HomeBengaluru Newsರಾಜ್ಯದಲ್ಲಿ H1N1 ಹಾವಳಿ! 8 ತಿಂಗಳಲ್ಲಿ 4,125 ಕೇಸ್; ಬೆಂಗಳೂರಿನಲ್ಲಿ ಅತಿ ಹೆಚ್ಚು!

ರಾಜ್ಯದಲ್ಲಿ H1N1 ಹಾವಳಿ! 8 ತಿಂಗಳಲ್ಲಿ 4,125 ಕೇಸ್; ಬೆಂಗಳೂರಿನಲ್ಲಿ ಅತಿ ಹೆಚ್ಚು!

For Dai;y Updates Join Our whatsapp Group

ಬೆಂಗಳೂರು: ರಾಜ್ಯದಲ್ಲಿ H1N1, ಅಂದರೆ ಹಂದಿಜ್ವರ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಜನವರಿಯಿಂದ ಆಗಸ್ಟ್‌ವರೆಗೆ ಒಟ್ಟು 4,125 ಪ್ರಕರಣಗಳು ವರದಿಯಾಗಿವೆ.

ಇದರಿಂದ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, H1N1 ನಿಯಂತ್ರಣಕ್ಕೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ರಾಜ್ಯದ ಒಟ್ಟು ಪ್ರಕರಣಗಳಲ್ಲಿ ಹೆಚ್ಚಿನ ಪ್ರಕರಣಗಳು ಬೆಂಗಳೂರಿನಲ್ಲೇ ದಾಖಲಾಗಿವೆ. ಬೆಂಗಳೂರು ಜಿಬಿಎ ವ್ಯಾಪ್ತಿಯಲ್ಲಿ 2,033 ಹಾಗೂ ಬೆಂಗಳೂರು ನಗರದಲ್ಲಿ 982 ಪ್ರಕರಣಗಳು ವರದಿಯಾಗಿವೆ.

ಬೆಂಗಳೂರು ಸೇರಿದಂತೆ ರಾಜ್ಯದ 15 ಜಿಲ್ಲೆಗಳಲ್ಲಿ H1N1 ಪ್ರಕರಣಗಳು ಹೆಚ್ಚಾಗುತ್ತಿರುವುದು ಆರೋಗ್ಯ ಇಲಾಖೆಗೆ ಆತಂಕ ಮೂಡಿಸಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?

  • ಬೆಂಗಳೂರು ಜಿಬಿಎ: 2,033
  • ಬೆಂಗಳೂರು ನಗರ: 982
  • ಉಡುಪಿ: 293
  • ಮೈಸೂರು: 184
  • ಶಿವಮೊಗ್ಗ: 91
  • ದಕ್ಷಿಣ ಕನ್ನಡ: 87
  • ಬಳ್ಳಾರಿ: 51
  • ಬೆಳಗಾವಿ: 45
  • ಉತ್ತರ ಕನ್ನಡ: 41
  • ಮಂಡ್ಯ: 31
  • ಹಾವೇರಿ: 26
  • ಬೆಂಗಳೂರು ಗ್ರಾಮಾಂತರ: 26
  • ಬೆಂಗಳೂರು ದಕ್ಷಿಣ: 26
  • ದಾವಣಗೆರೆ: 23
  • ಚಾಮರಾಜನಗರ: 20

H1N1 ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಮಾರ್ಗಸೂಚಿ:

H1N1 ಸೋಂಕು ದೃಢಪಟ್ಟವರು ಮನೆಯಲ್ಲಿ ಪ್ರತ್ಯೇಕವಾಗಿರಬೇಕು. ಸೋಂಕು ಹರಡುವುದನ್ನು ತಡೆಯಲು ಮಾಸ್ಕ್ ಧರಿಸಬೇಕು ಹಾಗೂ ಸೋಪ್ ಅಥವಾ ಸ್ಯಾನಿಟೈಸರ್ ಬಳಸಿ ಆಗಾಗ ಕೈಗಳನ್ನು ಸ್ವಚ್ಛಗೊಳಿಸಬೇಕು.

ಬಿಸಿ ನೀರು ಸೇವಿಸುವಂತೆ ಸೂಚಿಸಲಾಗಿದ್ದು, ಮೂಗು ಹಾಗೂ ಕಣ್ಣುಗಳನ್ನು ಪದೇಪದೇ ಕೈಯಿಂದ ಮುಟ್ಟಿಕೊಳ್ಳಬಾರದು. ವೈದ್ಯರ ಸಲಹೆಯಿಲ್ಲದೆ ಸ್ವಯಂ ಔಷಧ ಸೇವನೆ ಮಾಡಬಾರದು.

ರೋಗದ ಲಕ್ಷಣಗಳು ಕಂಡುಬಂದರೆ ಇತರರೊಂದಿಗೆ ಹಸ್ತಲಾಘವ ಮಾಡದಿರುವುದು ಹಾಗೂ ಜನಸಂದಣಿ ಇರುವ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ ಬಳಸುವಂತೆ ತಿಳಿಸಲಾಗಿದೆ.

ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗದಂತೆ ಸಾರ್ವಜನಿಕರು ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img