ಒಡೆದು ಆಳುವ ನೀತಿ ಶೋಭೆ ತರದು

0
pratibhatane
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದಲ್ಲಿ ಗುರುವಾರ ನಡೆದ ಸಂತ ಸೇವಾಲಾಲ ಮಹಾರಾಜರ ತಾಲೂಕಾ ಮಟ್ಟದ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಆದರಹಳ್ಳಿ ಗ್ರಾಮದ ಗವಿಸಿದ್ದೇಶ್ವರ ಮಠದ ಕುಮಾರ ಮಹಾರಾಜ ಶ್ರೀಗಳು ಮತ್ತು ಸಮಾಜ ಬಾಂಧವರು, ಭಕ್ತರು ಪ್ರತಿಭಟನೆ ನಡೆಸಿದ ಘಟನೆ ಜರುಗಿದೆ.

Advertisement

ಲಂಬಾಣಿ ಬಂಜಾರ ಸಮಾಜ ಶ್ರೀ ಕುಮಾರ ಮಹಾರಾಜರು ಸೇವಾಲಾಲ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಸಮಾಜದ ಗುರುಗಳಾದ ತಮ್ಮನ್ನು ಅವಮಾನಿಸುವ ಉದ್ದೇಶದಿಂದಲೇ ಆಹ್ವಾನ ನೀಡಿಲ್ಲ. ಸಮಾಜದ ಕಾರ್ಯಕ್ರಮವನ್ನು ರಾಜಕೀಕರಣಗೊಳಿ ಸಮಾಜವನ್ನು ಒಡೆಯುವ ಕಾರ್ಯ ಮಾಡುತ್ತಿದ್ದಾರೆ. ನಮ್ಮನ್ನಷ್ಟೇ ಅಲ್ಲದೇ ಸಮಾಜದ ಜಿಲ್ಲಾಧ್ಯಕ್ಷರು, ಸಮಾಜದ ಹಿರಿಯರನ್ನು ನಿರ್ಲಕ್ಷಿಸಿ ಒಂದು ಪಕ್ಷಕ್ಕೆ ಸೀಮಿತಗೊಳಿಸಿ ಸಮಾಜವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದು ಸಮಾಜಕ್ಕೆ ಕೆಟ್ಟ ಸಂದೇಶ ನೀಡುತ್ತದೆ. ಸದಾಶಿವ ಆಯೋಗದ ವರದಿ ಜಾರಿ ವಿರೋಧಿಸಿ ಹೋರಾಟ ನಡೆಸಲು ಮಾತ್ರ ಇವರಿಗೆ ಸಮಾಜದ ಶ್ರೀಗಳು ಬೇಕಾ? ಸಮಾಜದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ನಮ್ಮನ್ನು ರಾಜಕೀಯ ಉದ್ದೇಶದಿಂದ ಕೆಲವರ ಮಾತು ಕೇಳಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲೂ ತಮ್ಮ ಹೆಸರನ್ನು ಹಾಕಿಸದಂತೆ ಸಂಘಟಕರು ಸಣ್ಣತನ ತೋರಿದ್ದಾರೆ ಎಂದು ಹರಿಹಾಯ್ದರು. ತಮ್ಮನ್ನು ನಿರ್ಲಕ್ಷಿಸಿರುವ ಕಾರಣ ಹೇಳುವವರೆಗೂ ತಾವು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ, ಹನಿ ನೀರು ಕುಡಿಯುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಚನ್ನಪ್ಪ ಲಮಾಣಿ, ರಾಜಕೀಯ ದ್ವೇಷ, ಅಸೂಯೆ ಏನೇ ಇರಲಿ. ಸೇವಾಲಾಲ ಜಯಂತಿ ಮತ್ತು ಸಂಘಟನೆಯ ಕಾರ್ಯಕ್ರಮದಲ್ಲಿ ಸಮಾಜದ ಶ್ರೀ ಕುಮಾರ ಮಹಾರಾಜರನ್ನು ಉದ್ದೇಶ ಪೂರ್ವಕವಾಗಿ ಕೈಬಿಟ್ಟಿರುವುದು ಖಂಡನೀಯ. ಶ್ರೀಗಳು ಸಮಾಜದ ಶ್ರೇಯೋಭೀವೃದ್ಧಿಗಾಗಿ ಸಮರ್ಪಿಸಿಕೊಂಡಿದ್ದು, ಅವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ. ಈ ರೀತಿ ಸಮಾಜವನ್ನು ಒಡೆದು ಆಳುವ ನೀತಿ ಯಾರಿಗೂ ಶೋಭೆ ತರುವುದಿಲ್ಲ. ಇದಕ್ಕೆ ಸಂಘದ ತಾಲೂಕಾ ಅಧ್ಯಕ್ಷರೇ ಕಾರಣೀಕರ್ತರಾಗಿದ್ದು, ಅವರು ಶ್ರೀಗಳ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.

ಸಂಜೆ ಪ್ರತಿಭಟನಾ ನಿತರ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ರಾಮಣ್ಣ ಲಮಾಣಿ ಮತ್ತು ಕೆಲ ಮುಖಂಡರು ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಈ ವೇಳೆ ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಮತ್ತು ತಮ್ಮ ಹೆಸರು ಹಾಕಿಸದಂತೆ ತಡೆದವರು ಇಲ್ಲಿಗೆ ಬಂದು ತಮಗೆ ಸೂಕ್ತ ಕಾರಣ ನೀಡಬೇಕು ಎಂದು ಪಟ್ಟುಹಿಡಿದ್ದರಿಂದ ರಾತ್ರಿಯವರೆಗೂ ಪ್ರತಿಭಟನೆ ಮುಂದುವರೆದಿತ್ತು.

ಪ್ರತಿಭಟನೆಯಲ್ಲಿ ಸುರೇಶ ಲಮಾಣಿ, ಚಂದ್ರಕಾಂತ ಲಮಾಣಿ, ಅಲ್ಲಾಭಕ್ಷಿ ವಾಲಿಕಾರ, ಮಂಜು ಲಮಾಣಿ, ಚನ್ನಪ್ಪ ಲಮಾಣಿ, ಧರ್ಮಣ್ಣ ಲಮಾಣಿ, ಲಚ್ಚಪ್ಪ ಲಮಾಣಿ, ನಾಗೇಶ ಲಮಾಣಿ, ರಮೇಶ ಲಮಾಣಿ, ತೀಪಲಪ್ಪ ಲಮಾಣಿ, ಶಂಕರ ಲಮಾಣಿ ಇದ್ದರು.

ಸಂಜೆ ಪ್ರತಿಭಟನಾ ನಿತರ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ರಾಮಣ್ಣ ಲಮಾಣಿ ಮತ್ತು ಕೆಲ ಮುಖಂಡರು ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಈ ವೇಳೆ ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಮತ್ತು ತಮ್ಮ ಹೆಸರು ಹಾಕಿಸದಂತೆ ತಡೆದವರು ಇಲ್ಲಿಗೆ ಬಂದು ತಮಗೆ ಸೂಕ್ತ ಕಾರಣ ನೀಡಬೇಕು ಎಂದು ಪಟ್ಟುಹಿಡಿದ್ದರಿಂದ ರಾತ್ರಿಯವರೆಗೂ ಪ್ರತಿಭಟನೆ ಮುಂದುವರೆದಿತ್ತು.


Spread the love

LEAVE A REPLY

Please enter your comment!
Please enter your name here