HomeSports NewsWPL 2027ಕ್ಕೆ ದಿನಾಂಕ ಫಿಕ್ಸ್; ಅಕ್ಟೋಬರ್ 28ರಂದು ಕೊಚ್ಚಿಯಲ್ಲಿ ಆಟಗಾರರ ಹರಾಜು!

WPL 2027ಕ್ಕೆ ದಿನಾಂಕ ಫಿಕ್ಸ್; ಅಕ್ಟೋಬರ್ 28ರಂದು ಕೊಚ್ಚಿಯಲ್ಲಿ ಆಟಗಾರರ ಹರಾಜು!

ಮಹಿಳಾ ಪ್ರೀಮಿಯರ್ ಲೀಗ್‌ನ (WPL) 5ನೇ ಆವೃತ್ತಿಗೆ ಸಿದ್ಧತೆ ಆರಂಭವಾಗಿದ್ದು, 2027ರ ಟೂರ್ನಿಯ ವೇಳಾಪಟ್ಟಿ ಹಾಗೂ ಆಟಗಾರರ ಹರಾಜಿನ ದಿನಾಂಕವನ್ನು WPL ಪ್ರಕಟಿಸಿದೆ.

WPL ಅಧಿಕೃತ ಮಾಹಿತಿ ಪ್ರಕಾರ, 2027ರ ಆವೃತ್ತಿಯ ಪಂದ್ಯಗಳು ಜನವರಿ 14ರಿಂದ ಫೆಬ್ರವರಿ 7ರವರೆಗೆ ನಡೆಯಲಿವೆ. ದೇಶದ ವಿವಿಧ ಭಾಗಗಳಲ್ಲಿ ಮಹಿಳಾ ಕ್ರಿಕೆಟ್‌ನ ಮತ್ತೊಂದು ರೋಚಕ ಆವೃತ್ತಿಗೆ ವೇದಿಕೆ ಸಿದ್ಧವಾಗಲಿದೆ.

ಇನ್ನು, ಟೂರ್ನಿಗೂ ಮುನ್ನ ನಡೆಯಲಿರುವ ಆಟಗಾರರ ಹರಾಜು ಅಕ್ಟೋಬರ್ 28ರಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ. ಹರಾಜಿಗೂ ಮುನ್ನ ತಂಡಗಳು ತಮ್ಮ ಆಟಗಾರರನ್ನು ಉಳಿಸಿಕೊಳ್ಳಲು ಸೆಪ್ಟೆಂಬರ್ 28ರವರೆಗೆ ಗಡುವು ನೀಡಲಾಗಿದೆ.

2026ರ ಆವೃತ್ತಿಯಲ್ಲಿ ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಆಗಿತ್ತು. ಇದೀಗ 2027ರ ಆವೃತ್ತಿಯಲ್ಲಿ ಪ್ರಶಸ್ತಿ ಗೆಲ್ಲಲು ಎಲ್ಲಾ ತಂಡಗಳು ಸಿದ್ಧತೆ ಆರಂಭಿಸಲಿವೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img