• About
  • Advertise
  • Privacy & Policy
  • Contact
Saturday, November 14, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Karnataka News

ಹಾಸನ ಡಿಸಿ ಕಚೇರಿ ಭ್ರಷ್ಟಾಚಾರದ ಕುರಿತ ವಾಟ್ಸಾಪ್ ಚಾಟ್ ವಿಚಾರ: ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು..?

Vijaya Sakshi News Desk by Vijaya Sakshi News Desk
November 14, 2026
in Karnataka News
ಹಲೋ ಅಪ್ಪ ಅಂತಾ ಯತೀಂದ್ರ ಹೇಳಿದ್ದು ಯಾರಿಗೆ: ಕುಮಾರಸ್ವಾಮಿ ಪ್ರಶ್ನೆ
0
SHARES
0
VIEWS
Share on Facebook

ಹಾಸನ: ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವ ನನಗೆ ಲಭ್ಯವಾದ ವಾಟ್ಸಾಪ್ ಚಾಟ್ ಬಗ್ಗೆ ಹೇಳಿದ್ದೇನೆಯೇ ಹೊರತು ಇಂಥವರೇ ನಿರ್ದಿಷ್ಟ ವ್ಯಕ್ತಿಗಳು ಹಣ ಪಡೆದಿದ್ದಾರೆ ಎಂದು ಎಲ್ಲಾದರೂ ಹೇಳಿದ್ದೇನೆಯೇ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ತೀಕ್ಷ್ಮವಾಗಿ ಪ್ರಶ್ನಿಸಿದರು.

ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಶ್ರೀ ರಂಗನಾಥ ಸ್ವಾಮಿ ದರ್ಶನ ಪಡೆದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಸಚಿವರು; ನಾನು ಹಾಸನ ಜಿಲ್ಲಾಧಿಕಾರಿ ಹೆಸರನ್ನಾಗಲಿ ಅಥವಾ ಜಿಲ್ಲಾ ಉಸ್ತುವಾರಿ ಸಚಿವರ ಹೆಸರನ್ನಾಗಲಿ, ಉಲ್ಲೇಖಿಸಿ ಆರೋಪ ಮಾಡಿಲ್ಲ.

ಬದಲಿಗೆ ಜಿಲ್ಲಾಧಿಕಾರಿ ಆಪ್ತ ಸಹಾಯಕನ ವಾಟ್ಸಾಪ್ ಚಾಟ್ ದಾಖಲೆ ಇಟ್ಟುಕೊಂಡು ಮಾತನಾಡಿದ್ದೇನೆ. ಇದರ ಬಗ್ಗೆ ತನಿಖೆ ನಡೆಸಿ ಎಂದಷ್ಟೇ ಹೇಳಿದ್ದೇನೆ. ಆದರೆ ಇವರು ಪೈಪೋಟಿಗೆ ಬಿದ್ದು ನನ್ನ ವಿರುದ್ಧ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಹಾಗೂ ಸ್ಪಷ್ಟನೆಗಳನ್ನು ನೀಡುತ್ತಿದ್ದಾರೆ. ಅವರ ವರ್ತನೆ ನನಗೆ ಆಶ್ಚರ್ಯ ಉಂಟು ಮಾಡಿದೆ ಎಂದು ಹೇಳಿದರು.

ಆ ದೇವರ ಮೇಲೆ ಆಣೆ ಮಾಡಿರುವುದು ಮತ್ತು ಚರ್ಚೆ ಮಾಡಿರುವುದು ಇರಲಿ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ನಾನು ಎಲ್ಲಾದರೂ ಅವರು ದುಡ್ಡು ತಗೊಂಡಿದ್ದಾರೆ ಎಂದು ಹೇಳಿದ್ದೀನಾ? ಯಾರ ಮೇಲಾದರು ಬೊಟ್ಟು ತೋರಿಸಿದ್ದೀನಾ? ಅಲ್ಲಿ ಚಾಟ್‌ನಲ್ಲಿ ಇರುವ ಸತ್ಯಾಸತ್ಯತೆಯನ್ನ ತನಿಖೆ ಮಾಡಿ ಅಂಥ ಹೇಳಿದ್ದೀನಿ. ಇದರಲ್ಲಿ ತಪ್ಪು ಹುಡುಕುವಂಥದ್ದು ಅಥವಾ ನನ್ನ ಮೇಲೆಯೇ ವಾಗ್ದಾಳಿ ನಡೆಸುವಂತದು ಏನಿದೆ? ಎಂದು ಸಚಿವ ಕುಮಾರಸ್ವಾಮಿ ಅವರು ಕೇಳಿದರು.

