HomeKarnataka Newsಪಾವಗಡದಲ್ಲಿ ನಕಲಿ ನಕ್ಸಲ್ ಕಾಟ; 5 ಲಕ್ಷ ರೂ.ಗೆ ರೈತ ಕುಟುಂಬಕ್ಕೆ ಬೆದರಿಕೆ!

ಪಾವಗಡದಲ್ಲಿ ನಕಲಿ ನಕ್ಸಲ್ ಕಾಟ; 5 ಲಕ್ಷ ರೂ.ಗೆ ರೈತ ಕುಟುಂಬಕ್ಕೆ ಬೆದರಿಕೆ!

For Dai;y Updates Join Our whatsapp Group

ತುಮಕೂರು: ರೈತರ ಪಂಪ್‌ಸೆಟ್‌ಗೆ ಬಾಂಬ್ ಇಟ್ಟು ಸ್ಫೋಟಿಸಿದ್ದಾನೆ ಎನ್ನಲಾದ ನಕಲಿ ನಕ್ಸಲ್ ಕನಕಲ ಬಂಡೆ ವೆಂಕಟೇಶ್ ವಿರುದ್ಧ ಇದೀಗ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. 5 ಲಕ್ಷ ರೂಪಾಯಿ ಹಣ ನೀಡುವಂತೆ ರೈತ ಕುಟುಂಬಕ್ಕೆ ಬೆದರಿಕೆ ಪತ್ರ ಕಳುಹಿಸಲಾಗಿದೆ.

ಪಾವಗಡ ತಾಲೂಕಿನ ಗಂಗಸಾಗರದ ಮುತ್ತವ್ವ ಭೂಷಪ್ಪ ಎಂಬುವವರ ತೋಟದ ಶೆಡ್ ಬಾಗಿಲಿಗೆ ಬೆದರಿಕೆ ಪತ್ರ ಅಂಟಿಸಲಾಗಿದೆ. ಸಿಪಿಐ(ಎಂಎಲ್), ಸಿಪಿಎಂ ಪೀಪಲ್ ವಾರ್ ಜನಶಕ್ತಿ ಪಾರ್ಟಿ ಹೆಸರಿನಲ್ಲಿ ತೆಲುಗಿನಲ್ಲಿ ಪತ್ರ ಬರೆಯಲಾಗಿದೆ ಎನ್ನಲಾಗಿದೆ.

ಸೆಪ್ಟೆಂಬರ್ 16ರೊಳಗೆ 5 ಲಕ್ಷ ರೂಪಾಯಿ ಹಣವನ್ನು ವಕೀಲ ಸುಬ್ಬರಾಯಪ್ಪ ಅವರ ಬಳಿ ಕಳಿಸಬೇಕು. ಬಳಿಕ ಆ ಹಣವನ್ನು ಕ್ರಾಮೆಡ್ ದೇವಣ್ಣ ದಳಂಗೆ ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕನಕಲ ಬಂಡೆ ವೆಂಕಟೇಶ್ ವಿರುದ್ಧ ಹಲವು ಪ್ರಕರಣಗಳಿದ್ದು, ಅವುಗಳನ್ನು ನಡೆಸಲು ಹಣದ ಅಗತ್ಯವಿದೆ ಎಂದೂ ಪತ್ರದಲ್ಲಿ ಬರೆಯಲಾಗಿದೆ ಎನ್ನಲಾಗಿದೆ.

ಬೆದರಿಕೆ ಪತ್ರದಿಂದ ಆತಂಕಗೊಂಡ ಮುತ್ತವ್ವ ಭೂಷಪ್ಪ ಅವರ ಕುಟುಂಬ ಪಾವಗಡ ಪೊಲೀಸರಿಗೆ ದೂರು ನೀಡಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬೆದರಿಕೆ ಪತ್ರದ ಹಿಂದಿರುವವರ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img