ಕಬಾಡಿ ವೈನ್ ಲ್ಯಾಂಡ್ ಮೇಲೆ ದಾಳಿ……
ಗದಗ : ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ವತಿಯಿಂದ ಜರುಗಿದ ದಾಳಿಯಲ್ಲಿ 8.27 ಲಕ್ಷ ರೂ. ಮೌಲ್ಯದ ದಾಖಲೆ ರಹಿತ ಮದ್ಯ ದಾಸ್ತಾನು ವಶಕ್ಕೆ ಪಡೆಯಲಾಗಿದೆ.
ಗದಗ ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ಗದಗ ನಗರದ ತಿಲಕ ಪಾರ್ಕ್ ರಸ್ತೆಯಲ್ಲಿರುವ ಕಬಾಡಿ ವೈನ್ ಲ್ಯಾಂಡ್‍ಗೆ ಅನೀರಿಕ್ಷಿತ ದಾಳಿ ವೇಳೆ ಜರುಗಿದ ತಪಾಸಣೆ ಸಮಯದಲ್ಲಿ ಲೆಕ್ಕದ ಪುಸ್ತಕದಲ್ಲಿ ನಮೂದಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಮದ್ಯ ದಾಸ್ತಾನು ಮಾಡಿರುವುದು ಕಂಡು ವಶಕ್ಕೆ ಪಡೆಯಲಾಗಿದೆ.

ತಪಾಸಣೆ ಸಮಯದಲ್ಲಿ ವಿವಿಧ ಬ್ರ್ಯಾಂಡನ್ 1,53,931 ರೂ. ಮೌಲ್ಯದ 796 ಲೀ. ಬೀಯರ್ ಭೌತಿಕ ದಾಸ್ತಾನು ಲೆಕ್ಕದ ಪುಸ್ತಕದಲ್ಲಿ ನಮೂದಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುವುದು ಹಾಗೂ ರೂ. 6,73,102 ರೂ. ಮೌಲ್ಯದ 1139 ಲೀ. ಮದ್ಯ. ಒಟ್ಟಾರೆ 8.27 ಲಕ್ಷ ರೂ. ಮೌಲ್ಯದ ದಾಖಲೆ ರಹಿತ ಮದ್ಯ ಹಾಗೂ ಬಿಯರ ದಾಸ್ತಾನನ್ನು ವಶಕ್ಕೆ ಪಡೆದು ಸಂಬಂಧಿಸಿದವರ ಮೇಲೆ ಅಬಕಾರಿ ಕಾಯ್ದೆ ಉಲ್ಲಂಘನೆಯಡಿ ಪ್ರಕರಣ ದಾಖಲಿಸಲಾಗಿದೆ.

ದಾಳಿ ಸಂದರ್ಭದಲ್ಲಿ ಅಬಕಾರಿ ಉಪ ಆಯುಕ್ತ ಭರತೇಶ, ಅಬಕಾರಿ ಇನ್ಸ್‌ಪೆಕ್ಟರ್ ಶೈನಾಜ್ ಬೇಗಂ ಹಾಗೂ ಸಿಬ್ಬಂದಿಗಳು ಹಾಜರಿದ್ದರು.