HomeBengaluru Newsಶಾಲಾ ಸಮಯದಲ್ಲಿ ಟ್ರಕ್‌ಗಳಿಗೆ ಬ್ರೇಕ್; ಬೆಂಗಳೂರಿನಲ್ಲಿ ಹೊಸ ಸಂಚಾರ ನಿಯಮ!

ಶಾಲಾ ಸಮಯದಲ್ಲಿ ಟ್ರಕ್‌ಗಳಿಗೆ ಬ್ರೇಕ್; ಬೆಂಗಳೂರಿನಲ್ಲಿ ಹೊಸ ಸಂಚಾರ ನಿಯಮ!

For Dai;y Updates Join Our whatsapp Group

ಬೆಂಗಳೂರು: ಪೂರ್ವ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಸಂಚಾರ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದಾರೆ.

ಶಾಲಾ ಮಕ್ಕಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ವರ್ತೂರು-ಗುಂಜೂರು ಮಾರ್ಗದಲ್ಲಿ ಭಾರಿ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಹೆಚ್ಚುವರಿ ನಿರ್ಬಂಧ ವಿಧಿಸಲಾಗಿದೆ.

ರಾಜ್ಯ ಹೆದ್ದಾರಿ-35ರ ವರ್ತೂರು-ಗುಂಜೂರು ಮಾರ್ಗದಲ್ಲಿ ಈ ಹಿಂದೆ ಬೆಳಗ್ಗೆ 7ರಿಂದ 11 ಗಂಟೆಯವರೆಗೆ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧವಿತ್ತು. ಇದೀಗ ಸಂಚಾರ ದಟ್ಟಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಿರ್ಬಂಧದ ಸಮಯವನ್ನು ವಿಸ್ತರಿಸಲಾಗಿದೆ.

ಯಾವ ಸಮಯದಲ್ಲಿ ನಿರ್ಬಂಧ?

ಹೊಸ ವೇಳಾಪಟ್ಟಿಯಂತೆ ಭಾರಿ ಸರಕು ಸಾಗಣೆ ವಾಹನಗಳು ಮತ್ತು ಟ್ರಕ್‌ಗಳು ಈ ಕೆಳಗಿನ ಸಮಯದಲ್ಲಿ ವರ್ತೂರು-ಗುಂಜೂರು ಮಾರ್ಗ ಪ್ರವೇಶಿಸುವಂತಿಲ್ಲ.

  • ಬೆಳಗ್ಗೆ 7ರಿಂದ 11 ಗಂಟೆ
  • ಮಧ್ಯಾಹ್ನ 1ರಿಂದ 3 ಗಂಟೆ
  • ಸಂಜೆ 4ರಿಂದ ರಾತ್ರಿ 9 ಗಂಟೆ

ಶಾಲಾ ಬಸ್‌ಗಳ ಸಂಚಾರದ ಸಮಯ ಹಾಗೂ ಪ್ರಮುಖ ಪೀಕ್ ಅವರ್‌ಗಳನ್ನು ಗಮನದಲ್ಲಿಟ್ಟುಕೊಂಡು ಈ ಸಮಯ ನಿಗದಿಪಡಿಸಲಾಗಿದೆ.

ಟ್ರಾಫಿಕ್ ಜಾಮ್ ಹಿನ್ನೆಲೆ ಕ್ರಮ:

ವರ್ತೂರು-ಗುಂಜೂರು ಭಾಗದಲ್ಲಿ ರಸ್ತೆಗಳು ಕಿರಿದಾಗಿದ್ದು, ಹಲವು ಟಿ-ಜಂಕ್ಷನ್‌ಗಳಿವೆ. ರಾಜ್ಯ ಹೆದ್ದಾರಿಯಾಗಿರುವುದರಿಂದ ಭಾರಿ ಸರಕು ಸಾಗಣೆ ವಾಹನಗಳ ಸಂಚಾರವೂ ಹೆಚ್ಚಾಗಿದೆ. ಪರಿಣಾಮ ಜಂಕ್ಷನ್‌ಗಳಲ್ಲಿ ಆಗಾಗ್ಗೆ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಶಾಲಾ ವಾಹನಗಳು ಮತ್ತು ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದರು.

ಶಾಲಾ ಸಮಯದಲ್ಲಿ ಮಕ್ಕಳು ಮತ್ತು ಪೋಷಕರು ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುತ್ತಿರುವ ಬಗ್ಗೆ ಸಾರ್ವಜನಿಕರಿಂದ ಹಾಗೂ ಪೋಷಕರಿಂದ ಹಲವು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ವೈಟ್‌ಫೀಲ್ಡ್ ಸಂಚಾರ ಪೊಲೀಸರು ನಿರ್ಬಂಧದ ಅವಧಿಯನ್ನು ವಿಸ್ತರಿಸಿದ್ದಾರೆ.

ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಂಡು ಈ ಮಾರ್ಗದಲ್ಲಿ ಸಂಚಾರ ವ್ಯವಸ್ಥೆ ಸಹಜ ಸ್ಥಿತಿಗೆ ಬರುವವರೆಗೆ ಹೊಸ ನಿರ್ಬಂಧಗಳು ಮುಂದುವರಿಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img