HomeSports Newsಟಿ20 ಕ್ರಿಕೆಟ್ʼನಲ್ಲಿ ಕೀರನ್ ಪೊಲ್ಲಾರ್ಡ್ ಹೊಸ ದಾಖಲೆ: ಜೋಸ್ ಬಟ್ಲರ್ ಹಿಂದಿಕ್ಕಿ ಮತ್ತೊಮ್ಮೆ ನಂಬರ್ 1...

ಟಿ20 ಕ್ರಿಕೆಟ್ʼನಲ್ಲಿ ಕೀರನ್ ಪೊಲ್ಲಾರ್ಡ್ ಹೊಸ ದಾಖಲೆ: ಜೋಸ್ ಬಟ್ಲರ್ ಹಿಂದಿಕ್ಕಿ ಮತ್ತೊಮ್ಮೆ ನಂಬರ್ 1 ಸ್ಥಾನಕ್ಕೇರಿದ ‘ಪವರ್ ಹಿಟ್ಟರ್’

For Dai;y Updates Join Our whatsapp Group

ಸೈಂಟ್ ಲೂಸಿಯಾ: ವೆಸ್ಟ್ ಇಂಡೀಸ್‌ನ ಮಾಜಿ ಆಲ್ರೌಂಡರ್ ಕೀರನ್ ಪೊಲ್ಲಾರ್ಡ್ ಟಿ20 ಕ್ರಿಕೆಟ್‌ನಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ದಾಖಲೆಯನ್ನು ಮತ್ತೆ ತಮ್ಮ ಹೆಸರಿಗೆ ಬರೆದುಕೊಂಡಿರುವ ಪೊಲ್ಲಾರ್ಡ್, ಇಂಗ್ಲೆಂಡ್‌ನ ಜೋಸ್ ಬಟ್ಲರ್ ಅವರನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನಕ್ಕೇರಿದ್ದಾರೆ.

ಸೈಂಟ್ ಲೂಸಿಯಾ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಟ್ರಿನ್‌ಬಾಗೋ ನೈಟ್ ರೈಡರ್ಸ್ ಪರ ಕಣಕ್ಕಿಳಿದ 39 ವರ್ಷದ ಕೀರನ್ ಪೊಲ್ಲಾರ್ಡ್ ಕೇವಲ 26 ಎಸೆತಗಳಲ್ಲಿ ಸ್ಫೋಟಕ 65 ರನ್‌ಗಳ ಇನಿಂಗ್ಸ್ ಆಡಿದರು. ಈ ಭರ್ಜರಿ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಅವರು ಜೋಸ್ ಬಟ್ಲರ್ ಅವರ 14,890 ರನ್‌ಗಳ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಪೊಲ್ಲಾರ್ಡ್ ಇದೀಗ 749 ಟಿ20 ಪಂದ್ಯಗಳ 666 ಇನಿಂಗ್ಸ್‌ಗಳಲ್ಲಿ ಒಟ್ಟು 14,921 ರನ್ ಗಳಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿದ ಬ್ಯಾಟರ್ ಆಗಿ ಮತ್ತೊಮ್ಮೆ ಅಗ್ರಸ್ಥಾನ ಅಲಂಕರಿಸಿದ್ದಾರೆ.

ಅಂದಹಾಗೆ, ಈ ವರ್ಷದ ಆರಂಭದಲ್ಲೇ ಕೀರನ್ ಪೊಲ್ಲಾರ್ಡ್ ‘ಯೂನಿವರ್ಸಲ್ ಬಾಸ್’ ಖ್ಯಾತಿಯ ಕ್ರಿಸ್ ಗೇಲ್ ಅವರ ಹೆಸರಿನಲ್ಲಿದ್ದ ಗರಿಷ್ಠ ಟಿ20 ರನ್‌ಗಳ ದಾಖಲೆಯನ್ನು ಮುರಿದಿದ್ದರು. ಆದರೆ 2026ರ ಆಗಸ್ಟ್‌ನಲ್ಲಿ ಇಂಗ್ಲೆಂಡ್‌ನ ಮಾಜಿ ನಾಯಕ ಜೋಸ್ ಬಟ್ಲರ್, ದಿ ಹಂಡ್ರೆಡ್ ಟೂರ್ನಿಯಲ್ಲಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಪರ ಆಡುತ್ತಾ ಪೊಲ್ಲಾರ್ಡ್ ಅವರನ್ನು ಹಿಂದಿಕ್ಕಿದ್ದರು.

