ವಿಜಯಸಾಕ್ಷಿ ಸುದ್ದಿ, ಗದಗ : ಆನಂದಕಂದರು ತಮ್ಮ ಕವನ, ಸಣ್ಣಕಥೆ, ಕಾದಂಬರಿ, ರೂಪಕ, ಚರಿತ್ರೆ, ಶಿಶುಸಾಹಿತ್ಯ, ಮೀಮಾಂಸೆ, ವಿಮರ್ಶೆ, ಸಂಶೋಧನೆ, ಸಂಪಾದನೆ, ಜಾನಪದ ಮತ್ತು ಪತ್ರಿಕಾ ಸಂಪಾದನೆಗಳಂತಹ ನಿರಂತರ ಕಾಯಕಗಳ ಮೂಲಕ ಇಡೀ ನಾಡನ್ನು ಬೆಳಗಿ ಕನ್ನಡ ನಾಡಿನ ಅಸಂಖ್ಯಾತ ಪ್ರತಿಭೆಗಳನ್ನೂ ಹುಟ್ಟು ಹಾಕಿದರು ಎಂದು ಖ್ಯಾತ ಸಾಹಿತಿ, ವಿಶ್ರಾಂತ ಪ್ರಾಚಾರ್ಯ ಚಂದ್ರಶೇಖರ ವಸ್ತ್ರದ ನುಡಿದರು.
ಡಾ.ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ ಬೆಳಗಾವಿ ಹಾಗೂ ಜಿಲ್ಲಾ ಕಸಾಪ ಗದಗ ಸಹಯೋಗದಲ್ಲಿ ತೋಂಟದ ಸಿದ್ಧಲಿಂಗಶ್ರೀ ಕನ್ನಡ ಭವನದಲ್ಲಿ ಜರುಗಿದ `ಆನಂದಕಂದ-ಕಾವ್ಯಾನಂದ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಟಗೇರಿ ಕೃಷ್ಣಶರ್ಮರ ಕಾವ್ಯದ ಜೀವಧಾತು ದೇಸೀಯತೆ. ಅಪ್ಪಟ ಉತ್ತರ ಕರ್ನಾಟಕದ ಮಣ್ಣಿನ ವಾಸನೆ ಅವರ ಕವಿತೆಯಲ್ಲಿದೆ. ನೆಲದ ಜನಪದ ಜೀವನವೇ ಅವರ ಕಾವ್ಯಸಂವಿಧಾನವಾಗಿದೆ. ಅವರ ಕಾವ್ಯವೂ ಉರ‍್ತ ಕರ್ನಾಟಕದ ಬದುಕಿನ ವಿಶ್ವಕೋಶದಂತೆ ಅಭಿವ್ಯಕ್ತಿಯಾಗಿದೆ. ಅಪ್ಪಟ ಜಾನಪದ ಹಾಡುಗಳನ್ನು ಕನ್ನಡ ಸಹೃದಯರಿಗೆ ನೀಡಿದ ಇವರ ಹಾಡುಗಳನ್ನು ಹುಕ್ಕೇರಿ ಬಾಳಪ್ಪನವರು ಹಾಡಿ ಪ್ರಸಿದ್ದರಾದರು ಎಂದು ನುಡಿದರು.
ಬೆಟಗೇರಿ ಕೃಷ್ಣಶರ್ಮ ಅವರು ರಚಿಸಿದ ಕವಿತೆಗಳನ್ನು ಕವಿಗಳಾದ ಎಲ್.ತಿಪ್ಪಾನಾಯ್ಕ, ಡಾ.ರಶ್ಮಿ ಅಂಗಡಿ, ಡಾ.ರಾಜೇಂದ್ರ ಗಡಾದ, ಪ್ರೊ.ಬಸವರಾಜ ನೆಲಜೆರಿ, ಪ್ರೊ.ಬಾಹುಬಲಿ ಜೈನರ, ಮಂಜುಳಾ ವೆಂಕಟೇಶಯ್ಯ, ಶಿಲ್ಪಾ ಮ್ಯಾಗೇರಿ, ಶಿವಾನಂದ ಗಿಡ್ನಂದಿ ಆನಂದಕಂದರ ಕವಿತೆಗಳ ವಾಚನ ಮಾಡಿದರು. ನೀಲಮ್ಮ ಅಂಗಡಿ ಹಾಗೂ ವೀರನಗೌಡ ಮಣಕವಾಡ ಡಾ.ಕೃಷ್ಣಶರ್ಮರ ಕಾವ್ಯಗಳನ್ನು ಸುಶ್ರಾವ್ಯವಾಗಿ ಹಾಡಿದರು.
