ಬೆಂಗಳೂರು: ಬಿಎಂಟಿಸಿ ಬೆಂಗಳೂರು ನಗರದ ಜೀವನಾಡಿ. ಮೆಟ್ರೋ ಶುರುವಾದ್ರೂ ನಗರದಲ್ಲಿ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ಇಳಿಯಾಗಿಲ್ಲ. ನಗರದ ರಸ್ತೆ ರಸ್ತೆಯಲ್ಲೂ ಬಿಎಂಟಿಸಿ ಬಸ್ ಗಳು ಓಡಾಟ ನಿಂತಿಲ್ಲ.
ಬೆಂಗಳೂರಿನ ಟ್ರಾಫಿಕ್ ದಟ್ಟನೆಯಲ್ಲಿ ಓಡಾಟದ ವೇಳೆ ಈ ಬಿಎಂಟಿಸಿ ಬಸ್ ಗಳು ನೆಗಟಿವ್ ಕಾರಣಕ್ಕೆ ತುಂಬಾನೆ ಸುದ್ದಿ ಮಾಡ್ತಾವೆ. ಯಾವಾಗಲೂ ಬಿಎಂಟಿಸಿ ಡ್ರೈವರ್ ಗಳು ಸರಿಯಿಲ್ಲ, ಸರಿಯಾಗಿ ಡ್ರೈವ್ ಮಾಡಲ್ಲ, ರ‌್ಯಾಶ್ ಡ್ರೈವಿಂಗ್ ಮಾಡ್ತಾರೆ ಅನ್ನೋ ಸಾಲು ಸಾಲು ಆರೋಪ ಜನ ಮಾಡ್ತಾರೆ.
ಮುಖ್ಯವಾಗಿ ನಗರದಲ್ಲಿ ಬಿಎಂಟಿಸಿ ಬಸ್ ಗಳು ಆಕ್ಸಿಡೆಂಟ್ ಆಗೋದೇ ಬಿಎಂಟಿಸಿ ಡ್ರೈವರ್ ಗಳ ನಿರ್ಲಕ್ಷ್ಯದಿಂದ ಅಂತ ಎಲ್ಲಾರೂ ದೂರುತ್ತಾರೆ. ಅದರಂತೆ ನಗರದಲ್ಲಿ ಯಾರ್ರಾಬಿರ್ರಿ ಆಕ್ಸಿಡೆಂಡ್ ರೇಟ್ ಹೆಚ್ಚಳವಾಗ್ತಿದೆ. ಇದ್ರಿಂದ ತಲೆಕೆಡಿಸಿಕೊಂಡಿರೋ ಬಿಎಂಟಿಸಿ ಆಡಳಿತ ಮಂಡಳಿ ಪೊಲೀಸ್ ಇಲಾಖೆ ಮೊರೆ ಹೋಗಿದೆ.
ಹೌದು.. ಹೆಸರಿಗೆ ಕಳಂಕ ತಂದುಕೊಂಡಿದ್ದ ಬಿಎಂಟಿಸಿ ಈ ಅಪವಾದದಿಂದ ಮುಕ್ತವಾಗುವಕ್ಕೆ ಹೆಜ್ಜೆ ಇರಿಸಿದೆ. ಹೌದು ಪ್ರತಿ ತಿಂಗಳೂ ನಗರದಲ್ಲಿ ಬಿಎಂಟಿಸಿ ಅಪಘಾತಗಳು ಆಗ್ತಾನೆ ಇವೆ. ಇದು ನಿಯಂತ್ರಣಕ್ಕೆ ಬರ್ತಿಲ್ಲ. 2013-14 ರಲ್ಲಿ 88 ಮಂದಿ ಮೃತಪಟ್ಟಿದ್ದರು.2014-15ರಲ್ಲಿ 78, 2015-16ರಲ್ಲಿ 69, 2016-17ರಲ್ಲಿ 45, 2017 – 18 ರಲ್ಲಿ 44,2022-23 ರಲ್ಲಿ 35 ಮಂದಿ ಬಿಎಂಟಿಸಿ ಬಸ್ ನಿಂದ ಸಾವನ್ನಪ್ಪಿದ್ದಾರೆ.
ಇದನ್ನ ಗಂಭೀರವಾಗಿ ಪರಿಗಣಿಸಿರೋ ಬಿಎಂಟಿಸಿ ಅಧಿಕಾರಿಗಳು ಎಲ್ಲಾ ಡ್ರೈವರ್ ಗಳಿಗೆ ನುರಿತ ತರಬೇತಿ ಕೊಡಿಸಲು ಮುಂದಾಗಿದ್ದಾರೆ ನಗರದ ರಸ್ತೆಗಳಲ್ಲಿ ಹೇಗೆಲ್ಲಾ ಬಸ್ ಓಡಿಸಬೇಕು ಸಿಗ್ನಲ್ ಬಂದಾಗ ಹೇಗೆ ಬಸ್ ಓಡಿಸಬೇಕು ಅನ್ನೋ ಸಂಚಾರಿ ನಿಯಮಗಳ ಬಗ್ಗೆ ಸಂಚಾರಿ ಪೊಲೀಸರು ಡ್ರೈವರ್ ಗಳಿಗೆ ಪಾಠ ಮಾಡಲಿದ್ದಾರೆ.
ನಗರದ ಕಮಾಂಡ್ ಸೆಂಟರ್ ನಲ್ಲಿ ನಿತ್ಯ 50 ಚಾಲಕರಿಗೆ ಪೊಲೀಸರು ತರಬೇತಿ ನೀಡಲಿದ್ದಾರೆ.