ವಿಜಯಸಾಕ್ಷಿ ಸುದ್ದಿ, ಮುಳಗುಂದ : ಸತ್ಯದ ಹಾದಿಯಲ್ಲಿ, ಸಮಾಜದ ಒಳತಿಗಾಗಿ, ಅಜ್ಞಾನದ ಕತ್ತಲೆಯನ್ನು ಕಳೆಯುತ್ತಾ ಬದುಕಿದವವರೇ ಸಂತರು, ಶರಣರು ಎಂದು ಅಣ್ಣಿಗೇರಿ ದಾಸೋಹಮಠದ ಶಿವಕುಮಾರ ಮಾಹಾಸ್ವಾಮಿಜಿ ಹೇಳಿದರು.
ಅವರು ಪಟ್ಟಣ ಸಮೀಪದ ನೀಲಗುಂದ ಗುದ್ನೇಶ್ವರಮಠದ ದಿವ್ಯ ಚೇತನ ಟ್ರಸ್ಟ್ ವತಿಯಿಂದ ಮಾಹಾ ಶಿವರಾತ್ರಿ ಅಂಗವಾಗಿ ಜರುಗಿದ `ಸಂತ ವಾಣಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಭುಲಿಂಗ ದೇವರು ಸಮಾಜದ ಒಳತಿಗಾಗಿ, ಸತ್ಯದ ಮಾರ್ಗದಲ್ಲಿ, ಜನರ ಕಷ್ಟ ಕಾರ್ಪಣ್ಯಗಳನ್ನು ಕಳೆಯುತ್ತಾ ಸುಜ್ಞಾನದ ಮಾರ್ಗದಲ್ಲಿ ಸಾಗುತ್ತಿದ್ದಾರೆ. ಇಂತಹ ಸಂತರು, ಶರಣರು ನಮ್ಮ ಬದುಕಿಗೆ ದಾರಿ ದೀಪವಾಗಿದ್ದು, ತಮಗಾಗಿ ಏನನ್ನೂ ಬಯಸದೇ ಶಾಲಾ ಮಕ್ಕಳ ಅಭಿವೃದ್ಧಿ, ಅವರಿಗೆ ಸುಸಂಸ್ಕೃತ ವಿದ್ಯಾದಾನ ಮಾಡುವ ಮೂಲಕ ಈ ಭಾಗದ ಶರಣರಾಗಿದ್ದಾರೆ. ಇಂತಹ ನೆಲ, ಜಲ ಪಾವನವಾದಂತೆ ನಾವೆಲ್ಲರೂ ಪುಣ್ಯವಂತರು ಎಂದರು.
ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಮಾತನಾಡಿ, ನಾಡಿನಾದ್ಯಾಂತ ಸಾವಿರಾರು ಶರಣ ಶರಣೆಯರು ತಮ್ಮ ಬದುಕನ್ನು ಸಮಾಜದ, ಜನರ ಒಳಿತಿಗಾಗಿ ಸಮರ್ಪಿಸಿಕೊಂಡು ಸಮಾಜದ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಗಂಧದಂತೆ ತೇದವರು. ಇಂತಹ ಮಹನೀಯರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಿ, ಆಚರಣೆಯಲ್ಲಿ ತೋಡಗಿದಾಗ ಬದುಕು ಸುಂದರವಾಗುತ್ತದೆ ಎಂದರು.
ಸಾನಿಧ್ಯವನ್ನು ಧಾರವಾಡ ಮುರುಘಾಮಠ, ಮುಳಗುಂದ ಗವಿಮಠದ ಡಾ.ಮಲ್ಲಿಕಾರ್ಜುನ ಮಾಹಾಸ್ವಾಮೀಜಿ ವಹಿಸಿದ್ದರು. ಧಾರವಾಡ ಮುರುಘಾಮಠದ ಸಚ್ಚಿದಾನಂದ ದೇವರು, ರಾಮಣ್ಣಾ ಕಮಾಜಿ, ಬಸವರಾಜ ಬೆಂಡಿಗೇರಿ, ಚಿಂಚಲಿ ಗ್ರಾ.ಪಂ. ಅಧ್ಯಕ್ಷ ದೇವಮ್ಮಾ ಬಂಗಾರಿ ಇದ್ದರು.