ವಿಜಯಸಾಕ್ಷಿ ಸುದ್ದಿ, ಗದಗ : ಹುಲಕೋಟಿಯ ರೂರಲ್ ಇಂಜಿನೀಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವತಿಯಿಂದ ಐ.ಸಿ.ಟಿ ಅಕಾಡೆಮಿಯ ಸಹಯೋಗದೊಂದಿಗೆ ಅಮೆಜಾನ್ ವೆಬ್ ಸರ್ವಿಸಸ್ ಕ್ಲೌಡ ಪ್ರ್ಯಾಕ್ಟೀಷನರ್ ಎಂಬ ವಿಷಯದ ಬಗ್ಗೆ ಐದು ದಿನಗಳ ಅಧ್ಯಾಪಕರ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟನೆಗೊಂಡಿತು.
ಕಾರ್ಯಕ್ರಮದ ಪ್ರೋಗ್ರಾಮ್ ಕೊಆರ್ಡಿನೇಟರ್, ಕಂಪ್ಯೂಟರ್ ಸೈನ್ಸ್ ವಿಭಾಗದ ಎಸ್.ಎಚ್. ಅಂಗಡಿ ಮಾತನಾಡಿ, ಬೋಧನಾ ವಿಭಾಗದ ಸದಸ್ಯರು ವಿದ್ಯಾರ್ಥಿಗಳಿಗೆ ಕ್ಲೌಡ್ ಕಂಪ್ಯೂಟಿಂಗ್ ನ ಪರಿಕಲ್ಪನೆಗಳನ್ನು ತಮ್ಮ ಪಠ್ಯಕ್ರಮದಲ್ಲಿ ಅಳವಡಿಸಿ, ಉದ್ಯಮದ ಪ್ರವೃತ್ತಿಗಳೊಂದಿಗೆ ನವೀಕೃತವಾಗಿರಲು ಈ ಅಧ್ಯಾಪಕರ ಅಭಿವೃದ್ಧಿ ತರಬೇತಿಯನ್ನು ಬಳಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ವಿ.ಎಮ್. ಪಾಟೀಲ, ಐಸಿಟಿ ಸಂಯೋಜಕ ಮತ್ತು ಐಸಿಟಿ ಅಕಾಡೆಮಿಯ ಸಂಪನ್ಮೂಲ ವ್ಯಕ್ತಿ ಆದಿತ್ಯ ಝಾ ಮಾತನಾಡಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಅನುದಾನದಡಿಯಲ್ಲಿ ಬರುವ ಅಫೀಲಿಯೆಟೆಡ್ ಕಾಲೇಜುಗಳ ಹಾಗೂ ಅಟೊನೋಮಸ್ ಕಾಲೇಜುಗಳ ಭೋದಕ ವರ್ಗದವರು, ಶಿಕ್ಷಕರು ಪಾಲ್ಗೊಂಡಿದ್ದರು.
ಕಂಪ್ಯೂಟರ್ ಸೈನ್ಸ್ ವಿಭಾಗದ ಎಮ್.ವಿ. ಉಮಾರಾಣಿ, ಸಂಗಮೇಶ ಕೆ, ಶಶಿಧರ ಎಚ್., ಶ್ವೇತಾ ಎನ್, ನೇಹಾಭಾನು ಎಚ್, ರಾಘವೇಂದ್ರ ಎಸ್, ರಾಕೇಶ, ಶ್ರೀಕಾಂತ ಎಮ್, ವಿದ್ಯಾರ್ಥಿ ಪ್ರತಿನಿಧಿಗಳಾದ ಸಾತ್ವಿಕಾ, ವರ್ಷಾ, ಸಾನಿಯಾ, ಲಕ್ಷ್ಮಿ, ನಿತಿನ್, ರಶ್ಮಿ ಮುಂತಾದವರು ಪಾಲ್ಗೊಂಡಿದ್ದರು.