• About
  • Advertise
  • Privacy & Policy
  • Contact
Thursday, November 19, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Karnataka News

ಮೊದಲ ಮುಖ್ಯ ಪೊಲೀಸ್ ಆಯುಕ್ತ ಹಿತೇಂದ್ರ ಫುಲ್ ಆಕ್ಟಿವ್: ಅಧಿಕಾರಿಗಳಿಗೆ ಶಿಸ್ತು, ಭ್ರಷ್ಟಾಚಾರದ ವಿರುದ್ಧ ಖಡಕ್ ಎಚ್ಚರಿಕೆ

Vijaya Sakshi News Desk by Vijaya Sakshi News Desk
November 19, 2026
in Karnataka News
ಮೊದಲ ಮುಖ್ಯ ಪೊಲೀಸ್ ಆಯುಕ್ತ ಹಿತೇಂದ್ರ ಫುಲ್ ಆಕ್ಟಿವ್: ಅಧಿಕಾರಿಗಳಿಗೆ ಶಿಸ್ತು, ಭ್ರಷ್ಟಾಚಾರದ ವಿರುದ್ಧ ಖಡಕ್ ಎಚ್ಚರಿಕೆ
0
SHARES
0
VIEWS
Share on Facebook

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೂತನ ಪೊಲೀಸ್ ಕಮಿಷನರೇಟ್ ವ್ಯವಸ್ಥೆ ಜಾರಿಗೆ ಬಂದ ಬೆನ್ನಲ್ಲೇ, ನಗರದ ಮೊದಲ ಮುಖ್ಯ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಆರ್. ಹಿತೇಂದ್ರ ಅವರು ಮೊದಲ ದಿನವೇ ಪೊಲೀಸ್ ಇಲಾಖೆಯಲ್ಲಿ ಶಿಸ್ತು ಪಾಲನೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಐವರು ನೂತನ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಗಳ ಜೊತೆ ಸಭೆ ನಡೆಸಿದ ಅವರು, ಅಕ್ರಮ ಚಟುವಟಿಕೆ, ಭ್ರಷ್ಟಾಚಾರ ಮತ್ತು ಮಾಫಿಯಾಗಳ ಜೊತೆಗಿನ ಸಂಪರ್ಕಕ್ಕೆ ಅವಕಾಶ ನೀಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬೆಳಗ್ಗೆಯೇ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಮುಖ್ಯ ಆಯುಕ್ತ ಹಿತೇಂದ್ರ ಅವರು, ಪೊಲೀಸ್ ಇಲಾಖೆಯ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ನಿಯಮಾನುಸಾರ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದ್ದಾರೆ. ಪೊಲೀಸ್ ಮ್ಯಾನುವಲ್‌ನಲ್ಲಿ ಉಲ್ಲೇಖಿಸಿರುವ ನಿಯಮಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲಾಖೆಯಲ್ಲಿ ಯಾವುದೇ ರೀತಿಯ ಅಶಿಸ್ತು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾನೂನುಬದ್ಧ ಕೆಲಸಗಳಿಗೆ ಮಾತ್ರ ಅಧಿಕಾರಿಗಳು ಆದ್ಯತೆ ನೀಡಬೇಕು. ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವುದು, ಮಾಫಿಯಾಗಳ ಜೊತೆ ಕೈಜೋಡಿಸುವುದು ಅಥವಾ ಭ್ರಷ್ಟಾಚಾರದಲ್ಲಿ ತೊಡಗುವುದು ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹಿತೇಂದ್ರ ಎಚ್ಚರಿಕೆ ನೀಡಿದ್ದಾರೆ.

