ಶ್ರೀ ಅಂಜನೇಯ ಸ್ವಾಮೀಯ ರಥೋತ್ಸವ

0
rathotsava
Spread the love

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ತಾಲೂಕಿನ ಬಾಲೇನಹಳ್ಳಿ ಗ್ರಾಮದ ಶ್ರೀ ಅಂಜನೇಯ ಸ್ವಾಮೀಯ 7ನೇ ವರ್ಷದ ರಥೋತ್ಸವ ಸಡಗರ-ಸಭ್ರಮದಿಂದ ಜರುಗಿತು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಅಂಜನೇಯ ಮೂರ್ತಿಯ ಮೆರವಣಿಗೆ, ಪಲ್ಲಕ್ಕಿ ಉತ್ಸವ, ನಂದಿಕೋಲು ಮೆರವಣಿಗೆ ನಡೆಯಿತು. ಭಕ್ತರು ದೇವಸ್ಥಾನದ ಗದ್ದುಗೆಗೆ ಪೂಜೆ ಸಲ್ಲಿಸಿ ಹರಕೆ ತೀರಿಸಿದರು.

Advertisement

ಮಹಾ ಶಿವರಾತ್ರಿ ಅಂಗವಾಗಿ ಬೆಳಿಗ್ಗೆ ಸಂಪ್ರದಾಯದಂತೆ ವಿಶೇಷ ಪೂಜಾ ಕಾರ್ಯಗಳು ನಡೆದವು. ಸಂಜೆ ಉತ್ಸವ ಮೂರ್ತಿಯನ್ನು ಪ್ರಭಾವಳಿಯಲ್ಲಿ ಅಲಂಕರಿಸಿ, ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಮೂಲಕ ತರಲಾಯಿತು. ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಗ್ರಾಮದ ಜಿ. ದೊಡ್ಡರಾಮಪ್ಪ, ಜಿ.ಕೆಂಚನಗೌಡ್ರು, ಜಿ.ರಾಮನಗೌಡ್ರು, ವಾಲ್ಮೀಕಿನಾಯಕ ಸಮಾಜದ ಮಾಜಿ ಅದ್ಯಕ್ಷ ಕೆ.ಉಚ್ಚೆಂಗೆಪ್ಪ, ಕಾರ್ಯದರ್ಶಿ ಎಚ್.ಕೆ. ಮಂಜುನಾಥ, ಉಪನ್ಯಾಸಕರಾದ ಎಚ್.ಕೊಟ್ರೇಶ, ಹರಿಯಮ್ಮನಹಳ್ಳಿ ಮಹಾಂತೇಶ, ಜಿ.ಶಿವನಗೌಡ, ಗ್ರಾ.ಪಂ ಸದಸ್ಯ ಶೆಟ್ಟಿನಾಯ್ಕ, ನಿವೃತ್ತ ಮುಖ್ಯ ಶಿಕ್ಷಕ ರೇವಣಸಿದ್ದಪ್ಪ, ಕೆಂಚಪ್ಪ, ಮಂಜಪ್ಪ, ರವಿ ಕುಮಾರ್, ಮೌನೇಶ್, ಮಹಾಲಿಂಗಪ್ಪ, ದೊಡ್ಡ ಹಾಲಪ್ಪ, ಅಶೋಕ್, ಜಗದೀಶ್ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here