ಧಾರವಾಡ: ಮೂರ್ಚೆ ಹೋಗುವ ಚಾಕಲೇಟ್ ಕೊಟ್ಟು ಗೋಲ್ಡ್ ಚೈನ್ ಕಳ್ಳತನ ಮಾಡಿದ ಘಟನೆ ಧಾರವಾಡ ನಗರದ ಶ್ರಿನಿವಾಸ್ ಚಿತ್ರಮಂದಿರದಲ್ಲಿನಡೆದಿದೆ. ಬಿಹಾರ ಮೂದಲ ವ್ಯಕ್ತಿಯಿಂದ ನಡೆದ ಕಳ್ಳತನ ನಡೆದಿದ್ದು, ಮಲ್ಲಿಕಾರ್ಜುನ್ ಎಂಬುವರಿಗೆ ಚಾಕಲೇಟ್ ಕೊಟ್ಟು ಮೂರ್ಚೆ ಹೋಗಿಸಿ ಕೃತ್ಯವೆಸಗಿದ್ದಾನೆ. ನವೆಂಬರ್ 9 ರಂದು ನಡೆದ ಘಟನೆಯಾಗಿದ್ದು, ಉಪ್ಪಿನ ಬೆಟಗೇರಿಯ ಮಲ್ಲಿಕಾರ್ಜುನ ವಿಜಾಪೂರ ಎಂಬುವರಿಗೆ ಗೋಲ್ಡ ಚೈನ್ ಸೇರಿದಾಗಿತ್ತು.
ಸದ್ಯ ಆರೋಪಿಯನ್ನೂ ಧಾರವಾಡ ಶಹರ ಪೋಲಿಸರು ಬಂಧಿಸಿದ್ದಾರೆ. ಮೂರ್ಚೆ ಹೋಗುವ ಚಾಕಲೇಟ್ ಕೊಟ್ಟು ಕಳ್ಳತನ ಮಾಡುವ ಗ‌್ಯಾಂಗ್ ಧಾರವಾಡ ಎಂಟ್ರಿ ಕೊಟ್ಟಿದ್ದು, ಜಿಲ್ಲೆಯಲ್ಲಿ ಜನರು ಬೆಚ್ಚಿ ಬಿದ್ದಿದ್ದಾರೆ. ಸದ್ಯ ಇನ್ನಷ್ಟು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಪೋಲಿಸ್ ಕಮಿಷನರ್ ರೇಣುಕಾ ಸುಕುಮಾರ, ಪ್ರಕರಣ ಕುರಿತು ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿದ್ದಾರೆ.



