HomeEducationವಿದ್ಯಾರ್ಥಿಗಳಿಗೆ ಕಲಿಕಾ ಮೇಳ ಸಹಕಾರಿ

ವಿದ್ಯಾರ್ಥಿಗಳಿಗೆ ಕಲಿಕಾ ಮೇಳ ಸಹಕಾರಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ಕಲಿಕಾ ಮೇಳದಿಂದ ಮಕ್ಕಳಲ್ಲಿ ಅಡಗಿರುವ ಸುಪ್ತ ಶಕ್ತಿಯನ್ನು ಹೊರತರಲು ಸಹಾಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಸವರಾಜಪ್ಪ ಹೇಳಿದರು.

ತಾಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ಶಾಲಾ ಶಿಕ್ಷಣ ಇಲಾಖೆ, ಹೊಸಪೇಟೆ ಅಜೀಮ್ ಪ್ರೇಮ್‌ಜಿ ಫೌಂಡೇಶನ್ ಜಿಲ್ಲಾ ಸಂಸ್ಥೆ ಬಳ್ಳಾರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಹರಪನಹಳ್ಳಿ ಸಮೂಹ ಸಂಪನ್ಮೂಲ ಕೇಂದ್ರ ಮತ್ತಿಹಳ್ಳಿ, ಗ್ರಾ.ಪಂ ಮತ್ತಿಹಳ್ಳಿ ಇವರ ಸಹಯೋಗದಲ್ಲಿ ಮತ್ತಿಹಳ್ಳಿ ಕ್ಲಸ್ಟರ್ ಮಟ್ಟದ ಮಕ್ಕಳ ಎಫ್‌ಎಲ್‌ಎನ್ ಕಲಿಕಾ ಮೇಳದಲ್ಲಿ ಅವರು ಮಾತನಾಡಿದರು.

ಸಿಆರ್‌ಪಿ ಎಲ್.ಹೆಚ್. ಗಿರಿರಾಜ್ ಮಾತನಾಡಿ, ಒಂದು ಮಗು ಪ್ರತ್ಯಕ್ಷವಾಗಿ ಮಾಡಿ ಕಲಿತಿರುವುದಕ್ಕಿಂತ ಮೇಳದಲ್ಲಿ ನೋಡಿ ಕಲಿಯುವುದು ಬಹಳ ಇದೆ ಹಾಗೂ ಇಂತಹ ಮೇಳಗಳು ಗ್ರಾಮೀಣ ಭಾಗದ ಮಕ್ಕಳಿಗೆ ಅವಶ್ಯಕವಾಗಿದೆ ಎಂದರು.

ಹರಪನಹಳ್ಳಿ ತಾಲೂಕು ಸ.ಮಾ ಹಿರಿಯ ಪ್ರಾಥಮಿಕ ಶಾಲೆ ಮತ್ತಿಹಳ್ಳಿ ಕ್ಲಸ್ಟರ್ ಹಂತದ ಕಲಿಕಾ ಮೇಳ ಕಾರ್ಯಕ್ರಮವನ್ನು ಮತ್ತಿಹಳ್ಳಿ ಗ್ರಾ.ಪಂ ಅಧ್ಯಕ್ಷ ಸಣ್ಣ ಹೊನ್ನಪ್ಪನವರು ಉದ್ಘಾಟಿಸಿದರು. ಕ್ಲಸ್ಟರ್‌ನ ಎಲ್ಲಾ ಶಾಲೆಯ ಮಕ್ಕಳು ವಿವಿಧ ಮಾದರಿಗಳೊಂದಿಗೆ ಆಗಮಿಸಿ ಸ್ವತಃ ವಿವರಿಸಿದರು.

ಕಾರ್ಯಕ್ರಮದಲ್ಲಿ ಬಿಆರ್‌ಸಿ ಹೊನ್ನೇತ್ತಪ್ಪ, ವಾಗೀಶ್, ಅಣ್ಣಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಮಂಜಣ್ಣ, ಪಿಡಿಒ ಹಾಲಪ್ಪ, ಸಂಪನ್ಮೂಲ ವ್ಯಕ್ತಿ ರಮೇಶ್, ಸುಜಾತ, ವೀರೇಂದ್ರ, ಮುಖ್ಯ ಗುರುಗಳಾದ ಹನುಮಂತಪ್ಪ, ಕೊಟ್ರೇಶ್ ಇತರರರು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!