ನನ್ನ ಮುಂದೆ ಆ ವಿಷಯಗಳು ಬಂದಾಗ ತನಿಖೆ ಮಾಡಿ ಅಂಥ ಹೇಳುವುದು ತಪ್ಪಾ? ನಾನು ಪ್ರತಿಪಕ್ಷ ನಾಯಕ ಎಂಬುದು ಇವರಿಗೆ ಅರಿವಿಲ್ಲವೇ? ಹಲವಾರು ವಿಷಯಗಳ ಬಗ್ಗೆ ತನಿಖೆ ಮಾಡಲು ಆಗ್ರಹ ಮಾಡಿದ್ದೇನೆ. ಆ ಪ್ರಕರಣದಲ್ಲಿ ಅವರು ಪಾಲುದಾರರು ಇಲ್ಲದಿದ್ದ ಮೇಲೆ ಏತಕ್ಕೆ ಭಯ? ನಾನೇನು ಯಾರ ಹೆಸರನ್ನು ಹೇಳಿಲ್ಲವಲ್ಲ? ವಾಟ್ಸಾಪ್ ಚಾಟ್ ನಲ್ಲಿ ಬಂದಿರುವ ಹೆಸರುಗಳ ಬಗ್ಗೆ ಅಷ್ಟೇ ನಾನು ಉಲ್ಲೇಖಿಸಿ ತನಿಖೆಗೆ ಒತ್ತಾಯ ಮಾಡಿದ್ದೇನೆ. ಇದರಲ್ಲಿ ಆಗಿರುವ ಲೋಪ ಅಥವಾ ನನ್ನಿಂದ ಆಗಿರುವ ಅಪರಾಧವೇನೂ ಎಂಬುದು ತಿಳಿಯುತ್ತಿಲ್ಲ ಎಂದು ಸಚಿವರು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.

ಈ ಹಣ ಹಂಚಿಕೆಯಲ್ಲಿ ಯಾರು ಯಾರು ಭಾಗಿಯಾಗಿದ್ದಾರೋ ಅವರ ಹೆಸರುಗಳು ಮಾತ್ರ ವಾಟ್ಸಾಪ್ ಚಾಟ್ ನಲ್ಲಿ ಉಲ್ಲೇಖ ಆಗಿದೆ. ಆದ್ದರಿಂದಲೇ ನಾನು ತಕ್ಷಣವೇ ಆ ಎಲ್ಲಾ ಅಧಿಕಾರಿಗಳ ಮೊಬೈಲ್ ಫೋನ್ ಗಳನ್ನು ಜಪ್ತಿ ಮಾಡಿ ತನಿಖೆಗೆ ಕೊಡಿ ಎಂದು ಒತ್ತಾಯಿಸಿದ್ದು. ಅವರು ತನಿಖೆ ಮಾಡುವ ಬದಲು ನನ್ನನ್ನು ನಿಂದಿಸುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಅವರು ಆರೋಪಿಸಿದರು.

ಜಿಲ್ಲಾಧಿಕಾರಿ ತಮ್ಮ ಇತಿಮಿತಿಗಳನ್ನು ಉಲ್ಲಂಘಿಸಿ ಎಲ್ಲಾ ವಿಷಯಗಳಲ್ಲಿ ಎಲ್ಲೆ ಮೀರಿ ಹೋಗುತ್ತಿದ್ದಾರೆ. ನಾನು ಕೂಡ ಸುದ್ದಿ ಮಾಧ್ಯಮಗಳಲ್ಲಿ ಗಮನಿಸಿದೆ. ಮುಖ್ಯಮಂತ್ರಿ ಈ ಜಿಲ್ಲಾಧಿಕಾರಿಯ ಪಕ್ಕ ಕುಳಿತುಕೊಂಡಾಗ ಏನೆಲ್ಲಾ ಚರ್ಚೆ ನಡೆದಿದೆಯೋ ಗೊತ್ತಿಲ್ಲ. ಆದರೆ ತನಿಖೆ ಆಗುವ ಮೊದಲೇ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಮತ್ತು ಉಳಿದೆಲ್ಲಾ ಅಧಿಕಾರಿಗಳಿಗೆ ಕ್ಲೀನ್ ಚಿಟ್ ಕೊಟ್ಟುಬಿಟ್ಟಿದ್ದಾರೆ. ಇನ್ನು ನಾನು ತನಿಖೆಗೆ ಒತ್ತಾಯಿಸಿ ಏನು ಪ್ರಯೋಜನ ಎಂದು ಸಚಿವರು ಬೇಸರ

