Homecultureಧರ್ಮದ ಮರ್ಮವನ್ನು ಅರಿಯಬೇಕು

ಧರ್ಮದ ಮರ್ಮವನ್ನು ಅರಿಯಬೇಕು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ಸುಕ್ಷೇತ್ರ ಬಳಗಾನೂರಿನ ಚಿಕೇನಕೊಪ್ಪದ ಚನ್ನವೀರ ಶರಣರ ಮಠದಲ್ಲಿ ಚನ್ನವೀರ ಶರಣರ ೨೯ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವದ ಅಂಗವಾಗಿ ಮಹಾತ್ಮರ ಜೀವನ ದರ್ಶನ, ಪ್ರವಚನ ಮಂಗಲೋತ್ಸವ ಜರುಗಿತು.

ಸನ್ನಿಧಾನ ವಹಿಸಿದ ಮುಂಡರಗಿಯ ಜಗದ್ಗುರು ಅನ್ನದಾನೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶರಣರು ಜ್ಞಾನ ಮತ್ತು ವೈರಾಗ್ಯದ ಮೂಲಕ ಬಂದಂತವರು. ನಗು ನಗುತ್ತಾ ಸಂಕಷ್ಟಗಳನ್ನು ಎದುರಿಸಿ ಬೆಳೆದವರು. ತಮ್ಮ ಜೀವನವನ್ನು ತ್ಯಾಗ ಮತ್ತು ಸೇವೆಯ ಮೂಲಕ ಸವೆಸಿದವರು. ಶ್ರೀ ಶಿವಶಾಂತವೀರ ಶರಣರು, ಶಿಕ್ಷಣ, ದಾಸೋಹ, ಸಮಾಜಮುಖಿಯಾಗಿ ಕಾರ್ಯ ಮಾಡುವುದರ ಮೂಲಕ ಚನ್ನವೀರ ಶರಣರು ಸಂಕಲ್ಪಗಳನ್ನು ಈಡೇರಿಸುತ್ತಿರುವುದು ಉತ್ತಮ ಬೆಳೆವಣೆಗೆಯಾಗಿದೆ. ಮನುಷ್ಯ ಅಧರ್ಮ, ಅನ್ಯಾಯ, ಅತ್ಯಾಚಾರ ದೂರಿಕರಿಸಿ ಧರ್ಮದ ಮರ್ಮವನ್ನು ಅರಿತುಕೊಳ್ಳಬೇಕು. ಧರ್ಮದಿಂದ ಅಭ್ಯುದಯದ ಬೆಳೆವಣೆಗೆಯಾಗಿ ಮುಕ್ತಿ ಹೊಂದಬೇಕು, ಪರೋಪಕಾರ ಪುಣ್ಯಮಾಡಬೇಕು. ಪರಪೀಡನೆ ಎಂದೂ ಮಾಡಬಾರದೆಂದು ಆಶೀರ್ವಚನ ನೀಡಿದರು.

ಹೂವಿನಹಡಗಲಿ ಗವಿಮಠದ ಡಾ. ಹಿರಿಶಾಂತವೀರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶರಣರು ಭಕ್ತಿ ಮತ್ತು ದಾಸೋಹ ಪರಂಪರೆಯನ್ನು ಬೆಳೆಸಿ ಕಲೆ, ಸಂಸ್ಕೃತಿಯನ್ನು ಬೆಳೆಸಿಕೊಂಡು ಬರುವಲ್ಲಿ ಹೆಚ್ಚು ಪ್ರಯತ್ನಿಸಿದವರು ಎಂದು ಶರಣರ ಒಡನಾಟವನ್ನು ಸ್ಮರಿಸಿದರು. ಗುಡದೂರಿನ ಶ್ರೀ ನೀಲಕಂಠ ತಾತನವರು ಮೈನಳ್ಳಿ, ಬಿಕನಳ್ಳಿಯ ಶ್ರೀ ಸಿದ್ದೇಶ್ವರ ಸ್ವಾಮಿಗಳು ಸಮ್ಮುಖ ವಹಿಸಿದ್ದರು.

ಚುರ್ಚಿಹಾಳದ ವೇ.ಮೂ. ಪುಟ್ಟರಾಜ ಶಾಸ್ತ್ರಿಗಳು ಪ್ರವಚನದ ಮಂಗಲದ ನುಡಿಗಳನ್ನಾಡಿದರು. ಕಲಬುರ್ಗಿಯ ಸಂಗಮೇಶ ಎಸ್.ನೀಲಾ, ಕುಷ್ಟಗಿಯ ಪ್ರತಾಪಕುಮಾರ ಹಿರೇಮಠ ಅವರಿಂದ ಸಂಗೀತ ಸೇವೆ ಜರುಗಿತು. ಇದೇ ಸಂದರ್ಭದಲ್ಲಿ ಶ್ರೀಮಠದ ಸದ್ಭಕ್ತರಿಂದ ಶ್ರೀ ಶಿವಶಾಂತವೀರ ಶರಣರ ತುಲಾಭಾರ ಭಕ್ತಿಸೇವೆ ಜರುಗಿತು. ಪ್ರಾ. ಆಯ್.ಎಸ್. ಹೂಗಾರ ಸ್ವಾಗತಿಸಿದರು. ಶಿವಲಿಂಗಶಾಸ್ತ್ರಿಗಳು ಸಿದ್ದಾಪೂರ ನಿರೂಪಿಸಿದರು. ಮುಖ್ಯೋಪಾಧ್ಯಾಯ ಎಸ್.ಎಸ್. ಹಿರೇಮಠ ವಂದಿಸಿದರು.

ಸಮ್ಮುಖ ವಹಿಸಿದ ಅಣ್ಣಿಗೇರಿ ದಾಸೋಹ ಮಠದ ಶ್ರೋ.ಬ್ರ. ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ, ಮನುಷ್ಯ ಬಳಸಿದಂತೆ ಜ್ಞಾನಸಂಪತ್ತು ಹೆಚ್ಚಾಗುವುದು. ಆದರೆ ಗಳಿಸಿದ ಸಂಪತ್ತು ಬಳಸಿದಂತೆ ಕಳೆದುಹೋಗುತ್ತದೆ. ಜ್ಞಾನಸಂಪತ್ತು ಸದಾವಕಾಲ ಉಳಿಯುವುದು. ಶ್ರೀಗುರು ಕೃಪೆಗೆ ಪಾತ್ರನಾಗಿ ತನ್ನ ಜ್ಞಾನವನ್ನು ಹೆಚ್ಚಿಸಿಕೊಂಡು ಉತ್ತಮ ಬದುಕು ಪಡೆಯಬೇಕೆಂದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!