ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ಕಾರ್ಟೂನ್ ಚಿತ್ರವೊಂದನ್ನು ಫಾರ್ವರ್ಡ್ ಮಾಡಿದ್ದಕ್ಕಾಗಿ ನೌಕಾದಳದ ನಿವೃತ್ತ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆಗೆ ಒಳಗಾದ 65 ವರ್ಷದ ಮದನ ಶರ್ಮಾ ಮುಖದ ಮೇಲೆ ಗಾಯಗಳಾಗಿದ್ದು, ಕಣ್ಣುಗಳಿಗೂ ಪೆಟ್ಟಾಗಿದೆ. ಖಂಡಾವಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಮುಖಕ್ಕೆ ಮಾಸ್ಕ್ ಧರಿಸಿದ್ದ ಹಲ್ಲೆಕೋರರು ಶಿವಸೇನೆ ಕಾರ್ಯಕರ್ತರು ಎನ್ನಲಾಗಿದೆ.
ಪೂರ್ವ ಖಂಡಾವಲಿಯ ಅಪಾರ್ಟಮೆಂಟ್ ಒಂದರ ನಿವಾಸಿ ಮದನ ಶರ್ಮಾ, ತಮಗೆ ಬಂದಿದ್ದ ಉದ್ಧವ್ ಠಾಕ್ರೆಯವರನ್ನು ವ್ಯಂಗ್ಯ ಮಾಡಿರುವ ಕಾರ್ಟೂನ್ ಸಂದೇಶವನ್ನು ತಮ್ಮ ಅಪಾರ್ಟ್ಮೆಂಟ್ ಸದಸ್ಯರ ಗುಂಪಿಗೆ ಫಾರ್ವರ್ಡ್ ಮಾಡಿದ್ದರು. ಹಲ್ಲೆಕೋರರ ಪೈಕಿ ಒಬ್ಬರು ಅವರಿಗೆ ಕಾಲ್ ಮಾಡಿ ಅಪಾರ್ಟ್ಮೆಂಟ್ ಹೊರಗೆ ಬಂದು ಭೇಟಿಯಾಗಲು ಕೇಳಿದ್ದಾರೆ.
ಭೇಟಿಯಾಗಲು ಬಂದ ಅವರ ಮೇಲೆ ಗುಂಪು ಹಲ್ಲೆ ನಡೆಸಿದೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನಾವಿಸ್ ಸೇರಿದಂತೆ ಹಲವರು ಘಟನೆಯನ್ನು ಖಂಡಿಸಿದ್ದಾರೆ.