ಗೌರವ ಕಾರ್ಯದರ್ಶಿ ಶಿವಾನಂದ ಗಿಡ್ನಂದಿ ಸ್ವಾಗತಿಸಿದರು. ಶ್ರೀಕಾಂತ ಬಡ್ಡೂರ ವಂದಿಸಿದರು. ಡಿ.ಎಸ್. ನಾಯಕ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಎಸ್. ಪಾಟೀಲ, ಎಸ್.ಎಸ್. ಕಳಸಾಪುರಶೆಟ್ರು, ಡಾ.ಜಿ.ಬಿ. ಪಾಟೀಲ, ಆರ್.ಡಿ. ಕಪ್ಪಲಿ, ಎಂ.ಎಚ್. ಹುಲ್ಲೂರ, ವಿ.ಎಸ್. ದಲಾಲಿ, ಶೈಲಜಾ ಗಿಡ್ನಂದಿ, ಭಾರತಿ ಗಡ್ಡಿ, ವೀಣಾ ನೀಲಗುಂದ, ಸುಧಾ ಕಂಗೂರಿ, ಶಾರದಾ ಬಾಣದ, ಬಸವರಾಜ ಗಣಪ್ಪನವರ, ಸಿಕೆಎಚ್ ಶಾಸ್ತಿ(ಕಡಣಿ), ಪ್ರೊ. ಶಕುಂತಲಾ ಸಿಂಧೂರ, ಡಾ.ಈರಣ್ಣ ಕೋರಚಗಾಂವ, ಪ್ರ.ತೋ. ನಾರಾಯಣಪುರ, ಬಿ.ಎಸ್. ಹಿಂಡಿ, ಕೆ.ಎಸ್. ಗುಗ್ಗರಿ, ಡಿ.ಪಿ. ರವೀಂದ್ರ ಅರ್ಜುನ ಶಿಂಗಟರಾಯನಕೇರಿ, ಎಸ್.ಎಫ್. ಭಜಂತ್ರಿ, ಪ್ರಸನ್ನಕುಮಾರ ಇನಾಮದಾರ, ಸಿ.ಎಂ. ಮಾರನಬಸರಿ, ಟಿಕಾನದಾರ, ಅ.ದ ಕಟ್ಟೀಮನಿ, ಈರಣ್ಣ ಜಿರಂಕಳಿ, ಅಮರೇಶ ರಾಂಪುರ, ಅಕ್ಕಮ್ಮ ಪಾರ್ವತಿಮಠ, ಗುರುದೇವಿ, ವಿ. ಭಾಗ್ಯಶ್ರೀ ಹುರಕಡ್ಲಿ, ಎಚ್.ಆಯ್. ಮಣಕವಾಡ, ಎಂ.ಎಫ್. ಡೋಣಿ, ಎಚ್.ವಿ. ಕೋಗನವರ, ವೆಂಕಟೇಶ ಗುಡಿ, ಷಡಕ್ಷರಿ ಮೆಣಸಿನಕಾಯಿ, ಡಿ.ಎಸ್. ಬಾಪುರಿ, ಟಿ.ಎಂ. ದಂಡಗಿ, ಅಮರೇಶ ರಾಂಪೂರ ಮೊದಲಾದವರು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಕೃಷ್ಣಶರ್ಮರ ಜೀವನ ಸಂಕಟಗಳಿಂದ ಕೂಡಿತ್ತು. ಆದರೆ ಕನ್ನಡದ ಪ್ರೀತಿ ಅವರನ್ನು ಸಾಹಿತ್ಯ ಲೋಕಕ್ಕೆ ಕರೆತಂದಿತು. ಕನ್ನಡ ಸಾಹಿತ್ಯದ ವಿವಿಧ ಮಜಲುಗಳಲ್ಲಿ ಕೃಷಿ ಮಾಡಿದ ಕೃಷ್ಣಶರ್ಮರು ಪತ್ರಿಕೋದ್ಯಮದಲ್ಲಿ ಬಹುಕಾಲ ಕಾರ್ಯನಿರ್ವಹಿಸಿ ಜನಜಾಗೃತಿ ಉಂಟು ಮಾಡುವ ಕಾರ್ಯವನ್ನು ಮಾಡಿದರು. ಅವರ ಕವಿತೆಗಳನ್ನು ಓದುವ ಮೂಲಕ ಇಂದಿನ ಕವಿಗಳು ಪ್ರೇರಣೆಗೊಂಡು ಜನಮುಖಿ ಸಾಹಿತ್ಯ ರಚನೆಗೆ ಮುಂದಾಗಬೇಕು ಎಂದರು.