HomeKarnataka Newsನಕಲಿ ಔಷಧಿ ಜಾಲ: ಹಿಮಾಚಲ, ತೆಲಂಗಾಣ, ದೆಹಲಿ ಸೇರಿ 5 ರಾಜ್ಯಗಳಿಗೆ ಲಿಂಕ್! ತನಿಖೆಗೆ ಪ್ರತ್ಯೇಕ...

ನಕಲಿ ಔಷಧಿ ಜಾಲ: ಹಿಮಾಚಲ, ತೆಲಂಗಾಣ, ದೆಹಲಿ ಸೇರಿ 5 ರಾಜ್ಯಗಳಿಗೆ ಲಿಂಕ್! ತನಿಖೆಗೆ ಪ್ರತ್ಯೇಕ ತಂಡ ರಚನೆ

For Dai;y Updates Join Our whatsapp Group

ಬೆಂಗಳೂರು: ನಕಲಿ ಔಷಧಿ ಜಾಲ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಜಾಲ ಐದು ರಾಜ್ಯಗಳಿಗೆ ಲಿಂಕ್ ಇರುವುದು ತನಿಖೆಯಿಂದ ಬಯಲಾಗಿದೆ. ಹಿಮಾಚಲ ಪ್ರದೇಶ, ತೆಲಂಗಾಣ, ದೆಹಲಿ, ಚೆನ್ನೈ, ಆಂಧ್ರಪ್ರದೇಶ ರಾಜ್ಯಗಳಿಗೆ ನಕಲಿ ಔಷಧಿ ಜಾಲ ಲಿಂಕ್ ಇರುವ ಬಗ್ಗೆ ತಿಳಿದುಬಂದಿದೆ.

5 ರಾಜ್ಯಗಳಲ್ಲಿ ಜಾಲ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಡ್ರಗ್ ಕಂಟ್ರೋಲರ್‌ಗಳ ಐದು ತಂಡಗಳನ್ನು ರಚಿಸಿ ತನಿಖೆ ನಡೆಸಲಾಗುತ್ತಿದೆ. ಈ ತನಿಖಾ ತಂಡಗಳು ಐದು ರಾಜ್ಯಗಳಿಗೆ ಭೇಟಿ ನೀಡಲಿವೆ.

ಐದು ರಾಜ್ಯಗಳ ಕಂಪನಿಯ ಲೇಬಲ್ ಇರುವುದು ಬಯಲಾಗಿದ್ದು, ಪ್ರಕರಣ ಸಂಬಂಧ ಅಧಿಕಾರಿಗಳು ಐದು ರಾಜ್ಯಗಳಿಂದ ಮಾಹಿತಿ ಸಂಗ್ರಹ ಮಾಡಲಿದ್ದಾರೆ. ಐದು ರಾಜ್ಯದ ಕಂಪನಿಗಳಿಗೂ ಲೆಟರ್ ಹೆಡ್ ರೆಡಿ ಮಾಡಿ ಮಾಹಿತಿ ಕೋರಲಿದ್ದಾರೆ. ಔಷಧಿ ಮೇಲೆ ಆಯಾ ಕಂಪನಿಯ ಲೇಬಲ್ ಇದ್ದು, ಅನಧಿಕೃತವಾಗಿ ಪ್ಯಾಕಿಂಗ್ ಆಗುತ್ತಿದೆಯೇ ಎಂಬ ಬಗ್ಗೆ ತನಿಖೆ ನಡೆಯಲಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img