ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅತ್ಯಂತ ಐತಿಹಾಸಿಕ ಹಾಗೂ ಸಾಂಪ್ರದಾಯಿಕ ಆಚರಣೆಗಳಲ್ಲೊಂದಾದ ‘ವಜ್ರಮುಷ್ಟಿ ಕಾಳಗ’ಕ್ಕೆ ಈ ಬಾರಿಯ ದಸರಾದಲ್ಲಿ ಬ್ರೇಕ್ ಬಿದ್ದಿದೆ. ಮೈಸೂರು ಸಂಸ್ಥಾನ ಹಾಗೂ ದಸರಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈ ರೋಚಕ ಹಾಗೂ ರಕ್ತತರ್ಪಣದ ಕಾಳಗವನ್ನು ರದ್ದುಗೊಳಿಸಲಾಗಿದೆ.
ಮೈಸೂರು ರಾಜಮನೆತನದ ದಸರಾ ಆಚರಣೆಗಳಲ್ಲಿ ‘ವಜ್ರಮುಷ್ಟಿ ಕಾಳಗ’ಕ್ಕೆ ಸುದೀರ್ಘ ಇತಿಹಾಸ ಹಾಗೂ ಪ್ರಮುಖ ಸ್ಥಾನವಿದೆ. ಅರಮನೆಯ ಸಾಂಪ್ರದಾಯಿಕ ವಿಧಿವಿಧಾನಗಳಲ್ಲಿ ಒಂದಾಗಿದ್ದ ಈ ರೋಚಕ ಪಟ್ಟು-ವರಸೆಗಳ ಕ್ರೀಡೆಯು ಕ್ರೀಡಾಭಿಮಾನಿಗಳು ಮತ್ತು ಇತಿಹಾಸ ಪ್ರಿಯರನ್ನು ತೀವ್ರವಾಗಿ ಆಕರ್ಷಿಸುತ್ತಿತ್ತು.
ಆದರೆ ಈ ವರ್ಷ ರಾಜಮನೆತನದ ಪ್ರಮುಖ ಆಚರಣೆಯ ಅಂಗವಾಗಿದ್ದ ಈ ಕಾಳಗ ನಡೆಯದಿರುವುದು ಕ್ರೀಡಾಸಕ್ತರಲ್ಲಿ ಹಾಗೂ ಇತಿಹಾಸ ಪ್ರಿಯರಲ್ಲಿ ತೀವ್ರ ಬೇಸರ ಮತ್ತು ನಿರಾಸೆಯನ್ನು ಉಂಟುಮಾಡಿದೆ.










