ಗದಗ: ಕಳಸಾಪೂರ ಗ್ರಾಮಕ್ಕೆ ಹೊರಟಿದ್ದ ಬೈಕ್‌ವೊಂದಕ್ಕೆ ವೇಗವಾಗಿ ಬಂದ ಸರಕಾರಿ ಜೀಪೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಹುಬ್ಬಳ್ಳಿ-ಕೊಪ್ಪಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಜರುಗಿದೆ.
ಕಣಗಿನಹಾಳ ಗ್ರಾಮದ ಶಿವಪ್ಪ ಮಾದರ (55) ಮೃತಪಟ್ಟ ದುರ್ಧೈವಿ. ಮೃತ ಶಿವಪ್ಪ ಕಳಸಾಪೂರ ಗ್ರಾಮಕ್ಕೆ ಹೊರಟಿದ್ದ ಎನ್ನಲಾಗಿದೆ.
ಗದಗ ಶಹರದಿಂದ ರಾಷ್ಟ್ರೀಯ ಹೆದ್ದಾರಿ ಎಂಟ್ರಿ ಸಂದರ್ಭದಲ್ಲಿ ವೇಗವಾಗಿ ಬಂದ ಕೆಸಿಸಿ ಬ್ಯಾಂಕ್‌ಗೆ ಸೇರಿದ ಜೀಪ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಹಾಗೂ ಸವಾರ ನೂರು ಅಡಿ ದೂರ ಬಿದ್ದಿದೆ.
ಅಪಘಾತದ ನಂತರ ಜೀಪ ಚಾಲಕ ಪರಾರಿಯಾಗಿದ್ದು, ಜೀಪ ಧಾರವಾಡದಿಂದ ಮುಂಡರಗಿ ತಾಲೂಕಿನ ಡಂಬಳ ಗ್ರಾಮಕ್ಕೆ ಹೊರಟಿತ್ತು ಎನ್ನಲಾಗಿದೆ.
ಸುದ್ದಿ ತಿಳಿದ ಸುತ್ತಮುತ್ತಲಿನ ಗ್ರಾಮಸ್ಥರು ಘಟನೆ ಖಂಡಿಸಿ ರಸ್ತೆತಡೆ ನಡೆಸಿದರು.
ಈ ಸಂದರ್ಭದಲ್ಲಿ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ ಪ್ರತಿಭಟನಾಕಾರರು, ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಒತ್ತಾಯಿಸಿದರು.