ಇನ್ನು ರೌಡಿ ಸ್ಕ್ವಾಡ್ ಇದೆ ಎಂದು ಅಧಿಕಾರಿಗಳು ಮೈಮರೆಯಬಾರದು. ಐವರು ಪೊಲೀಸ್ ಆಯುಕ್ತರು ತಮ್ಮ ತಮ್ಮ ವ್ಯಾಪ್ತಿಯ ಕೆಳಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಈ ಸಂದೇಶವನ್ನು ಸ್ಪಷ್ಟವಾಗಿ ತಲುಪಿಸಬೇಕು ಎಂದು ಸೂಚಿಸಿದ್ದಾರೆ. ಇಲಾಖೆಯಲ್ಲಿ ಶಿಸ್ತು, ಹೊಣೆಗಾರಿಕೆ ಹಾಗೂ ಪಾರದರ್ಶಕತೆ ಕಾಪಾಡುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಇದರ ನಡುವೆ ಬೆಂಗಳೂರಿನ ಪೊಲೀಸ್ ಆಡಳಿತ ವ್ಯವಸ್ಥೆಯಲ್ಲೂ ಐತಿಹಾಸಿಕ ಬದಲಾವಣೆ ನಡೆದಿದೆ. 63 ವರ್ಷಗಳ ಇತಿಹಾಸ ಹೊಂದಿದ್ದ ಏಕೈಕ ಬೆಂಗಳೂರು ಪೊಲೀಸ್ ಕಮಿಷನರೇಟ್ ವ್ಯವಸ್ಥೆಯನ್ನು ವಿಭಜಿಸಿ, ನಗರಕ್ಕೆ ಓರ್ವ ಮುಖ್ಯ ಪೊಲೀಸ್ ಆಯುಕ್ತರು ಹಾಗೂ ಐವರು ಪ್ರತ್ಯೇಕ ಪೊಲೀಸ್ ಆಯುಕ್ತರನ್ನು ನೇಮಕ ಮಾಡಲಾಗಿದೆ.

1963ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಸರ್ಕಾರ ಬೆಂಗಳೂರು ಪೊಲೀಸ್ ಕಮಿಷನರೇಟ್ ವ್ಯವಸ್ಥೆಯನ್ನು ಅಧಿಕೃತವಾಗಿ ಸ್ಥಾಪಿಸಿತ್ತು. ಆರಂಭದಲ್ಲಿ ಕೇವಲ 37 ಪೊಲೀಸ್ ಠಾಣೆಗಳೊಂದಿಗೆ ಕಾರ್ಯಾರಂಭ ಮಾಡಿದ್ದ ಈ ವ್ಯವಸ್ಥೆಗೆ ಡಿಐಜಿಪಿ ದರ್ಜೆಯ ಅಧಿಕಾರಿ ಸಿ. ಚಾಂಡಿ ಅವರು ಮೊದಲ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದರು.

1963ರಿಂದ ಇಲ್ಲಿಯವರೆಗೆ ಒಟ್ಟು 39 ಐಪಿಎಸ್ ಅಧಿಕಾರಿಗಳು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ. 1983ರಿಂದ 1986ರವರೆಗೆ 3 ವರ್ಷ 9 ತಿಂಗಳ ಕಾಲ ಸೇವೆ ಸಲ್ಲಿಸಿದ ಪಿ.ಜಿ. ಹರ್ಲಂಕರ್ ಅವರು ದೀರ್ಘಾವಧಿಗೆ ಆಯುಕ್ತರಾಗಿದ್ದ ದಾಖಲೆ ಹೊಂದಿದ್ದರೆ, 2019ರಲ್ಲಿ ಅಧಿಕಾರ ವಹಿಸಿಕೊಂಡ ಅಲೋಕ್ ಕುಮಾರ್ ಅವರು ಕಡಿಮೆ ಅವಧಿಗೆ ಸೇವೆ ಸಲ್ಲಿಸಿದ ಆಯುಕ್ತರ ದಾಖಲೆ ಹೊಂದಿದ್ದಾರೆ.

Tags: Bengaluru Chief CommissionerBengaluru PoliceBengaluru Police CommissionerBreakingNewsKarnatakaKarnataka Police NewsNewsHeadlinesR HitendraVijayasakshivijayasakshinews
ShareSendShare
Previous Post

ಸರ್ಕಾರಿ ಬ್ಯಾಂಕ್‌ಗಳ ಲಾಭದಲ್ಲಿ ದಾಖಲೆ ಏರಿಕೆ; ಮೊದಲ ಬಾರಿಗೆ ₹300 ಲಕ್ಷ ಕೋಟಿ ದಾಟಿದ ವಹಿವಾಟು!