ಅಧಿಕಾರಿಗಳು ಯಾವ ರೀತಿ ನಡೆದುಕೊಳ್ಳಬೇಕು ಎಂಬುದಕ್ಕೆ ನಿಯಮಗಳು ಏನಿವೆ, ಅದನ್ನೆಲ್ಲಾ ಮೀರಿ ಹೋಗಲು ಈ ಸರ್ಕಾರ ಅಧಿಕಾರಿಗಳಿಗೆ ಕುಮ್ಮಕ್ಕು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಮತ್ತೆ ಯಾವ ರೀತಿ ನಡೆಯುತ್ತದೆ ಎನ್ನುವುದನ್ನು ಕಾದು ನೋಡೋಣ ಎಂದು ಸಚಿವರು ಆರೋಪಿಸಿದರು.

ಹಾಸನ ಜಿಲ್ಲಾಧಿಕಾರಿ ವಾಟ್ಸಪ್ ಸ್ಟೇಟಸ್ ಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು; ಅಂತಹ ಸ್ಟೇಟಸ್ ಗಳಿಗೆಲ್ಲಾ ತಲೆ ಕೆಡೆಸಿಕೊಳ್ಳಬೇಡಿ. ಈ ಸರಕಾರದಲ್ಲಿ ಏನೂ ಆಗಲ್ಲ. ಅದಕ್ಕೆ ಕಾಲ ಬರಬೇಕು, ಕಾಲ ಬಂದಾಗ ಯಾವ್ಯಾವ ತರ ಬದಲಾವಣೆ ಆಗುತ್ತೆ ಇವತ್ತು ರಂಗನಾಥಸ್ವಾಮಿ ಸನ್ನಿಧಾನದಲ್ಲಿ ಕುಳಿತು ಹೇಳುತ್ತಿದ್ದೇನೆ;

ಎಂಆ ಕಾಲ ಬಂದಾಗ ಆ ದೇವರು ಈ ರೀತಿ ನಡವಳಿಕೆ ಇರುವಂತಹವರಿಗೆ, ಅವರ ನಡವಳಿಕೆಗೆ ತಕ್ಕ ಫಲ ದೊರಕಬೇಕು, ಅ ಫಲ ದೇವರು ಕೊಡುತ್ತಾನೆ ಎಂದು ಎಚ್ಚರಿಕೆ ನೀಡಿದರು. ಮುಖ್ಯಮಂತ್ರಿಗಳು ಕ್ಲೀನ್ ಚಿಟ್ ಕೊಟ್ಟಿರುವುದರಿಂದ ತನಿಖೆಯಲ್ಲಿ ಏನು ಆಗುವುದಿಲ್ಲ ಎಂಬುದು ನನಗೆ ಅರ್ಥವಾಗಿದೆ. ಅದರ ಬಗ್ಗೆ ಚರ್ಚೆ ಮಾಡಿ ಅರ್ಥವಿಲ್ಲ. ಕಾಲವೇ ಅದಕ್ಕೆ ಉತ್ತರ ನೀಡುತ್ತದೆ ಎಂದು ಹೇಳಿದರು.

