ಮನೆಯ ಮುಂದೆ ನಡೆದ ಪಟಾಕಿ ಸ್ಫೋಟ:
ಕನಕಪುರದ ನಿವಾಸಿಯಾಗಿದ್ದ ಅಶ್ವಿನಿ ನವೆಂಬರ್ 10ರಂದು ಮನೆಯ ಮುಂದೆ ಪಟಾಕಿ ಬಾಕ್ಸ್ ಹಿಡಿದು ಕುಳಿತಿದ್ದರು. ಇದೇ ವೇಳೆ ಮನೆಯ ಮುಂದೆ ಕೆಲವರು ಪಟಾಕಿ ಸಿಡಿಸುತ್ತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಸಿಡಿದ ಪಟಾಕಿಯೊಂದು ಅಶ್ವಿನಿ ಅವರ ಬಳಿಯಿದ್ದ ಪಟಾಕಿ ಬಾಕ್ಸ್ಗೆ ಬಂದು ಬಿದ್ದಿದೆ. ಪರಿಣಾಮ ಬಾಕ್ಸ್ನಲ್ಲಿದ್ದ ಪಟಾಕಿಗಳು ಏಕಕಾಲಕ್ಕೆ ಸ್ಫೋಟಗೊಂಡಿವೆ.
ಸ್ಫೋಟದ ತೀವ್ರತೆಗೆ ಅಶ್ವಿನಿ ಅವರ ಮುಖ, ಕಾಲು ಸೇರಿದಂತೆ ದೇಹದ ಹಲವು ಭಾಗಗಳಿಗೆ ಗಂಭೀರ ಸುಟ್ಟಗಾಯಗಳಾಗಿದ್ದವು. ತಕ್ಷಣ ಅವರನ್ನು ವಿಕ್ಟೋರಿಯಾ ಆಸ್ಪತ್ರೆಯ ಬರ್ನಿಂಗ್ ವಾರ್ಡ್ಗೆ ದಾಖಲಿಸಲಾಗಿತ್ತು.
ಎಂಟು ದಿನಗಳ ಹೋರಾಟ ಅಂತ್ಯ:
ಆಸ್ಪತ್ರೆಗೆ ದಾಖಲಿಸುವಾಗಲೇ ಅಶ್ವಿನಿ ಅವರ ದೇಹದ ಶೇ.40ರಷ್ಟು ಭಾಗ ಸುಟ್ಟುಹೋಗಿತ್ತು. ಏಳು ತಿಂಗಳ ಗರ್ಭಿಣಿಯಾಗಿದ್ದ ಕಾರಣ ಚಿಕಿತ್ಸೆ ನೀಡುವುದು ವೈದ್ಯರಿಗೆ ಸವಾಲಾಗಿತ್ತು. ಹೀಗಾಗಿ ಐಸಿಯುನಲ್ಲಿ ಚಿಕಿತ್ಸೆ ಆರಂಭಿಸಿದ ವೈದ್ಯರು ಕಳೆದ ಎಂಟು ದಿನಗಳಿಂದ ನಿರಂತರವಾಗಿ ಆರೈಕೆ ಮಾಡುತ್ತಿದ್ದರು.
ಆದರೆ ಸುಟ್ಟಗಾಯಗಳ ತೀವ್ರತೆ ಮತ್ತು ಗಂಭೀರ ಆರೋಗ್ಯ ಸ್ಥಿತಿಯಿಂದಾಗಿ ಅಶ್ವಿನಿ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಬುಧವಾರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ತಾಯಿ ಮತ್ತು ಮಗುವನ್ನು ಉಳಿಸುವ ವೈದ್ಯರ ಪ್ರಯತ್ನ ಕೊನೆಗೂ ಫಲ ನೀಡಲಿಲ್ಲ.
ಪಟಾಕಿ ಸಿಡಿಸುವಾಗ ಸ್ವಲ್ಪ ಅಜಾಗರೂಕತೆ ತೋರಿದರೂ ಎಂತಹ ದೊಡ್ಡ ದುರಂತ ಸಂಭವಿಸಬಹುದು ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ. ಕ್ಷಣಿಕ ಸಂಭ್ರಮಕ್ಕಾಗಿ ನಡೆಯುವ ನಿರ್ಲಕ್ಷ್ಯ ಒಂದು ಕುಟುಂಬವನ್ನೇ ದುಃಖದಲ್ಲಿ ಮುಳುಗಿಸಿದೆ. ಪಟಾಕಿ ಸಿಡಿಸುವಾಗ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಎಷ್ಟು ಮುಖ್ಯ ಎಂಬುದನ್ನು ಈ ದುರಂತ ಮತ್ತೊಮ್ಮೆ ಎಚ್ಚರಿಸಿದೆ.