ಇದೀಗ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಪೊಲ್ಲಾರ್ಡ್, ಮತ್ತೆ ಬಟ್ಲರ್ ಅವರನ್ನು ಹಿಂದಿಕ್ಕಿ ಟಿ20 ಕ್ರಿಕೆಟ್‌ನ ನಂಬರ್ ಒನ್ ರನ್ ಸ್ಕೋರರ್ ಆಗಿದ್ದಾರೆ.

ಜೋಸ್ ಬಟ್ಲರ್ ಅವರ ದಾಖಲೆಯನ್ನು ಮುರಿಯಲು ಪೊಲ್ಲಾರ್ಡ್ ಅವರಿಗೆ ಕೇವಲ 35 ರನ್‌ಗಳ ಅಗತ್ಯವಿತ್ತು. ಆದರೆ ಅವರು 26 ಎಸೆತಗಳಲ್ಲೇ 65 ರನ್ ಸಿಡಿಸುವ ಮೂಲಕ ಈ ಗುರಿಯನ್ನು ಸುಲಭವಾಗಿ ದಾಟಿದ್ದಾರೆ.

15 ಸಾವಿರ ರನ್‌ಗಳ ವಿಶ್ವದಾಖಲೆಯತ್ತ ಪೊಲ್ಲಾರ್ಡ್

ಇದೀಗ ಕೀರನ್ ಪೊಲ್ಲಾರ್ಡ್ ಟಿ20 ಕ್ರಿಕೆಟ್‌ನಲ್ಲಿ 15,000 ರನ್‌ಗಳ ಗಡಿ ತಲುಪುವ ಸನಿಹದಲ್ಲಿದ್ದಾರೆ. ಈ ಐತಿಹಾಸಿಕ ಮೈಲಿಗಲ್ಲು ತಲುಪಲು ಅವರಿಗೆ ಇನ್ನು ಕೇವಲ 79 ರನ್‌ಗಳ ಅಗತ್ಯವಿದೆ.

ಶುಕ್ರವಾರ ಇದೇ ಮೈದಾನದಲ್ಲಿ ಬಾರ್ಬಡೋಸ್ ಟ್ರಿಡೆಂಟ್ಸ್ ವಿರುದ್ಧ ಟ್ರಿನ್‌ಬಾಗೋ ನೈಟ್ ರೈಡರ್ಸ್ ಪರ ಪೊಲ್ಲಾರ್ಡ್ ಕಣಕ್ಕಿಳಿಯಲಿದ್ದಾರೆ. ಈ ಪಂದ್ಯದಲ್ಲಿ 79 ರನ್ ಗಳಿಸಿದರೆ, ಟಿ20 ಕ್ರಿಕೆಟ್ ಇತಿಹಾಸದಲ್ಲಿ 15,000 ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ಅಪರೂಪದ ವಿಶ್ವದಾಖಲೆಯನ್ನು ಪೊಲ್ಲಾರ್ಡ್ ತಮ್ಮ ಹೆಸರಿಗೆ ಬರೆದುಕೊಳ್ಳಲಿದ್ದಾರೆ.

ಈ ಮೂಲಕ ಈಗಾಗಲೇ ಟಿ20 ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿರುವ ಕೀರನ್ ಪೊಲ್ಲಾರ್ಡ್, ಮತ್ತೊಂದು ಐತಿಹಾಸಿಕ ಸಾಧನೆಯ ಹೊಸ್ತಿಲಲ್ಲಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img