಿದೆ.

2021ರ ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್‌ಗೆ ಕೆಲವೇ ದಿನಗಳಿರುವಾಗ ವಿಶಾಲ್ ಗರ್ಗ್ ಮೂರು ನಿಮಿಷಗಳ Zoom ವೆಬಿನಾರ್ ಮೂಲಕ 900ಕ್ಕೂ ಹೆಚ್ಚು ಉದ್ಯೋಗಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಿದ್ದರು. ಈ ನಿರ್ಧಾರಕ್ಕೆ ಜಾಗತಿಕ ಮಟ್ಟದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಘಟನೆಯ ಬಳಿಕ ಹಲವು ಹಿರಿಯ ಅಧಿಕಾರಿಗಳು ಕಂಪನಿಯಿಂದ ಹೊರನಡೆದಿದ್ದರು. ಕಂಪನಿಯ ಪ್ರತಿಷ್ಠೆಗೂ ದೊಡ್ಡ ಹೊಡೆತ ಬಿದ್ದಿತ್ತು.

ತಮ್ಮ ವರ್ತನೆಗೆ ವಿಶಾಲ್ ಗರ್ಗ್ ನಂತರ ಕ್ಷಮೆಯಾಚಿಸಿದ್ದರೂ, ವಿವಾದದ ಪರಿಣಾಮದಿಂದ ಕಂಪನಿಯ ಮೇಲಿನ ನಕಾರಾತ್ಮಕ ಭಾವನೆ ಸಂಪೂರ್ಣವಾಗಿ ದೂರವಾಗಲಿಲ್ಲ. ಇದರ ಬೆನ್ನಲ್ಲೇ ವ್ಯವಹಾರ ಕುಸಿತ ಹಾಗೂ ಷೇರು ಮೌಲ್ಯದ ಭಾರೀ ಇಳಿಕೆ ಅವರ ನಾಯಕತ್ವದ ಮೇಲೆ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿತು.

ಇದೀಗ ಕಂಪನಿಯ ಹಂಗಾಮಿ CEO ಆಗಿ ಡೇನಿಯಲ್ ಲೂಯಿಸ್ ಅವರನ್ನು ನೇಮಿಸಲಾಗಿದೆ. ಗಮನಾರ್ಹವೆಂದರೆ, ವಿಶಾಲ್ ಗರ್ಗ್ ಅವರೇ ಲೂಯಿಸ್ ಅವರನ್ನು ಕಂಪನಿಯೊಳಗೆ ಕರೆತಂದಿದ್ದರು ಎನ್ನಲಾಗಿದೆ. ನಂತರ ಅವರು ನಿರ್ದೇಶಕರ ಮಂಡಳಿಗೆ ಸೇರ್ಪಡೆಯಾಗಿದ್ದು, ಮಂಡಳಿಯ ಇತರ ಸದಸ್ಯರನ್ನು ವಿಶಾಲ್ ಗರ್ಗ್ ಅವರನ್ನು ವಜಾಗೊಳಿಸುವ ನಿರ್ಧಾರದತ್ತ ಕರೆದೊಯ್ದರು ಎಂಬ ಮಾಹಿತಿ ಇದೆ.

ವಜಾಗೊಂಡಿರುವುದನ್ನು ಪ್ರಶ್ನಿಸಿರುವ ವಿಶಾಲ್ ಗರ್ಗ್ ಇದೀಗ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಕಂಪನಿಯನ್ನು ಮತ್ತೆ ಲಾಭದ ಹಾದಿಗೆ ತರುವವರೆಗೆ ವರ್ಷಕ್ಕೆ ಕೇವಲ ಒಂದು ಡಾಲರ್ ವೇತನಕ್ಕೆ ಕೆಲಸ ಮಾಡಲು ಸಿದ್ಧ ಎಂದು ಹೇಳುವ ಮೂಲಕ CEO ಹುದ್ದೆಯನ್ನು ಮರಳಿ ಪಡೆಯುವ ಪ್ರಯತ್ನ ನಡೆಸುತ್ತಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img