ದಾನ-ಧರ್ಮಗಳಿಗೆ ದೇವರು ಮೆಚ್ಚುತ್ತಾನೆ

0
banashankari devi
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸಮೀಪದ ಹೂವಿನಶಿಗ್ಲಿ ಗ್ರಾಮದ ಶ್ರೀ ಬನಶಂಕರಿ ದೇವಿ ದೇವಸ್ಥಾನದ ಲೋಕಾರ್ಪಣೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಬನಶಂಕರಿದೇವಿ ಮೂರ್ತಿಯನ್ನು ಚಂಡೆ-ಮದ್ದಳೆ, ಡೊಳ್ಳು ಭಜನೆ ಮತ್ತು ನೂರಾರು ಮುತ್ತೈದೆಯರು ಕುಂಭವನ್ನು ಹೊತ್ತು ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ತಂದು ವಿಧಾನಗಳ ಮೂಲಕ ಇರಿಸಲಾಯಿತು. ಸಂಜೆ ನಡೆದ ಧರ್ಮ ಸಭೆಯನ್ನು ಶಿಗ್ಲಿಯ ದೇವಾಂಗ ಸಮಾಜದ ಹಿರಿಯ ಮುಖಂಡ ಸೀತಾರಾಮಪ್ಪ ಹುಲಗೂರು ಉದ್ಘಾಟಿಸಿದರು. ಸಭೆಯ ಸಾನ್ನಿಧ್ಯವನ್ನು ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ವಹಿಸಿದ್ದರು.

Advertisement

ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದ ಶ್ರೀಗಳು, ಭಕ್ತಿಗೆ ವಿಶೇಷ ಪ್ರಾಧಾನ್ಯತೆಯಿದ್ದು, ಭಕ್ತಿಯಿಂದ ಅನೇಕ ಕಾರ್ಯಗಳು ಒಳ್ಳೆಯದಾಗಿ ಜರುಗುತ್ತವೆ. ಬನಶಂಕರಿ ದೇವಿ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಇಂತಹ ವಿಧಾಯಕ ಕಾರ್ಯಕ್ರಮಗಳು ನಡೆಯುತ್ತಾ ಬಂದಿರುವುದು ಸಂತಸ ತಂದಿದೆ. ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ಶ್ರದ್ಧೆಯಿಂದ ಪಾಲ್ಗೊಂಡಿರುವದು ಉತ್ತಮ ವಿಚಾರ. ಮನುಷ್ಯ ಮಾನಸಿಕವಾಗಿ ಆರೋಗ್ಯವಾಗಿರಬೇಕಾದರೆ ದೇವಸ್ಥಾನಗಳಲ್ಲಿ, ಮಠ-ಮಂದಿರಗಳಲ್ಲಿ ಪೂಜೆ ಪುನಸ್ಕಾರಗಳಲ್ಲಿ ಪಾಲ್ಗೊಂಡು ದಾನ-ಧರ್ಮಗಳಲ್ಲಿ ಮನಸ್ಸು ತೊಡಗಿಸಿದರೆ ದೇವರು ಮೆಚ್ಚುತ್ತಾನೆ ಎಂದು ನುಡಿದರು.

ರಾಮಣ್ಣ ಬ್ಯಾಹಟ್ಟಿ ರಚಿಸಿದ ಶ್ರೀ ಬನಶಂಕರಿ ದೇವಿ ಪುರಾಣ ಪ್ರವಚನವನ್ನು ಶ್ರೀ ಗವಿಸಿದ್ದೇಶ್ವರ ಶಾಸ್ತಿçಗಳು ನಡೆಸಿಕೊಟ್ಟರು. ಸಂಗೀತ ಕಲಾವಿದರಾದ ಬಸವರಾಜ ಗದಗ್ ಹಾಗೂ ಜಗದೀಶ್ ಕುಮಾರ್ ತಮ್ಮ ಅದ್ಭುತ ಸಂಗೀತ ಗಾಯನದೊಂದಿಗೆ ಜನಮನ ರಂಜಿಸಿದರು. ವೇದಿಕೆ ಮೇಲೆ ಗ್ರಾ.ಪಂ ಅಧ್ಯಕ್ಷೆ ಲಕ್ಷö್ಮವ್ವ ಗಡ್ಡಣ್ಣವರ್, ಸದಸ್ಯರಾದ ಶೇಖಪ್ಪ ಆಡಿನ್, ನಿಂಗಪ್ಪ ಸೊರಟೂರು, ಎಲ್ಲಮ್ಮ ಕುಂದಗೋಳ, ಲಕ್ಷö್ಮಣ ಶೆಗಡಿ, ಸಂತೋಷ ಬುಗಟಿ, ಗ್ರಾಮದ ಹಿರಿಯರಾದ ಯಲ್ಲಪ್ಪ ವಾಲಿಕಾರ್, ಬಿ.ಎಸ್. ಪಾಟೀಲ್, ಯಲ್ಲಪ್ಪ ಬಾರಕೇರ, ನಿಂಗಪ್ಪ ಹೊಳಲದ, ದೇವೇಂದ್ರಪ್ಪ ಬಿದರಿ ಇವರನ್ನು ದೇವಾಂಗ ಸಮಾಜದ ಹಿರಿಯರ ಪರವಾಗಿ ಶ್ರೀಗಳು ಸತ್ಕರಿಸಿದರು.


Spread the love

LEAVE A REPLY

Please enter your comment!
Please enter your name here