HomeCrime Newsಪ್ರಯಾಣಿಗರ ಸೋಗಿನಲ್ಲಿ ಕಳ್ಳತನಕ್ಕೆ ಯತ್ನ: ಇಬ್ಬರು ಕಳ್ಳಿಯರು ಅರೆಸ್ಟ್

ಪ್ರಯಾಣಿಗರ ಸೋಗಿನಲ್ಲಿ ಕಳ್ಳತನಕ್ಕೆ ಯತ್ನ: ಇಬ್ಬರು ಕಳ್ಳಿಯರು ಅರೆಸ್ಟ್

For Dai;y Updates Join Our whatsapp Group

ತುಮಕೂರು:-ಪ್ರಯಾಣಿಗರ ಸೋಗಿನಲ್ಲಿ ಇಬ್ಬರು ಕಳ್ಳಿಯರು ಕಳ್ಳತನಕ್ಕೆ ಯತ್ನಿಸಿದ ಘಟನೆ ಕೊರಟಗೆರೆ ಸಮೀಪದ ತುಂಬಾಡಿ ಗ್ರಾಮದ ಬಳಿ ಜರುಗಿದೆ.

ಕಳ್ಳಿಯರನ್ನು ಪ್ರಯಾಣಿಕರು ಸೆರೆ ಹಿಡಿದಿದ್ದಾರೆ. ಈ ಕಳ್ಳಿಯರು, ಚೆಂದದ ಡ್ರೆಸ್ ಮಾಡಿಕೊಂಡು, ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಬಸ್ ಹತ್ತಿದ್ದರು.

ಪ್ರಯಾಣಿಕರೊಬ್ಬರ ಜೇಬಿಗೆ ಕೈ ಹಾಕಿ ಹಣ ಕದಿಯುವಾಗ ಸಿಕ್ಕಿ ಬಿದ್ದಿದ್ದಾರೆ. ಇಬ್ಬರನ್ನು ಹಿಡಿದು ಕೊರಟಗೆರೆ ಪೊಲೀಸರಿಗೆ ಒಪ್ಪಿಸಲಾಗಿದೆ.

ಪಾವಗಡದಿಂದ ತುಮಕೂರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಲ್ಲಿ ಕಳ್ಳತನ ನಡೆದಿದೆ. ಕೊರಟಗೆರೆ ಪೊಲೀಸರಿಂದ ಪ್ರಕರಣ ದಾಖಲಾಗಿದೆ.

 

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img