ವಿಜಯಸಾಕ್ಷಿ ಸುದ್ದಿ, ಮುಳಗುಂದ : ವೇದಗಳ ಕಾಲದಿಂದಲೂ ಮಹಿಳೆಯರಿಗೆ ಪೂಜ್ಯನೀಯ ಸ್ಥಾನವಿದೆ. ಮಹಿಳೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಪಾದಾರ್ಪಣೆ ಮಾಡುತ್ತಾ ಸದೃಢಳಾಗಿ ಬೆಳೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಶಿಕ್ಷಕಿ ಪವಿತ್ರಾ ಮಟ್ಟಿ ಹೇಳಿದರು.
ಅವರು ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.1ರಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ಸಮಾಜದಲ್ಲಿ ಮಹಿಳೆ ಉನ್ನತ ಸ್ಥಾನ ಮಾನ ಪಡೆದಿದ್ದು, ಮಹಿಳೆಯರನ್ನು ಗೌರವದಿಂದ ಕಾಣಬೇಕು ಎಂದರು.
ಅಧ್ಯಕ್ಷತೆಯನ್ನು ಟಿ.ವೀಣಾ ವಹಿಸಿದ್ದರು. ಎಸ್.ಡಿ. ಪಂಡಿತ, ನಂದಾ ಮಟ್ಟಿ, ಶಭಾನಾ ಢಾಲಾಯತ, ಜ್ಯೋತಿ ಜಾಧಾವ, ಪವಿತ್ರಾ ಮಟ್ಟಿ, ಅಡುಗೆ ಸಿಬ್ಬಂದಿ ಸಂಕಮ್ಮಾ ಯಳವತ್ತಿ, ಮಾಬುಬ್ಬಿ ಹೊಸೂರ, ಲಕ್ಷ್ಮಿ ಬೆಂದ್ರೆ, ರೇಣುಕಾ ಬಗಾಡೆ, ಎಸ್‌ಡಿಎಂಸಿ ಅಧ್ಯಕ್ಷ ವಿ.ಡಿ. ಸಿದ್ದನಗೌಡರ, ಪ್ರಧಾನ ಗುರು ಪಿ.ಬಿ. ಕೆಂಚನಗೌಡರ, ಎಂ.ಎಂ. ಮೇಗಲಮನಿ, ಎಂ.ಎಂ. ಕೊಪ್ಪಳ, ಕೆ.ಎಂ. ಹೆರಕಲ್ ಪಾಲ್ಗೊಂಡಿದ್ದರು. ತೋಷಿನಾ ಖವಾಸ ಸ್ವಾಗತಿಸಿದರು. ಕುಸುಮಾ.ಎಂ.ಬಗಾಡೆ ನಿರೂಪಿಸಿದರು. ಶ್ರೀಧರ ಕರಿಗಾರ ವಂದಿಸಿದರು.