ತುಮಕೂರು:-ಪ್ರಯಾಣಿಗರ ಸೋಗಿನಲ್ಲಿ ಇಬ್ಬರು ಕಳ್ಳಿಯರು ಕಳ್ಳತನಕ್ಕೆ ಯತ್ನಿಸಿದ ಘಟನೆ ಕೊರಟಗೆರೆ ಸಮೀಪದ ತುಂಬಾಡಿ ಗ್ರಾಮದ ಬಳಿ ಜರುಗಿದೆ.
Advertisement
ಕಳ್ಳಿಯರನ್ನು ಪ್ರಯಾಣಿಕರು ಸೆರೆ ಹಿಡಿದಿದ್ದಾರೆ. ಈ ಕಳ್ಳಿಯರು, ಚೆಂದದ ಡ್ರೆಸ್ ಮಾಡಿಕೊಂಡು, ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಬಸ್ ಹತ್ತಿದ್ದರು.
ಪ್ರಯಾಣಿಕರೊಬ್ಬರ ಜೇಬಿಗೆ ಕೈ ಹಾಕಿ ಹಣ ಕದಿಯುವಾಗ ಸಿಕ್ಕಿ ಬಿದ್ದಿದ್ದಾರೆ. ಇಬ್ಬರನ್ನು ಹಿಡಿದು ಕೊರಟಗೆರೆ ಪೊಲೀಸರಿಗೆ ಒಪ್ಪಿಸಲಾಗಿದೆ.
ಪಾವಗಡದಿಂದ ತುಮಕೂರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಲ್ಲಿ ಕಳ್ಳತನ ನಡೆದಿದೆ. ಕೊರಟಗೆರೆ ಪೊಲೀಸರಿಂದ ಪ್ರಕರಣ ದಾಖಲಾಗಿದೆ.