Tags: BreakingNewshassanHDKumaraswamyKarnatakaNewsHeadlinesVijayasakshivijayasakshinews
ShareSendShare
Previous Post

ಗಿಗ್ ಕಾರ್ಮಿಕರಿಗೆ ರಾಹುಲ್ ಗಾಂಧಿ ಬಂಪರ್ ಗಿಫ್ಟ್: ₹15 ಲಕ್ಷದ ಅಪಘಾತ, ಆರೋಗ್ಯ ವಿಮೆ ಘೋಷಣೆ

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

November 4, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಹಲೋ ಅಪ್ಪ ಅಂತಾ ಯತೀಂದ್ರ ಹೇಳಿದ್ದು ಯಾರಿಗೆ: ಕುಮಾರಸ್ವಾಮಿ ಪ್ರಶ್ನೆ

ಹಾಸನ ಡಿಸಿ ಕಚೇರಿ ಭ್ರಷ್ಟಾಚಾರದ ಕುರಿತ ವಾಟ್ಸಾಪ್ ಚಾಟ್ ವಿಚಾರ: ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು..?

November 14, 2026
ಗಿಗ್ ಕಾರ್ಮಿಕರಿಗೆ ರಾಹುಲ್ ಗಾಂಧಿ ಬಂಪರ್ ಗಿಫ್ಟ್: ₹15 ಲಕ್ಷದ ಅಪಘಾತ, ಆರೋಗ್ಯ ವಿಮೆ ಘೋಷಣೆ

ಗಿಗ್ ಕಾರ್ಮಿಕರಿಗೆ ರಾಹುಲ್ ಗಾಂಧಿ ಬಂಪರ್ ಗಿಫ್ಟ್: ₹15 ಲಕ್ಷದ ಅಪಘಾತ, ಆರೋಗ್ಯ ವಿಮೆ ಘೋಷಣೆ

November 14, 2026
ಕಾಂಗ್ರೆಸ್‌ಗೆ ಮತ್ತೊಂದು ದೊಡ್ಡ ಆಘಾತ! ವೆಂಕಟರಮಣಪ್ಪ ನಿಧನಕ್ಕೆ ಪರಮೇಶ್ವರ್ ಸಂತಾಪ

ಕರ್ನಾಟಕದ SC/ST ಮೀಸಲಾತಿಗೆ ಸಂವಿಧಾನ ರಕ್ಷಣೆ ನೀಡಿ: ಕೇಂದ್ರಕ್ಕೆ ಪರಮೇಶ್ವರ್ ಪತ್ರ

November 14, 2026
ವೈಭವ್ ಸೂರ್ಯವಂಶಿಗೆ ಡ್ರೆಸ್ಸಿಂಗ್ ರೂಮ್ ಪ್ರವೇಶ ನಿಷೇಧ! ಯಾಕೆ ಗೊತ್ತಾ..?

15ನೇ ವಯಸ್ಸಿನಲ್ಲೇ ವಿಶ್ವದಾಖಲೆ ಬರೆದ ವೈಭವ್ ಸೂರ್ಯವಂಶಿ: ಟಿ20 ಕ್ರಿಕೆಟ್ʼನ ಅತ್ಯಂತ ಕಿರಿಯ ನಾಯಕ!

November 14, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಹಲೋ ಅಪ್ಪ ಅಂತಾ ಯತೀಂದ್ರ ಹೇಳಿದ್ದು ಯಾರಿಗೆ: ಕುಮಾರಸ್ವಾಮಿ ಪ್ರಶ್ನೆ

ಹಾಸನ ಡಿಸಿ ಕಚೇರಿ ಭ್ರಷ್ಟಾಚಾರದ ಕುರಿತ ವಾಟ್ಸಾಪ್ ಚಾಟ್ ವಿಚಾರ: ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು..?

November 14, 2026
ಗಿಗ್ ಕಾರ್ಮಿಕರಿಗೆ ರಾಹುಲ್ ಗಾಂಧಿ ಬಂಪರ್ ಗಿಫ್ಟ್: ₹15 ಲಕ್ಷದ ಅಪಘಾತ, ಆರೋಗ್ಯ ವಿಮೆ ಘೋಷಣೆ

ಗಿಗ್ ಕಾರ್ಮಿಕರಿಗೆ ರಾಹುಲ್ ಗಾಂಧಿ ಬಂಪರ್ ಗಿಫ್ಟ್: ₹15 ಲಕ್ಷದ ಅಪಘಾತ, ಆರೋಗ್ಯ ವಿಮೆ ಘೋಷಣೆ

November 14, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper