HomeGadag Newsನೂತನ ರಾಜ್ಯಾಧ್ಯಕ್ಷರ ನೇಮಕ

ನೂತನ ರಾಜ್ಯಾಧ್ಯಕ್ಷರ ನೇಮಕ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವ ದಿ. ಸಿ.ಎಸ್. ಶಿವಳ್ಳಿಯವರ ಸಹೋದರ ಮುತ್ತಣ್ಣ ಶಿವಳ್ಳಿ ಅವರನ್ನು ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆಯ ನೂತನ ರಾಜ್ಯಾಧ್ಯಕ್ಷರನ್ನಾಗಿ ಸಂಸ್ಥಾಪಕ ಅಧ್ಯಕ್ಷ ಎಂ.ಆಯ್. ಮುಳುಗುಂದ ನೇಮಕ ಮಾಡಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಎಮ್.ಆಯ್. ಮುಳಗುಂದ, ನಿರ್ಗಮಿತ ರಾಜ್ಯಾಧ್ಯಕ್ಷ ಸುರೇಶ ಎಚ್.ಮೇದಾರ ವೇದಿಕೆಗೆ ನೀಡಿದ ಸೇವೆಯನ್ನು ಶ್ಲಾಘಿಸಿ, ಇನ್ನು ಮುಂದೆ ಸುರೇಶ ಮೇದಾರರು ಸಂಸ್ಥಾಪಕ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.

ಮುತ್ತಣ್ಣ ಶಿವಳ್ಳಿ ಮಾತನಾಡಿ, ವೇದಿಕೆಯನ್ನು ಇಲ್ಲಿಯವರೆಗೆ ನಡೆಸಿಕೊಂಡು ಬಂದ ಮಾರ್ಗದಲ್ಲಿಯೇ ನಾನು ಕೂಡಾ ನಡೆಸಿಕೊಂಡು ಹೋಗುತ್ತೇನೆ ಎಂದರು. ರಾಜ್ಯ ಸಂಚಾಲಕ ರಾಜಶೇಖರ ಕಾತರಕಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಸಭೆಯಲ್ಲಿ ಆಯ್.ಎನ್. ಹುಬ್ಬಳ್ಳಿ, ಶಾಹುಲ ಹಮೀದ, ವಿಕ್ರಾಂತ ಅಬ್ಬಿಗೇರಿ, ವಿಕಾಸ ಮಿಸ್ಕಿನ, ನೂರುಲ್ಲಾಖಾನ ಪಠಾಣ, ಪ್ರಕಾಶ ಅಣ್ಣಿಗೇರಿ, ಮಂಜು ಅಕ್ಕಿ, ದೇವಪ್ಪ ಮಲ್ಲಸಮುದ್ರ, ಸೋಮಶೇಖರ ಟಣಕೆದಾರ, ನವೀನ ಒಳಗುಂದಿ, ಸುವರ್ಣಾ ನಾಲವಾಡ, ಶಿವಲೀಲಾ ಭಜಂತ್ರಿ, ಆಶಾ ಬಡಿಗೇರ, ಸಾವಿತ್ರಿ ಕಲಾಲ, ಸ್ವಪ್ನಾ ನಾಯಕರ, ಅಕ್ಬರ್ ಬೇಗ್ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img