HomeEducationಶಿಕ್ಷಕರ ಮನಗೆದ್ದ ಪುಟ್ಟಣ್ಣನವರಿಗೆ ಸನ್ಮಾನ

ಶಿಕ್ಷಕರ ಮನಗೆದ್ದ ಪುಟ್ಟಣ್ಣನವರಿಗೆ ಸನ್ಮಾನ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಸತತ ೫ನೇ ಬಾರಿಗೆ ಬೆಂಗಳೂರು ಶಿಕ್ಷಕರ ಮತಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಪುಟ್ಟಣ್ಣ ಅವರು ಶಿಕ್ಷಕರ ಮನ ಗೆದ್ದ ಶಿಕ್ಷಕರ ರಕ್ಷಕ ಎಂದು ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ.ಹನುಮಂತಗೌಡ ಆರ್.ಕಲ್ಮನಿ ಹೇಳಿದರು.

ಬೆಂಗಳೂರಿನಲ್ಲಿರುವ ಪುಟ್ಟಣ್ಣರವರ ಗೃಹ ಕಚೇರಿಗೆ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ನಿಯೋಗ ತೆರಳಿ ಸಂಘದ ಪರವಾಗಿ ಸನ್ಮಾನಿಸಿ ಗೌರವಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಡಾ. ವಿನೋದಚೆಂದ ಪೀಟರ್, ಧಾರವಾಡ ಜಿಲ್ಲಾಧ್ಯಕ್ಷ ಸಿ.ಎಂ. ಕಲಕೇರಿ, ಕೆ.ಎನ್. ಪ್ರವೀಣ, ಎನ್.ಎಂ.ಕುಮಾರ್, ಮಹೇಶ್ ಬಿ.ಹೆಬ್ಬಾಳಕುಮಾರ್ ಸೇರಿದಂತೆ ಅತಿಥಿ ಉಪನ್ಯಾಸಕರ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img