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

November 4, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಮೊದಲ ಮುಖ್ಯ ಪೊಲೀಸ್ ಆಯುಕ್ತ ಹಿತೇಂದ್ರ ಫುಲ್ ಆಕ್ಟಿವ್: ಅಧಿಕಾರಿಗಳಿಗೆ ಶಿಸ್ತು, ಭ್ರಷ್ಟಾಚಾರದ ವಿರುದ್ಧ ಖಡಕ್ ಎಚ್ಚರಿಕೆ

ಮೊದಲ ಮುಖ್ಯ ಪೊಲೀಸ್ ಆಯುಕ್ತ ಹಿತೇಂದ್ರ ಫುಲ್ ಆಕ್ಟಿವ್: ಅಧಿಕಾರಿಗಳಿಗೆ ಶಿಸ್ತು, ಭ್ರಷ್ಟಾಚಾರದ ವಿರುದ್ಧ ಖಡಕ್ ಎಚ್ಚರಿಕೆ

November 19, 2026
ಸರ್ಕಾರಿ ಬ್ಯಾಂಕ್‌ಗಳ ಲಾಭದಲ್ಲಿ ದಾಖಲೆ ಏರಿಕೆ; ಮೊದಲ ಬಾರಿಗೆ ₹300 ಲಕ್ಷ ಕೋಟಿ ದಾಟಿದ ವಹಿವಾಟು!

ಸರ್ಕಾರಿ ಬ್ಯಾಂಕ್‌ಗಳ ಲಾಭದಲ್ಲಿ ದಾಖಲೆ ಏರಿಕೆ; ಮೊದಲ ಬಾರಿಗೆ ₹300 ಲಕ್ಷ ಕೋಟಿ ದಾಟಿದ ವಹಿವಾಟು!

November 19, 2026
ರಾಜಧಾನಿ ಬೆಂಗಳೂರಿನ ಹಲವೆಡೆ ಭಾರೀ ಮಳೆ: ಸಂಚಾರಕ್ಕೆ ತೊಂದರೆ, ವಾಹನ ಸವಾರರ ಪರದಾಟ!

ಅಕ್ವಾನ್ ಚಂಡಮಾರುತದ ಅಬ್ಬರ; ಆಂಧ್ರ ಕರಾವಳಿಗೆ ಅಪ್ಪಳಿಸಲು ಸಜ್ಜು, ಕರ್ನಾಟಕದ ಹವಾಮಾನದಲ್ಲೂ ಬದಲಾವಣೆ?

November 19, 2026
Google Pay, PhonePe ಬಳಕೆದಾರರೇ ಗಮನಿಸಿ; ₹2,000 ಮೇಲ್ಪಟ್ಟ UPI ಪಾವತಿಗೆ ಹೊಸ ಶುಲ್ಕ?

Google Pay, PhonePe ಬಳಕೆದಾರರೇ ಗಮನಿಸಿ; ₹2,000 ಮೇಲ್ಪಟ್ಟ UPI ಪಾವತಿಗೆ ಹೊಸ ಶುಲ್ಕ?

November 19, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಮೊದಲ ಮುಖ್ಯ ಪೊಲೀಸ್ ಆಯುಕ್ತ ಹಿತೇಂದ್ರ ಫುಲ್ ಆಕ್ಟಿವ್: ಅಧಿಕಾರಿಗಳಿಗೆ ಶಿಸ್ತು, ಭ್ರಷ್ಟಾಚಾರದ ವಿರುದ್ಧ ಖಡಕ್ ಎಚ್ಚರಿಕೆ

ಮೊದಲ ಮುಖ್ಯ ಪೊಲೀಸ್ ಆಯುಕ್ತ ಹಿತೇಂದ್ರ ಫುಲ್ ಆಕ್ಟಿವ್: ಅಧಿಕಾರಿಗಳಿಗೆ ಶಿಸ್ತು, ಭ್ರಷ್ಟಾಚಾರದ ವಿರುದ್ಧ ಖಡಕ್ ಎಚ್ಚರಿಕೆ

November 19, 2026
ಸರ್ಕಾರಿ ಬ್ಯಾಂಕ್‌ಗಳ ಲಾಭದಲ್ಲಿ ದಾಖಲೆ ಏರಿಕೆ; ಮೊದಲ ಬಾರಿಗೆ ₹300 ಲಕ್ಷ ಕೋಟಿ ದಾಟಿದ ವಹಿವಾಟು!

ಸರ್ಕಾರಿ ಬ್ಯಾಂಕ್‌ಗಳ ಲಾಭದಲ್ಲಿ ದಾಖಲೆ ಏರಿಕೆ; ಮೊದಲ ಬಾರಿಗೆ ₹300 ಲಕ್ಷ ಕೋಟಿ ದಾಟಿದ ವಹಿವಾಟು!

November 19, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper