ಹುಬ್ಬಳ್ಳಿ: ಕರ್ನಾಟಕದಲ್ಲಿ ಕೊರೊನಾ ಆತಂಕ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ. ಜಿಲ್ಲೆಯಿಂದ ಜಿಲ್ಲೆಗೆ ವ್ಯಾಪಿಸುತ್ತಿದೆ. ಕೊರೊನಾ ವೈರಸ್ನ ಜೆಎನ್1 ರೂಪಾಂತರಿ ತಳಿ ಭೀತಿ ಮಾತ್ರ ಹೆಚ್ಚಾಗಿದೆ. ರಾಜ್ಯದಲ್ಲಿ ಕೋವಿಡ್ ಮತ್ತೆ ಮೆಲ್ಲಗೆ ಶುರುವಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ಪಾಸಿಟಿವ್ ಕೇಸ್ಗಳು ಪತ್ತೆಯಾಗುತ್ತಿವೆ.
ಈಗಾಗಲೇ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಎಲ್ಲಾ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ. ಮುಂಜಾಗ್ರತಾ ಕ್ರಮವಾಗಿ ಸರ್ಕಾರದ ಮಾರ್ಗಸೂಚಿ ಪಾಲಿಸುವಂತೆ ಹುಬ್ಬಳ್ಳಿ ಕಿಮ್ಸ್ ನಿರ್ದೇಶಕರು ಮನವಿ ಮಾಡಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್ನಲ್ಲಿ ಮುಂಜಾಗ್ರತಾ ಕ್ರಮಕೈಗೊಂಡಿದ್ದು, ಕೋವಿಡ್ ಎದುರಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಕೋವಿಡ್ ರೋಗಿಗಳಿಗಾಗಿ 100 ಬೆಡ್ ಮೀಸಲಿಡಲಾಗಿದ್ದು, 60 ಆಕ್ಸಿಜನ್, 40 ಬೆಡ್ ಆಕ್ಸಿಜನ್ ಜೊತೆಗೆ ICU ವ್ಯವಸ್ಥೆ ಮಾಡಲಾಗಿದೆ.
ಈಗಾಗಲೇ ವೈದ್ಯರೊಂದಿಗೆ ಮೀಟಿಂಗ್ ಮಾಡಿರುವ ನಿರ್ದೇಶಕರು ಕೋ ಆರ್ಡಿನೇಟರ್ ನೇಮಕ ಮಾಡಿದೆ. ಕೋವಿಡ್ ಎದುರಿಸಲು ಎಲ್ಲ ರೀತಿಯಲ್ಲಿ ಸಿದ್ದತೆ ಮಾಡಿಕೊಂಡಿದ್ದೇವೆ. ರೋಗಿಗಳಿಗಾಗಿ 100 ಬೆಡ್ ಮೀಸಲಿಡಾಗಿದೆ. ಕಿಮ್ಸ್ನಲ್ಲಿ ಆಕ್ಸಿಜನ್ ಸಮಸ್ಯೆ ಇಲ್ಲ. 40 KL ಫ್ಲಾಂಟ್ ನಮ್ಮಲ್ಲಿ ಇದೆ ಎಂದು ಕಿಮ್ಸ್ ನಿರ್ದೇಶಕ ಕಮ್ಮಾರ್ ಹೇಳಿದ್ದಾರೆ.