ವಿಜಯಸಾಕ್ಷಿ ಸುದ್ದಿ, ಗದಗ
Advertisement
ಕುಟುಂಬ ಕಲಹದಿಂದ ಮಗನೇ ಹೆತ್ತ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಘಟನೆ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ನಡೆದಿದೆ.
58 ವರ್ಷದ ಗಣೇಶ್ ಚಿಕ್ಕನಟ್ಟಿ ಮೃತ ತಂದೆ. ಮಗ ವಿಜಯ ಎಂಬಾತ ಕೊಲೆಗೈದು ಪೊಲೀಸರಿಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಹುಲಕೋಟಿ ಗ್ರಾಮದ ಗಣೇಶ್ ನಗರದಲ್ಲಿ ಮಲಗಿದ್ದ ತಂದೆ ಗಣೇಶ್ ಚಿಕ್ಕನಟ್ಟಿ ಎಂಬುವರನ್ನು ಮಗ ವಿಜಯ ಕೊಡಲಿಯಿಂದ ಕತ್ತುಗೆಗೆ ಬಲವಾಗಿ ಕೊಚ್ಚಿದ ಪರಿಣಾಮ ಸ್ಥಳದಲ್ಲಿಯೇ ತಂದೆ ಮೃತಪಟ್ಟಿದ್ದಾನೆ.
ಕೊಲೆಗೈದು ಪೊಲೀಸರಿಗೆ ಮಾಹಿತಿ ನೀಡಿದ ಪರಿಣಾಮ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸುದ್ದಿ ತಿಳಿದ ಎಸ್ಪಿ ಶಿವಪ್ರಕಾಶ್ ದೇವರಾಜು, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.