HomeSports NewsAsian Para Games: ಭಾರತದ ಚಿನ್ನದ ಬೇಟೆ ಶುರು: ಮೋನಾ ಅಗರ್ವಾಲ್ ಗೆ ಗೋಲ್ಡ್, ಅವನಿ...

Asian Para Games: ಭಾರತದ ಚಿನ್ನದ ಬೇಟೆ ಶುರು: ಮೋನಾ ಅಗರ್ವಾಲ್ ಗೆ ಗೋಲ್ಡ್, ಅವನಿ ಲೇಖರಾಗೆ ಬೆಳ್ಳಿ ಪದಕ!

For Dai;y Updates Join Our whatsapp Group

ನಗೋಯಾ: ಜಪಾನ್ ನೆಲದಲ್ಲಿ ಭಾರತದ ಹೆಮ್ಮೆಯ ಪುತ್ರಿಯರ ಚಿನ್ನದ ಬೇಟೆ ಶುರುವಾಗಿದೆ. 2026ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಶೂಟರ್‌ಗಳು ಭರ್ಜರಿ ಸಾಧನೆ ಮಾಡಿದ್ದಾರೆ. 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಮೋನಾ ಅಗರ್ವಾಲ್ ಚಿನ್ನದ ಪದಕಕ್ಕೆ ಮುತ್ತಿಟ್ಟರೆ, ಅವನಿ ಲೇಖರಾ ಬೆಳ್ಳಿ ಪದಕ ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಈ ಮೂಲಕ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತ ಮೊದಲ ದಿನವೇ ಡಬಲ್ ಧಮಾಕಾ ಮಾಡಿದೆ.

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಐದನೇ ಆವೃತ್ತಿಯ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಶೂಟರ್‌ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ SH1 ವಿಭಾಗದಲ್ಲಿ ಮೋನಾ ಅಗರ್ವಾಲ್ ಹಾಗೂ ಅವನಿ ಲೇಖರಾ ಎದುರಾಳಿಗಳಿಗೆ ಪ್ರಬಲ ಪೈಪೋಟಿ ನೀಡಿ ಮೊದಲ ಎರಡು ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅರ್ಹತಾ ಸುತ್ತಿನಿಂದಲೇ ಮೋನಾ ಅಗರ್ವಾಲ್ ಅಬ್ಬರ ಶುರುವಾಗಿತ್ತು. ಬರೋಬ್ಬರಿ 629.1 ಅಂಕಗಳನ್ನು ಗಳಿಸುವ ಮೂಲಕ ಅಗ್ರಸ್ಥಾನ ಪಡೆದ ಮೋನಾ, ಚೀನಾದ ಜಾಂಗ್ ಕ್ಯೂಪಿಂಗ್ ಹೆಸರಿನಲ್ಲಿದ್ದ ಏಷ್ಯನ್ ಪ್ಯಾರಾ ಗೇಮ್ಸ್ ಅರ್ಹತಾ ಸುತ್ತಿನ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಮತ್ತೊಂದೆಡೆ ಅವನಿ ಲೇಖರಾ 626.4 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದು ಫೈನಲ್‌ಗೆ ಪ್ರವೇಶಿಸಿದ್ದರು.

ಇನ್ನು ಫೈನಲ್‌ನಲ್ಲೂ ಭಾರತದ ಇಬ್ಬರು ಶೂಟರ್‌ಗಳ ನಡುವೆ ರೋಚಕ ಪೈಪೋಟಿ ನಡೆಯಿತು. ಅಂತಿಮವಾಗಿ ಮೋನಾ ಅಗರ್ವಾಲ್ 250.0 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದರೆ, ಅವನಿ ಲೇಖರಾ 249.6 ಅಂಕಗಳೊಂದಿಗೆ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಕೇವಲ 0.4 ಅಂಕಗಳ ಅಂತರದಲ್ಲಿ ಚಿನ್ನದ ಪದಕ ನಿರ್ಧಾರವಾಗಿದ್ದು, ಮೋನಾ ಹೊಸ ಗೇಮ್ಸ್ ದಾಖಲೆಯನ್ನೂ ಬರೆದಿದ್ದಾರೆ.

ಈ ಗೆಲುವಿನೊಂದಿಗೆ ಭಾರತ ತನ್ನ ಪದಕ ಖಾತೆಯನ್ನು ಚಿನ್ನ ಹಾಗೂ ಬೆಳ್ಳಿಯೊಂದಿಗೆ ತೆರೆದಿದೆ. ಒಂದೇ ಸ್ಪರ್ಧೆಯಲ್ಲಿ ಭಾರತದ ಇಬ್ಬರು ಕ್ರೀಡಾಪಟುಗಳು ಮೊದಲ ಎರಡು ಸ್ಥಾನಗಳನ್ನು ಅಲಂಕರಿಸಿರುವುದು ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ.

ಒಟ್ಟಿನಲ್ಲಿ, ಏಷ್ಯನ್ ಪ್ಯಾರಾ ಗೇಮ್ಸ್‌ನ ಆರಂಭದಲ್ಲೇ ಭಾರತದ ಶೂಟರ್‌ಗಳು ಪದಕಗಳ ಬೇಟೆ ಆರಂಭಿಸಿದ್ದಾರೆ. ಮೋನಾ ಅಗರ್ವಾಲ್ ಅವರ ದಾಖಲೆಯ ಚಿನ್ನ ಹಾಗೂ ಅವನಿ ಲೇಖರಾ ಅವರ ಬೆಳ್ಳಿ ಪದಕ ಭಾರತದ ಕ್ರೀಡಾಭಿಮಾನಿಗಳಿಗೆ ಡಬಲ್ ಸಂಭ್ರಮ ತಂದಿದೆ.

 

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img