ಗದಗ: ತಾಲೂಕಿನ ಮಲ್ಲಸಮುದ್ರ ಗ್ರಾಮದ ಲಿಟಲ್ ಚಾಂಪ್ಸ್ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ವಿಶೇಷ ನೃತ್ಯ ಕಾರ್ಯಕ್ರಮ ನಡೆಯಿತು. ಕೃಷ್ಣನ ವೇಷದಲ್ಲಿ ಅಮರ್ಥ್ಯ ಹುಣಸಿಮರದ ಹಾಗೂ ರಾಧೆಯ ವೇಷದಲ್ಲಿ ಶ್ರೇಯಾ ಕಡ್ಲಿಮಟ್ಟಿ ಆಕರ್ಷಕವಾಗಿ ಕುಣಿದು ಎಲ್ಲರ ಗಮನ ಸೆಳೆದರು. ಪುಟಾಣಿಗಳ ಸಂಭ್ರಮದ ನೃತ್ಯ ಕಾರ್ಯಕ್ರಮಕ್ಕೆ ಪಾಲಕರು ಹಾಗೂ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು. ಕೃಷ್ಣ-ರಾಧೆಯ ವೇಷಭೂಷಣದಲ್ಲಿ ಮಕ್ಕಳು ಸಂಭ್ರಮಿಸಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

